ಭಾರತೀಯ ಸಿನಿಮಾ ಸೌಂಡ್‌ಗೆ ಆಸ್ಕರ್ ಅಂಗಳ ಫುಲ್ ಶೇಕ್!
ಭಾರತೀಯ ಸಿನಿಮಾ ರಂಗದಲ್ಲಿ 'ಆರ್‌ಆರ್‌ಆರ್' ಒಂದು ಹೊಸ ಇತಿಹಾಸವನ್ನೇ ಸೃಷ್ಟಿಸಿ ನೂರಾರು ದಾಖಲೆ ಬರೆದಿದೆ. ಹಣ ಮಾಡುವ ವಿಚಾರದಿಂದ ಹಿಡಿದು, ಆಸ್ಕರ್ ಪ್ರಶಸ್ತಿಯ ತನಕ 'RRR' ಸೃಷ್ಟಿ ಮಾಡಿರುವ ದಾಖಲೆಗಳು, ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಸದ್ದು ಮಾಡಿವೆ. ಹೀಗಿದ್ದಾಗ ಇಂದು ನಡೆದ 96ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲೂ 'ಆರ್‌ಆರ್‌ಆರ್' ಅಬ್ಬರಿಸಿದೆ.
ಇಂದು ಅದ್ಧೂರಿಯಾಗಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದೆ. ಸಿನಿಮಾ ವಲಯದ ಅತ್ಯುನ್ನತ ಪ್ರಶಸ್ತಿ ಎಂದೇ 'ಆಸ್ಕರ್ ಅವಾರ್ಡ್' ಚಿರಪರಿಚಿತ. ಪ್ರತಿಯೊಬ್ಬ ಸಿನಿಮಾ ನಟ ಮತ್ತು ನಟಿ ಸೇರಿದಂತೆ ನಿರ್ದೇಶಕರ ಪಾಲಿಗೆ ಕನಸಿನ ಕೂಸು 'ಆಸ್ಕರ್ ಪ್ರಶಸ್ತಿ' ಎನ್ನಬಹುದು.

ಇಂತಹ ಕಾರ್ಯಕ್ರಮದಲ್ಲಿ ಭಾರತದ ಸಿನಿಮಾಗೂ ದೊಡ್ಡ ಬೆಲೆಯೇ ಸಿಕ್ಕಿದೆ. ಅದರಲ್ಲೂ 'ಆರ್‌ಆರ್‌ಆರ್' ಸಿನಿಮಾ ಇಂದಿಗೂ ತನ್ನ ಖದರ್ ತೋರಿಸ್ತಾ ಇದೆ. ಇಂದು ಆರ್‌ಆರ್‌ಆರ್‌ಗೆ ಅದ್ಭುತ ಗೌರವ ಸಿಕ್ಕಿದೆ. ಹಾಗಾದರೆ ಏನದು ವಿಶೇಷ ಗೌರವ? ಮುಂದೆ ಓದಿ.
'RRR' ದಾಖಲೆಗಳು ಹತ್ತಾರು!
ಅಷ್ಟಕ್ಕೂ 2022 ರಲ್ಲಿ ಬಿಡುಗಡೆ ಆಗಿದ್ದ 'RRR' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಹಾಗೇ ಈ ಸಿನಿಮಾ ಬಾಕ್ಸ್ ಆಫೀಸ್ ಅಖಾಡದಲ್ಲಿ ಕೂಡ ಸಾವಿರ ಕೋಟಿ ರೂಪಾಯಿ ವಸೂಲಿ ಮಾಡಿ ಭರ್ಜರಿ ಸೌಂಡ್ ಮಾಡಿದೆ. ಪ್ರಮುಖವಾಗಿ ಈ ಸಿನಿಮಾದ 'ನಾಟು ನಾಟು' ಹಾಡಿಗೆ ಕಳೆದ ವರ್ಷ ಆಸ್ಕರ್ ಪ್ರಶಸ್ತಿ ಸಿಕ್ಕಿದೆ.
Naatu Naatu Got special shout out during the presentation of the Best Original Song at the 96th #Oscars
— Sanjay.D.Luffy (@Sanjayred9y) March 11, 2024
The Impact of RRR🥵🔥#RRRMovie #RamCharan pic.twitter.com/gykPIlSnDA
ಈ ವರ್ಷ ಕೂಡ 'RRR' ಸಿನಿಮಾದ 'ನಾಟು ನಾಟು' ಹಾಡಿನ ದೃಶ್ಯವನ್ನು ಆಸ್ಕರ್ ಸ್ಟೇಜ್ ಮೇಲೆ ಹಾಕಲಾಗಿತ್ತು. ಇದನ್ನು ನೋಡಿದ ಕೋಟಿ, ಕೋಟಿ ಭಾರತೀಯರು ಫುಲ್ ಖುಷ್ ಆಗಿದ್ದಾರೆ. 'ಈ ಕ್ಷಣ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ' ಅಂತಾ ಅಭಿಮಾನಿಗಳು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.
ಭಾರತೀಯ ಸಿನಿಮಾಗೆ ಭಾರಿ ಗೌರವ
ಇದರ ಜೊತೆ ಸಿನಿಮಾಗಳಲ್ಲಿ ಫೈಟಿಂಗ್ ಸೀನ್‌ಗಳಲ್ಲಿ ನಿರ್ದೇಶಕರು ಹಾಗೂ ನಟರು ಎಷ್ಟು ಕಷ್ಟಪಡುತ್ತಾರೆ? ಅನ್ನೋದನ್ನ ತೋರಿಸುವ ಕ್ಲಿಪ್ ಕೂಡ ವೈರಲ್ ಆಗುತ್ತಿದೆ. ಈ ಮೂಲಕ ವಿಶೇಷ ಗೌರವವನ್ನು ಇದೀಗ ಆರ್‌ಆರ್‌ಆರ್ ಸಿನಿಮಾ ತಂಡಕ್ಕೆ ತೋರಿಸಿದ್ದಾರೆ 'ಆಸ್ಕರ್'ನ ಆಯೋಜಕರು.
India's Pride @RRRMovie's 2 Action Sequences Visuals Played In Best Stunts Tribute AV On #Oscars Stage & #NaatuNaatu Visuals Also Played On Stage At #Oscars2024 @TheAcademy 🌊
— NTR Trends (@NTRFanTrends) March 11, 2024
THE GLOBAL SENSATION - #RRRMovie 🐯#JrNTR #ManOfMassesNTR @tarak9999 pic.twitter.com/pc82hTaZkR
'RRR' ಸಿನಿಮಾ ಭಾರತ ಮಾತ್ರವಲ್ಲ ಜಾಗತಿಕವಾಗಿ ಕೂಡ ದೊಡ್ಡ ಸದ್ದು ಮಾಡಿತ್ತು. ಈ ಸಿನಿಮಾಗೆ ಎಸ್.ಎಸ್. ರಾಜಮೌಳಿ ನಿರ್ದೇಶನ & ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಅವರ ನಟನೆ ಇತ್ತು. ಹಲವು ವರ್ಷಗಳ ಬಳಿಕ ಭಾರತಕ್ಕೆ ಇದೇ ಆರ್‌ಆರ್‌ಆರ್ ಆಸ್ಕರ್ ಪ್ರಶಸ್ತಿಯನ್ನು ತಂದುಕೊಟ್ಟಿತ್ತು.
ಹಾಲಿವುಡ್ ಸಿನಿ ರಂಗ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯ ಹೊಂದಿದೆ ಅಮೆರಿಕ ಮೂಲದ ಸಿನಿಮಾ ರಂಗ ಎಂಬ ಹೆಸರು ಇದ್ದರೂ ಹಾಲಿವುಡ್ ಜಗತ್ತಿನಾದ್ಯಂತ, ಭಾರಿ ದೊಡ್ಡ ಸಂಚಲನ ಸೃಷ್ಟಿಸಿದೆ. ಒಂದೊಂದು ಸಿನಿಮಾಗೆ ಸಾವಿರ ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಹಾಲಿವುಡ್ ಸಿನಿಮಾ ಮಂದಿ ಸದಾ ಹೈಲೆವೆಲ್‌ನಲ್ಲಿ ಇರುತ್ತಾರೆ. ಈ ಸಿನಿಮಾ ರಂಗದಲ್ಲಿ ಬರುವ ಚಿತ್ರಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ 'ಆಸ್ಕರ್ ಪ್ರಶಸ್ತಿ' ಎನ್ನಬಹುದು. ಹೀಗೆ ಇಂತಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್‌ಆರ್‌ಆರ್ ಸಿನಿಮಾಗೆ ವಿಶಿಷ್ಟ ಗೌರವ ಸಿಕ್ಕಿದ್ದು ಈಗ ಸ್ಪೆಷಲ್ ಎನಿಸಿಕೊಂಡಿದೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications