Sadhguru Jaggi Vasudev: ಹಾಲಿವುಡ್ ಸಿನಿಮಾದಲ್ಲಿ ಸದ್ಗುರು ಜಗ್ಗಿ ವಾಸುದೇವ್! ವಿಡಿಯೋ ನೋಡಿ
ಬೆಂಗಳೂರು, ಫೆಬ್ರವರಿ.18: ಇತ್ತೀಚಿಗೆ ಬಿಡುಗಡೆಯಾದ ಹಾಲಿವುಡ್ ಸಿನಿಮಾ 'ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ' ನಲ್ಲಿ ನಟಿ ಜೆನ್ನಿಫರ್ ಲೋಪೆಜ್ ಜೊತೆಗೆ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸದ್ಗುರು ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ಮಹಿಳಾ ಪ್ರಾಧಾನ್ಯತೆಯ 'ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ' ಚಿತ್ರದಲ್ಲಿ ಬೆನ್ ಅಫ್ಲೆಕ್, ಟ್ರೆವರ್ ನೋಹ್, ಸೋಫಿಯಾ ವೆರ್ಗರಾ, ಕೇಕೆ ಪಾಲ್ಮರ್, ಪೋಸ್ಟ್ ಮ್ಯಾಲೋನ್ ಮತ್ತು ನೀಲ್ ಡಿಗ್ರಾಸ್ ಟೈಸನ್ ಸಹ ನಟಿಸಿದ್ದಾರೆ. ಇವರುಗಳ ಜೊತೆಗೆ ಇಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಕಾಣಿಸಿಕೊಂಡಿದ್ದಾರೆ.

'ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ' ಚಿತ್ರದಲ್ಲಿ ಇಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು 'ರಾಶಿಚಕ್ರ ಕೌನ್ಸಿಲ್' ಹೆಸರಿನ ಗುಂಪು ಪ್ರವೇಶ ಮಾಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಜೆನ್ನಿಫರ್ ಲೋಪೆಜ್ ಮತ್ತು ಆಕೆಯ ರಿಲೆಷನ್‌ಶಿಪ್‌ಗಳ ನಡುವಿನ ಸಮಸ್ಯೆಗಳು ಬಗ್ಗೆ ಚರ್ಚಿಸುವ ದೃಶ್ಯದಲ್ಲಿ ಸದ್ಗುರು ಪಾತ್ರ ನಿರ್ವಹಿಸಿದ್ದಾರೆ.
See who is in Hollywood.
— JANAKA (@immortalsutra) February 17, 2024
Sadhguru appeared in the Hollywood movie, 'This is Me... Now'. It's so exciting to see his role alongside other Hollywood stars. 🙌✨🤩 "You Shall Always Be Loved" ❤️🙏#sadhguru #SadhguruInHollywood pic.twitter.com/Hr7lBVkJby
'ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ' ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಭಾರತದಲ್ಲಿ ಮತ್ತು ಕೆಲವು ದೇಶಗಳಲ್ಲಿ ಖ್ಯಾತಿ ಪಡೆದಿರುವ ಜಗ್ಗಿ ವಾಸುದೇವ್ ಅವರ ಜನಪ್ರಿಯತೆಯನ್ನು ಇತರ ದೇಶಗಳಿಗೆ ಕೊಂಡೊಯ್ಯಲು ಇದು ಪಿಆರ್‌ಗಳ ಕೆಲಸ ಎಂದು ಹಲವರು ಹೇಳುತ್ತಾರೆ.
ಫೆಬ್ರವರಿ 16 ರಂದು 'ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ' ಚಿತ್ರ ಬಿಡುಗಡೆಯಾಗಿದೆ. ಅಮೆಜಾನ್ ಒರಿಜಿನಲ್, ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸಿನಿಮಾದಲ್ಲಿ ಅವರನ್ನು ಜಗ್ಗಿ ವಾಸುದೇವ್ ಅವರನ್ನು ನೋಡಿದ ಅನೇಕರು, "ಈ ಚಿತ್ರ ಯಾವುದು ಮತ್ತು ಸದ್ಗುರುಗಳು ಇಲ್ಲಿ ಏನು ಮಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications