ರಾತ್ರಿ ಮಲಗುವಾಗ ಪತ್ನಿ ಕಾಲಿಗೆ ನಮಸ್ಕರಿಸುತ್ತೇನೆ ಎಂದಿದ್ದೇಕೆ "ರಾಬರ್ಟ್" ನಟ?
ಬಹುಭಾಷಾ ನಟ ಹಾಗೂ ಬಿಜೆಪಿ ರಾಜಕಾರಣಿ ರವಿ ಕಿಶನ್ (actor Ravi Kishan) ಅವರು ತಮ್ಮ ವೈಯಕ್ತಿಕ ವಿಚಾರವೊಂದನ್ನು ಹೇಳಿಕೊಂಡು ಸುದ್ದಿಯಾಗಿದ್ದಾರೆ. ಭೋಜ್‌ಪುರಿ, ತೆಲುಗು, ಬಾಲಿವುಡ್, ಕನ್ನಡ ಸಿನಿಮಾಗಳಲ್ಲಿ ರವಿ ಕಿಶನ್ ನಟಿಸಿದ್ದಾರೆ. ಸುದೀಪ್ ನಟನೆಯ 'ಹೆಬ್ಬುಲಿ', ದರ್ಶನ್ ನಟನೆಯ 'ರಾಬರ್ಟ್' ಸಿನಿಮಾಗಳಲ್ಲಿ ಇವರು ವಿಲನ್ ಆಗಿ ಮಿಂಚಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇವರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟ ರವಿ ಕಿಶನ್ ಅವರು ಪ್ರತಿ ದಿನವೂ ರಾತ್ರಿ ಮಲಗುವ ಮುನ್ನ ತಮ್ಮ ಪತ್ನಿ ಕಾಲಿಗೆ ನಮಸ್ಕರಿಸುವುದಾಗಿ ರಿವೀಲ್ ಮಾಡಿದ್ದಾರೆ. ನಟನ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಸಾಮಾನ್ಯವಾಗಿ ಪತ್ನಿಯರು ಪತಿಯ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವ ಸಂಪ್ರದಾಯವಿದೆ. ಆದರೆ ರವಿ ಕಿಶನ್ ಅವರು ತಮ್ಮ ಪತ್ನಿ ಕಾಲಿಗೆ ನಮಸ್ಕರಿಸುವುದಾಗಿ ಕಪಿಲ್ ಶರ್ಮಾ ಶೋನಲ್ಲಿ ಬಹಿರಂಗವಾಗಿ ಹೇಳಿದ್ದಾರೆ. 'ಸನ್ ಆಫ್ ಸರ್ದಾರ್-2' ಸಿನಿಮಾದ ಪ್ರಚಾರದ ವೇಳೆ ಈ ಮಾತು ಹೇಳಿದ್ದಾರೆ. ಹಾಸ್ಯನಟ ಕಪಿಲ್ ಶರ್ಮಾ ಅವರ ನೆಟ್‌ಫ್ಲಿಕ್ಸ್ ಶೋ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ರವಿ ಕಿಶನ್ ಕೂಡ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರತಿ ರಾತ್ರಿ ಮಲಗುವ ಮುನ್ನ ರವಿ ಅವರ ಪತ್ನಿ ಪ್ರೀತಿ ಕಿಶನ್ ಅವರ ಪಾದಗಳನ್ನು ಮುಟ್ಟುತ್ತಾರೆ ಎಂದು ಕಪಿಲ್ ಹೇಳಿದ್ದರು. ಇದಕ್ಕೆ ನಟ ರವಿ ಹೌದು ಎಂದಿದ್ದಾರೆ.

'ನಿಜ ಹೇಳಬೇಕಂದ್ರೆ ನನ್ನ ಪತ್ನಿ ಎಂದಿಗೂ ಅವಳ ಪಾದಗಳನ್ನು ಮುಟ್ಟಲು ಬಿಡುವುದಿಲ್ಲ. ಹಾಗಾಗಿ ಅವರು ನಿದ್ರಿಸುವಾಗ ಕಾಲಿಗೆ ನಮಸ್ಕರಿಸುತ್ತೇನೆ ಎಂದಿದ್ದಾರೆ. ಅದನ್ನು ಕೇಳಿ ನಟಿ ಅರ್ಚನಾ ಪುರಾನ್ ಸಿಂಗ್ "ಇದು ತುಂಬಾ ಚೆನ್ನಾಗಿದೆ. ಏನು ಸಮಸ್ಯೆ?" ಎಂದು ಕೇಳಿದರು. ಕಪಿಲ್ ಕೂಡ ಎಷ್ಟು ಸಿಹಿಯಾಗಿದೆ? ಎಂದು ಪ್ರತಿಕ್ರಿಯಿಸಿದರು. ಆಗ ರವಿ ಕಿಶನ್ ತಮ್ಮ ಪತ್ನಿ ಪ್ರೀತಿ ಕಿಶನ್ ಅವರ ಪಾದಗಳನ್ನು ಪ್ರತೀ ರಾತ್ರಿ ಮಲಗುವ ಮೊದಲು ಸ್ಪರ್ಶಿಸಲು ಕಾರಣವೂ ಬಿಚ್ಚಿಟ್ಟಿದ್ದಾರೆ.
ಏನೂ ಇಲ್ಲದಾಗ ಜೊತೆಯಲ್ಲಿದ್ದಳು!
'ಹಾಗೆ ಮಾಡುವುದು ನಾನು ಅವಳಿಗೆ ತೋರಿಸುವ ಕೃತಜ್ಞತೆ ಮತ್ತು ಗೌರವದ ಸಂಕೇತ ಎಂದು ಹೇಳಿದ್ದಾರೆ. ನನ್ನ ಬಳಿ ಹಣ ಅಥವಾ ಬೇರೇನೂ ಇಲ್ಲದಿದ್ದಾಗ ಅವಳು ನನ್ನ ಸಂಗಾತಿಯಾಗಿದ್ದಳು. ಅಂದಿನಿಂದಲೂ ಅವಳು ನನ್ನನ್ನು ಬಿಟ್ಟು ಹೋಗಲಿಲ್ಲ. ಇಂದು, ನಾನು ಏನೇ ಆಗಿದ್ದರೂ ಆಕೆ ನನ್ನೊಂದಿಗಿದ್ದಾಳೆ. ಅವಳು ನನಗೆ ಜೀವನದಲ್ಲಿ ಸಾಥ್ ನೀಡಿದ್ದು, ನಾನು ಇಂದು ಹೀಗೆ ಇರುವುದಕ್ಕೆ ಅವಳೇ ಕಾರಣ. ಅವಳು ನನ್ನನ್ನು ಹೇಗೆಲ್ಲ ನಿರ್ವಹಿಸಿದ್ದಾಳೆ? ನಾನು ಅವಳ ಪಾದಗಳನ್ನು ಮುಟ್ಟಬೇಕು, ಅವಳು ಅದಕ್ಕೆ ಅರ್ಹಳು' ಎಂದು ರವಿ ಕಿಶನ್ ಭಾವನಾತ್ಮಕ ವಿಚಾರ ಹೇಳಿದ್ದಾರೆ.
'ಈ ಸಂಪ್ರದಾಯವನ್ನು ಪ್ರತಿದಿನವೂ ಅನುಸರಿಸಲು ಪ್ರಯತ್ನಿಸಿದರೂ, ಹೆಚ್ಚಿನ ಬಾರಿ ಪ್ರೀತಿ ಅವರು ನಿರಾಕರಿಸುತ್ತಾರೆ' ಎಂದಿದ್ದಾರೆ. ಈ ಮಾತು ಕೇಳಿ ಪ್ರೇಕ್ಷಕರು ಮತ್ತು ಕಾರ್ಯಕ್ರಮದಲ್ಲಿದ್ದವರೂ ಖುಷಿಪಟ್ಟರು. ಆದರೆ ನಟ ಅಜಯ್ ದೇವಗನ್ ಹಾಸ್ಯಾತ್ಮಕವಾಗಿ ಒಬ್ಬ ವ್ಯಕ್ತಿಯು ಹೆಚ್ಚು ಅಪರಾಧಿಯಾಗಿ ಅವನು ತನ್ನ ಹೆಂಡತಿಯ ಪಾದಗಳನ್ನು ಮುಟ್ಟುತ್ತಾನೆ ಎಂದು ಜೋಕ್ ಮಾಡಿದ್ದಾರೆ. ರವಿ ಕಿಶನ್ ಅವರು ತಮ್ಮ ಬಾಲ್ಯದ ಪ್ರೇಯಸಿ ಪ್ರೀತಿ ಅವರನ್ನು 1993ರಲ್ಲಿ ವಿವಾಹವಾಗಿದ್ದರು. ಅವರಿಗೆ ನಾಲ್ವರು ಮಕ್ಕಳು ಇದ್ದಾರೆ. ತನ್ನ ಪತ್ನಿಗೆ ಅವರು ಈ ರೀತಿ ಗೌರವ ನೀಡುತ್ತಿರುವುದು ಅವರ ಸಂಬಂಧದ ಬಲ ಎಂದು ಹೇಳಲಾಗುತ್ತಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications