'ಸರಿಗಮಪ' ಗ್ರ್ಯಾಂಡ್ ಫಿನಾಲೆ: ಟಿವಿಗೂ ಮೊದಲೇ ಲೈವ್ ಸ್ಟ್ರೀಮ್ ಇಲ್ಲಿ ನೋಡಿ! ಬಹುಮಾನ ಗೆಲ್ಲಿ..
ಬೆಂಗಳೂರು, ಮೇ 27: ಕನ್ನಡದ ರಿಯಾಲಿಟಿ ಶೋಗಳಲ್ಲಿ ಪ್ರಮುಖವಾಗಿ ಜನಮನಗೆದ್ದ 'ಸ ರಿ ಗ ಮ ಪ' ಜನಪ್ರಿಯ ಸಂಗೀತ ಕಾರ್ಯಕ್ರಮವಾಗಿದೆ. ಇದರ ಗ್ರ್ಯಾಂಡ್ ಫಿನಾಲ್ ಸಮೀಪಿಸಿದೆ. ಕಂಟೆಸ್ಟೆಂಟ್‌ಗಳು ಸಕಲ ತಯಾರಿಯಲ್ಲಿ ಮುಳುಗಿದ್ದಾರೆ. ಇದರ ಅಂತಿಮ ಸುತ್ತಿನ ಸ್ಪರ್ಧೆಯು 'ಅಂತರ್ಜಾಲದಲ್ಲಿ ವಿಡಿಯೊಗಳನ್ನು ನೇರ ಪ್ರಸಾರ ಮಾಡುವ ಹಾಗೂ ಬಹುಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ದೇಶದ ಅತಿದೊಡ್ಡ, ಸ್ವದೇಶಿ ಡಿಜಿಟಲ್ ವೇದಿಕೆಯಾಗಿರುವ ಝೀ5 (ZEE5)ನ ಜನಪ್ರಿಯ ವಾಹಿನಿ 'ಝೀ ಕನ್ನಡ'ದ (ZEE Kannada) ದಲ್ಲಿ ಪ್ರಸ್ತಾವಾಗಲಿದೆ.
ಹೌದು, ಮುಂದಿನ ತಿಂಗಳು ಜೂನ್ 05ರಂದು 'ಸ ರಿ ಗ ಮ ಪ' ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಅಂತಿಮ ಸುತ್ತಿನ ಸ್ಪರ್ಧೆ ನೋಡಲು ಪ್ರೇಕ್ಷಕ ವರ್ಗ ಕಾತರರದಿಂದ ಕಾಯುತ್ತಿದೆ. ಅವರಿಗೆ ಅನುಕೂಲವಾಗಲೆಂದು 'ಝೀ ಕನ್ನಡ'ದಲ್ಲಿ ನೇರ ಪ್ರಸಾರವಾಗುತ್ತಿದೆ ಎಂದು ತಿಳಿಸಲಾಗಿದೆ.

ಅಪಾರ ಸಂಖ್ಯೆಯಲ್ಲಿ ಸಂಗೀತ ಪ್ರಿಯ ಪ್ರೇಕ್ಷಕರನ್ನು ಆಕರ್ಷಿಸಿ ಮನರಂಜಿಸಲಿರುವ ಈ ಅಭೂತಪೂರ್ವ ಅವಿಸ್ಮರಣೀಯ ಕಾರ್ಯಕ್ರಮವು ಝೀ5 ವೇದಿಕೆಯ ಇತಿಹಾಸದಲ್ಲಿನ ಅತ್ಯಂತ ಮಹತ್ವಾಕಾಂಕ್ಷೆಯ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿ ಒಂದಾಗಿರಲಿದೆ. ಡಿಜಿಟಲ್ ಲೋಕದಲ್ಲಿ ಈ ಬಗೆಯ ನೇರ ಪ್ರಸಾರದ ಮೊದಲ ಕಾರ್ಯಕ್ರಮವೂ ಇದಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ರೋಚಕ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಇದು ಮುನ್ನುಡಿ ಬರೆಯಬಹುದೆಂದು ವಾಹಿನಿ ಹೇಳಿಕೊಂಡಿದೆ.
ಝೀ ಕನ್ನಡದ (ZEE Kannada) ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ 'ಸ ರಿ ಗ ಮ ಪ' ಕಾರ್ಯಕ್ರಮವು ರಾಜ್ಯದ ಸಾಂಸ್ಕೃತಿಕ ಲೋಕದಲ್ಲಿ ತನ್ನ ವಿಶಿಷ್ಟ ಛಾಪು ಮೂಡಿಸಿದೆ. ಲಕ್ಷಾಂತರ ಸಂಗೀತ ಪ್ರಿಯರ ಹೃದಯಗಳನ್ನು ಗೆದ್ದಿರುವ ಹೆಗ್ಗಳಿಕೆಯ ಈ ಕಾರ್ಯಕ್ರಮವು ಈಗ ಡಿಜಿಟಲ್ ಲೋಕದಲ್ಲೊಂದು ದಾಪುಗಾಲು ಹಾಕುತ್ತಿದೆ. ಟೆಲಿವಿಷನ್‌ನಲ್ಲಿ ಪ್ರಸಾರವಾಗುವ ಮುಂಚೆಯೇ ಝೀ5 (ZEE5) ನಲ್ಲಿ ಪ್ರಸಾರವಾಗಲಿದೆ. ಟಿವಿ ಗೂ ಮುನ್ನ ಈ ಡಿಜಿಟಲ್ ವೇದಿಕೆಯಲ್ಲಿ ಮೊದಲ ಬಾರಿಗೆ ಪ್ರಸಾರ ಮಾಡಲಾಗುತ್ತಿದೆ.

ಈ ವಾಹಿನಿಯು ತನ್ನೆಲ್ಲ ಚಂದಾದಾರರಿಗೆ ಈ ಜನಪ್ರಿಯ ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಪರ್ಧೆಯನ್ನು ಮುಂಚಿತವಾಗಿಯೇ ವೀಕ್ಷಿಸುವ ವಿಶೇಷ ಅವಕಾಶ ಕಲ್ಪಿಸಲಿದೆ. ಈ ಉಪಕ್ರಮವು ಡಿಜಿಟಲ್ ಮನರಂಜನೆಗೆ ಪ್ರಮುಖ ತಾಣವನ್ನಾಗಿ ಝೀ5 ವೇದಿಕೆಯ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.
ಸಂಗೀತ ಪ್ರಿಯರು ಈ ತಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸಲು ಝೀ5 (ZEE5), ಈ ಋತುವಿನ "ಅತ್ಯಂತ ಜನಪ್ರಿಯ ಗಾಯಕ"ನ ಆಯ್ಕೆ ಅವಕಾಶವನ್ನೂ ಸಹ ಒದಗಿಸಲಿದೆ. ಮೇ 14 ರಿಂದ ಆರಂಭವಾದ ಮತದಾನದ ಆಯ್ಕೆ ಪ್ರಕ್ರಿಯೆ ಜೂನ್ 5 ರಂದು ನಡೆಯಲಿರುವ ಗ್ರ್ಯಾಂಡ್ ಫಿನಾಲೆಯ 2 ದಿನ ಮೊದಲು ಕೊನೆಗೊಳ್ಳಲಿದೆ.
ವೀಕ್ಷಕರು 'ಜನಪ್ರಿಯ ಗಾಯಕ' ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ.
ಚಂದಾದಾರರಿಗೆ ಬಹುಮಾನ ಗೆಲ್ಲುವ ಅವಕಾಶ
ಇನ್ನೂ ಚಂದಾದಾರರು ತಮ್ಮ ಅಚ್ಚುಮೆಚ್ಚಿನ ಸ್ಪರ್ಧಿಗಳಿಗೆ ಮತ ಚಲಾಯಿಸಲು ಝೀ5 ಆ್ಯಪ್ (ZEE5 app) ಗೆ ಲಾಗಿನ್ ಆಗಬಹುದು. ಇದರಲ್ಲಿ ಭಾಗವಹಿಸುವವರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಒಬ್ಬ ಅದೃಷ್ಟಶಾಲಿ ಮತದಾರನು "ಅತ್ಯಂತ ನೆಚ್ಚಿನ ಮತದಾರ" ಅಭಿವಾದನಕ್ಕೂ ಪಾತ್ರವಾಗಬಹುದು. ಅಪರೂಪದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಪಡೆಯಬಹುದು.
ತೀರ್ಪುಗಾರರು, ನಿರೂಪಕರ ಮಾಹಿತಿ
ಜನಪ್ರಿಯ ಕಾರ್ಯಕ್ರಮ ನಿರೂಪಕಿ ಅನುಶ್ರೀ ಅವರು ನಡೆಸಿಕೊಡಲಿರುವ ಈ ಅಂತಿಮ ಸುತ್ತಿನಲ್ಲಿ ಕನ್ನಡ ಸಂಗೀತ ಲೋಕದ ದಂತಕಥೆಗಳಾಗಿರುವ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಸಂಗೀತದ ಬಗೆಗಿನ ಅವರ ಅಪಾರ ಪರಿಣತಿ ಮತ್ತು ವರ್ಚಸ್ಸಿನ ವ್ಯಕ್ತಿತ್ವವು ಅಸಂಖ್ಯಾತ ಮಹತ್ವಾಕಾಂಕ್ಷಿ ಗಾಯಕರನ್ನು ಕೈಹಿಡಿದು ಮುನ್ನಡೆಸಿದೆ. ಅವರ ಉಪಸ್ಥಿತಿಯು ಈ ಕಾರ್ಯಕ್ರಮದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದು, ಸಂಗೀತ ಪ್ರಿಯರನ್ನು ನಿರಂತರವಾಗಿ ಚುಂಬಕದಂತೆ ಸೆಳೆಯುತ್ತಲೇ ಇದೆ.
ಝೀ5 ಮತ್ತು ಝೀ ಕನ್ನಡದ ವಹಿವಾಟು ಮುಖ್ಯಸ್ಥ ದೀಪಕ್ ಶ್ರೀರಾಮುಲು ಅವರು ಪ್ರತಿಕ್ರಿಯಿಸಿ, ಝೀ5 ನಲ್ಲಿ ಪ್ರಸಾರವಾಗುವ ಪ್ರಾದೇಶಿಕ ಭಾಷೆಗಳಲ್ಲಿನ ಕಾರ್ಯಕ್ರಮಗಳು ನಮ್ಮ ವಹಿವಾಟು ಬೆಳವಣಿಗೆಯ ಹಾಗೂ ಹೆಚ್ಚೆಚ್ಚು ವೀಕ್ಷಕರನ್ನು ತಲುಪುವುದರ ಪ್ರಮುಖ ಆಧಾರಸ್ತಂಭವಾಗಿ ಮುಂದುವರೆದಿದೆ. ಸಮುದಾಯಗಳನ್ನು ಸಂಪರ್ಕಿಸುವಲ್ಲಿ ಸಂಗೀತವು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಝೀ ಕನ್ನಡದ 'ಸ.ರಿ.ಗ.ಮ.ಪ' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯ ಸಂಭ್ರಮಾಚರಣೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಕರುನಾಡಿನ ಈ ಸಂಗೀತ ಸಂಭ್ರಮವನ್ನು ವಿಶ್ವದಾದ್ಯಂತದ ಪ್ರೇಕ್ಷಕರಿಗೆ ನೇರ ಪ್ರಸಾರ ಮಾಡಲು ನಾವು ಹೆಮ್ಮೆಪಡುತ್ತೇವೆ. ಝೀ5 ನಲ್ಲಿ ಮೊದಲ ಬಾರಿಗೆ ಡಿಜಿಟಲ್ ನೇರ ಪ್ರಸಾರದೊಂದಿಗೆ ನಾವು ಪ್ರಾದೇಶಿಕ ಭಾಷೆಗಳಲ್ಲಿನ ಮನರಂಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ. ಇದು ಹಿಂದೆಂದಿಗಿಂತಲೂ ಹೆಚ್ಚು ತನ್ಮಯಗೊಳಿಸುವ, ಪರಸ್ಪರ ಸಂವಹನದ ಮತ್ತು ಈ ಮೊದಲಿಗಿಂತ ಹೆಚ್ಚು ಸುಲಭವಾಗಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಸದವಕಾಶ ಒದಗಿಸಲಿದೆ.
ಪ್ರೇಕ್ಷಕರ ಮುಂದೆ ಗ್ರ್ಯಾಂಡ್ ಫಿನಾಲೆ
ಡಿಜಿಟಲ್ ಲೋಕದಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ನೇರವಾಗಿ ಇದೇ ಮೊದಲ ಬಾರಿಗೆ ನೇರವಾಗಿ ಪ್ರಸಾರ ಮಾಡಲಾಗುತ್ತಿದೆ. ಟೆಲಿವಿಷನ್ ಕಾರ್ಯಕ್ರಮಗಳ ವೀಕ್ಷಕರು ಪ್ರಾದೇಶಿಕ ಸಂಸ್ಕೃತಿ ಮತ್ತು ಸಂಗೀತದ ಜೊತೆ ಯಾವ ಬಗೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ನಾವು ಮರು ವ್ಯಾಖ್ಯಾನಿಸುವುದನ್ನು ಮುಂದುವರಿಸುವುದರಿಂದ ಇದು ಭವಿಷ್ಯದಲ್ಲಿ ಅನೇಕ ಇಂತಹ ಹಲವಾರು ರೋಚಕ ಅವಕಾಶಗಳಿಗೆ ಭೂಮಿಕೆ ಸಿದ್ಧಪಡಿಸಲಿದೆ ಎಂದು ಅವರು ಹೇಳಿದರು.
ಪ್ರಚಾರ ಅಭಿಯಾನದ ಭಾಗವಾಗಿ ಬಳಕೆದಾರರು ಝೀ5 ಆ್ಯಪ್ (ZEE5 App) ಬಳಸಲು ಕೇವಲ ₹99ಕ್ಕೆ ಚಂದಾದಾರರಾಗಲು ಉತ್ತೇಜಿಸಲಾಗುತ್ತಿದೆ. ಈ ಮೂಲಕ ವಿಶೇಷ ಸೌಲಭ್ಯ ಪಡೆಯುವ ಹಾಗೂ ಆಕರ್ಷಕ ಪುರಷ್ಕಾರ ಪಡೆಯುವ ಅವಕಾಶ ಪಡೆಯಲಿದ್ದಾರೆ. ಈ ಮೂಲಕ ಈ ಸಂಭ್ರಮಾಚರಣೆ ಇನ್ನಷ್ಟು ಲಾಭದಾಯಕವಾಗಿರಲಿದೆ.
ಜೂನ್ 5ರಂದು ರಂದು ಝೀ5 (ZEE5) ನಲ್ಲಿ ಮಾತ್ರ ಪ್ರಸಾರವಾಗಲಿರುವ ಕಾರ್ಯಕ್ರಮದಲ್ಲಿ ಪ್ರತಿಭೆ, ಸಂಸ್ಕೃತಿ ಮತ್ತು ಸಮುದಾಯದ ಸುಮಧುರ ಸಂಭ್ರಮಾಚರಣೆಗೆ ನಮ್ಮೊಂದಿಗೆ ಜೊತೆಯಾಗಿರಲು ಮರೆಯಬೇಡಿ. ಇದು ಡಿಜಿಟಲ್ ಕ್ಷೇತ್ರದಲ್ಲಿನ ಈ ಬಗೆಯ ಮೊದಲ ಉಪಕ್ರಮವಾಗಿದ್ದು, ಝೀ5 (ZEE5) ಗೆ ಚಂದಾದಾರರಾಗುವುದರಿಂದ ನಾಡಿನ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷ ಪ್ರವೇಶ ದೊರೆಯುವುದರ ಜೊತೆಗೆ ವೀಕ್ಷಕರಿಗೆ ಹಲವಾರು ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುಬಹುದೆಂದು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಝೀ5 ಅನ್ನು ಸಾಮಾಜಿಕ ಜಾತಲಾಣದಲ್ಲಿ ಫಾಲೋ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications