Yash: ನಮ್ಮ ಮೆಟ್ರೋದಲ್ಲಿ ರಾಕಿಂಗ್ ಸ್ಟಾರ್ ಯಶ್‌ಗೆ ಸರ್ಪ್ರೈಸ್ ಗಿಫ್ಟ್: ಬೆಂಗಳೂರು ಮೆಟ್ರೋ ಇತಿಹಾಸದಲ್ಲೇ ಮೊದಲು
Yash Birthday: ನಟ ರಾಕಿಂಗ್ ಸ್ಟಾರ್ ಯಶ್‌ಗೆ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಜನವರಿ 8 ರಂದು ನಟ ಯಶ್ ಅವರ 40ನೇ ಹುಟ್ಟುಹಬ್ಬವಾಗಿದ್ದು, ಕಳೆದ ಒಂದುವಾರದಿಂದಲೇ ಅವರ ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯಶ್ ಅವರ ಪೋಸ್ಟರ್‌ಗಳ ದರ್ಬಾರ್ ನಡೆದಿದೆ. ಇದು ಬೆಂಗಳೂರು ನಮ್ಮ ಮೆಟ್ರೋದ ಇತಿಹಾಸದಲ್ಲೇ ಮೊದಲು ಎನ್ನುವುದು ಮತ್ತೊಂದು ವಿಶೇಷವಾಗಿದೆ.
ರಾಕಿಭಾಯ್ ಖ್ಯಾತಿಯ ಯಶ್ ಅವರ ಜನ್ಮದಿನಾಚರಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಬೆಂಗಳೂರಿನ ಅಭಿಮಾನಿಗಳು ರೈಲುಗಳಲ್ಲಿ ಯಶ್ ಅವರ ವಿಶೇಷ ಪೋಸ್ಟ್‌ಗಳನ್ನು ಅಂಟಿಸುವ ಮೂಲಕ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಈ ಪೋಸ್ಟರ್‌ಗಳ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ನಮ್ಮ ಮೆಟ್ರೋ ರೈಲು ಬೋಗಿಗಳ ಮೇಲಿನ ಯಶ್ ಪೋಸ್ಟ್ ಇದೀಗ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಏನಿದೆ ಹಾಗೂ ನಟ ಯಶ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ನೀಡಿದ ಗಿಫ್ಟ್ ಏನು ಎನ್ನುವ ವಿವರ ನೋಡೋಣ.

ಜನವರಿ 8ಕ್ಕೆ ನಟ ಯಶ್ ಅವರ ಹುಟ್ಟುಹಬ್ಬ ಕಳೆದ ಎರಡು ವರ್ಷಗಳಿಂದಲೂ ನಟ ಯಶ್ ಅವರು, ಬಹಿರಂಗವಾಗಿ ಅವರ ಅಭಿಮಾನಿಗಳೊಂದಿಗೆ ಜನ್ಮದಿನಾಚರಣೆ ಆಚರಿಸಿಕೊಂಡಿಲ್ಲ. ಹೀಗಾಗಿ, ಈ ಬಾರಿ ಅವರ ಅಭಿಮಾನಿಗಳು ಅತ್ಯಂತ ಹೆಚ್ಚು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಬೆಂಗಳೂರು ನಗರದಾದ್ಯಂತ ಹೋರ್ಡಿಂಗ್‌ಗಳ ಮೂಲಕ ಯಶ್ ಹುಟ್ಟುಹಬ್ಬಕ್ಕೆ ಪೋಸ್ಟರ್‌ಗಳನ್ನು ಹಂಚಿಕೊಳ್ಳಲಾಗಿದೆ.
ಇದೀಗ ವೈರಲ್ ಆಗಿರುವ ವೀಡಿಯೊದಲ್ಲಿ ಅಭಿಮಾನಿಗಳು ಮೆಟ್ರೋ ರೈಲಿನಲ್ಲಿ ಪೋಸ್ಟರ್‌ಗಳನ್ನು ಅಂಟಿಸುತ್ತಿರುವುದು ಇದೆ. ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರು ಸೇರಿಕೊಂಡು ಬೆಂಗಳೂರಿನ ನೇರಳೆ ಬಣ್ಣದ ಮಾರ್ಗದ ಮೆಟ್ರೋ ರೈಲು ಬೋಗಿಗಳ ಮೇಲೆ ಈ ಪೋಸ್ಟರ್ ಅಂಟಿಸಿದ್ದಾರೆ. ಬೆಂಗಳೂರಿನ ನಮ್ಮ ಮೆಟ್ರೋದ ಮೈಸೂರು ರಸ್ತೆಯಿಂದ ವೈಟ್‌ಫೀಲ್ಡ್ ಮಾರ್ಗದ ಬೋಗಿಗಳ ಮೇಲೆ ಯಶ್ ಅವರ ಬೃಹತ್ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಮೆಟ್ರೋದಲ್ಲಿ ಯಶ್ ಪೋಸ್ಟರ್
ನಮ್ಮ ಮೆಟ್ರೋದ ರೈಲು ಬೋಗಿಗಳ ಮೇಲೆ ಯಶ್ ಅವರ ವಿವಿಧ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದಕ್ಕೆ ಅಂದಾಜು 10 ರಿಂದ 12 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವ ಸಾಧ್ಯತೆ ಇದೆ ಎಂದು ಫಿಲ್ಮಿಬೀಟ್ ಕನ್ನಡ ವರದಿ ಮಾಡಿದೆ. ಬೆಂಗಳೂರು ನಮ್ಮ ಮೆಟ್ರೋದ ಮೈಸೂರು ರಸ್ತೆಯಿಂದ ವೈಟ್‌ಫೀಲ್ಡ್ ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ರೈಲಿನಲ್ಲಿ 6 ಬೋಗಿಗಳಿವೆ. ಒಂದು ಬೋಗಿಯ ಉದ್ದ 20 ರಿಂದ 22 ಮೀ.ಗಳಿದ್ದು, 6 ಬೋಗಿಗಳ ಉದ್ದ ಅಂದಾಜು 120 ರಿಂದ 130 ಮೀಟರ್ ಇದೆ. ಈ ಎಲ್ಲಾ ಬೋಗಿಗಳಿಗೂ ವಿಭಿನ್ನವಾದ ಡಿಸೈನ್ ಮಾಡಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇನ್ನು ನಟ ಯಶ್ ಅವರ ಪೋಸ್ಟರ್‌ಗಳನ್ನು ನಮ್ಮ ಮೆಟ್ರೋದಲ್ಲಿ ಅಂಟಿಸಲಾಗಿರುವ ವಿಡಿಯೋವನ್ನುKVN Productions (@KvnProductions) ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಪೋಸ್ಟರ್‌ಗಳ ಫೋಟೋ ಸಹ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿವೆ.
ಯಶ್ ಅವರ ಈ ವಿಶೇಷ ಪೋಸ್ಟರ್‌ಗಳು ಅವರ ಅಭಿಮಾನಿಗಳಲ್ಲಿ ಸಂತೋಷವನ್ನುಂಟು ಮಾಡಿದೆ. ಈ ಪೋಸ್ಟರ್‌ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications