Rocking Star Yash: ಯಶ್ ಹೆಸರು ತಪ್ಪಾಗಿ ಹೇಳಿದ್ದಕ್ಕೆ ಗರಂ ಆದ ರಾಧಿಕಾ, ರಿಪ್ಲೈ ವಿಡಿಯೋ ವೈರಲ್
ರಾಕಿಂಗ್ ಸ್ಟಾರ್ ಯಶ್ ಹೆಸರು ಬದಲಾಯಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಯಶ್ ಅವರ ಹೆಸರು ಬದಲಾಯಿಸಿಕೊಂಡಿದ್ದರ ಹಿಂದಿನ ರೀಸನ್ ತುಂಬಾ ಜನಕ್ಕೆ ಗೊತ್ತಿಲ್ಲ. ನವೀನ್ ಸರ್ ಎಲ್ಲಿ ಮೇಡಂ ಅಂತ ಕೇಳಿದ್ದಕ್ಕೆ ಈಚೆಗೆ ನಟಿ ಹಾಗೂ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಗರಂ ಆಗಿದ್ದಾರೆ. ಯಾರ್ ರೀ ನವೀನ್ ಅವರು ಲೀಗಲ್ ಆಗಿ ಹೆಸರು ಚೇಂಜ್ ಮಾಡಿಕೊಂಡಿದ್ದಾರೆ. ಯಶ್ ಅಷ್ಟೇ ಅಂತ ಹೇಳಿದ್ದರು. ಮುಂದುವರಿದು ಅಲ್ಲ ಮೇಡಂ ನಿಮಗೆ ಮಾತ್ರ, ಮನೆಯಲ್ಲಿ ನವೀನ್ ಅಲ್ವಾ ಅಂತ ಕೇಳಿದ್ದಕ್ಕೂ ಇಲ್ಲ ಯಶ್... ಯಶ್ ಅಂತ ರಿಪ್ಲೈ ಕೊಟ್ಟಿದ್ದರು. ಹಾಗಾದರೆ, ಯಶ್ ಅವರನ್ನು ಮನೆಯಲ್ಲಿ ಏನಂತ ಕರಿತಾರೆ, ಯಶ್ ಅವರು ಹೆಸರು ಬದಲಾಯಿಸಿಕೊಳ್ಳಲು ಮುಖ್ಯ ಕಾರಣವೇನು, ಈಗ ಚರ್ಚೆಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ನಟ ಯಶ್ ಇವಾಗ ಫ್ಯಾನ್ ಇಂಡಿಯಾ ಸ್ಟಾರ್. ಕನ್ನಡ ಚಿತ್ರರಂಗದಿಂದ ಹಂತ ಹಂತವಾಗಿ ಬೆಳೆದ ಯಶ್ ಅವರು ರಂಗಭೂಮಿ ಹಾಗೂ ಧಾರಾವಾಹಿಯ ಹಿನ್ನೆಲೆಯಿಂದ ಬಂದವರು. ಯಶ್ ಸಿನಿಮಾದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದಾರೆ. ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ ನಾನು ಬಂದ ಮೇಲೆ ನಂದೇ ಹವಾ ಅನ್ನೋದು ಕೇವಲ ಯಶ್ ಸಿನಿಮಾ ಡೈಲಾಗ್ ಆಗಿ ಉಳಿದಿಲ್ಲ. ಅದೊಂದು ಟ್ರೆಂಡ್ ಆಗಿದೆ. ಕೆಜಿಎಫ್ ಸಿನಿಮಾದ ನಂತರ ಅವರು ದೇಶದಾದ್ಯಂತ ಸಿನಿ ಪ್ರಿಯರಿಗೆ ಹತ್ತಿರವಾಗಿದ್ದಾರೆ. ಯಶ್ ಅಭಿಮಾನಿಗಳು ಇದೀಗ ಯಶ್ ಅವರ ಟಾಕ್ಸಿಕ್ ಸಿನಿಮಾಗಾಗಿ ಸಿಕ್ಕಾಪಟ್ಟೆ ವೈಟ್ ಮಾಡ್ತಿದ್ದಾರೆ.

ಯಶ್ ಫ್ಯಾನ್ ಇಂಡಿಯಾ ಸ್ಟಾರ್ ಆದ ಬೆನ್ನಲ್ಲೇ ಅವರ ಕ್ರೇಜ್ ಹಾಗೂ ಫ್ಯಾನ್ಸ್ ಫಾಲೋಯಿಂಗ್ ದೇಶದಾದ್ಯಂತ ಹೆಚ್ಚಾಗಿದೆ. ಈ ರೀತಿ ಇರುವಾಗಲೇ ಪತ್ರಕರ್ತರೊಬ್ಬರು ಯಶ್ ಅವರ ಪತ್ನಿ ರಾಧಿಕಾ ಯಶ್ ಅವರನ್ನು ಕೆಣಕಿದ್ದು, ಅದಕ್ಕೆ ರಾಧಿಕಾ ಅವರು ನುಗುತ್ತಲ್ಲೇ ತಿರುಗೇಟು ಕೊಟ್ಟಿದ್ದಾರೆ. ಅವರ ಹೆಸರು ಯಶ್ ಅಷ್ಟೇ ನವೀನ್ ಅಲ್ಲ. ಅವರು ಕಾನೂನಿನ ಪ್ರಕಾರ ಹೆಸರು ಬದಲಾಯಿಸಿಕೊಂಡು ಆಗಿದೆ ಎಂದಿದ್ದಾರೆ.
Rocking Star Yash: ಯಶ್ ಹೆಸರು ಬದಲಾಗಿದ್ದು ಹೇಗೆ ?
ಯಶ್ ಅವರೇ ಅವರ ಹೆಸರು ಬದಲಾಗಿದ್ದರ ಬಗ್ಗೆ ಈ ಹಿಂದೆಯೂ ಮಾತನಾಡಿದ್ದರು. ಈಗ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಹುಟ್ಟು ಹೆಸರು ಅಥವಾ ಜಾತಕದಲ್ಲಿ ವೈ /ಯ ಅಂತ ಬಂದಿತ್ತು. ಮನೆಯಲ್ಲಿ ಯಶ್ವಂತ್, ಯಶ್ ಅಂತ ನನ್ನ ತಾತಾ ಕರಿತಿದ್ದರು ಅಂತ ರಾಕಿಂಗ್ ಸ್ಟಾರ್ ಯಶ್ ಅವರೇ ಹೇಳಿಕೊಂಡಿದ್ದಾರೆ. ಜನವರಿಯಲ್ಲಿ ಹುಟ್ಟಿದ್ದರಿಂದ ನವೀನ, ನವೀನ್ ಅಂತ ಹೆಸರಿಟ್ಟಿದ್ದರು. ಸಿನಿಮಾ ಇಂಡಸ್ಟ್ರಿಗೆ ಬಂದಾಗ ನಾಟಕ ಹಾಗೂ ಸೀರಿಯಲ್‌ನಲ್ಲಿ ಹೆಸರು ಕೊಡುವಾಗ ನವೀನ್ ಅಂತ ತುಂಬಾ ಜನ ಇದ್ದರು. ಕನ್ಫೂಸ್ ಆಗಬಾರದು ಅಂತ ಯಶ್ ಅಂತ ಹೆಸರು ಚೇಂಜ್ ಮಾಡಿಕೊಂಡಿರುವುದಾಗಿ ಯಶ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗ್ತಿದೆ.

ಟಾಕ್ಸಿಕ್: ಕೆಜಿಎಫ್‌ನ ನಂತರ ಯಶ್ ಅವರ ಟಾಕ್ಸಿಕ್ ಸಿನಿಮಾಗಾಗಿ ಕನ್ನಡದ ಸಿನಿ ಪ್ರೇಕ್ಷಕರು ಹಾಗೂ ಯಶ್ ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಟಾಕ್ಸಿಕ್ ಸಿನಿಮಾಗಾಗಿ ಯಶ್ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಈಚೆಗೆ ಟಾಕ್ಸಿಕ್ ಸಿನಿಮಾದ ಚಿತ್ರೀಕರಣ ವೇಳೆಯಲ್ಲಿ ವಿವಾದಕ್ಕೂ ಕಾರಣವಾಗಿದೆ.












Click it and Unblock the Notifications