Oscar Award 2026: ಆಸ್ಕರ್ 2026 ರೇಸ್‌ನಲ್ಲಿ ಕಾಂತಾರ ಚಾಪ್ಟರ್ 1
Oscar Award 2026: ಡಿವೈನ್ ಸ್ಟಾರ್ ನಟ ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್ 1 ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ದು, ಇದೀಗ ಈ ಸಿನಿಮಾ ಆಸ್ಕರ್ ರೇಸ್ಗೆ ಪ್ರವೇಶ ಮಾಡಿದೆ. ನಾಮನಿರ್ದೇಶನಗಳು ಜನವರಿ 22ರಂದು ಪ್ರಕಟ ಆಗಲಿದ್ದು, ಜ್ಯೂರಿ ಹಂತದಲ್ಲಿ ಇನ್ನೂ ಪರಿಗಣನೆ ಪ್ರಕ್ರಿಯೆ ನಡೆಯಬೇಕಿದೆ.
ರಿಷಬ್ ಶೆಟ್ಟಿ ಹಾಗೂ ಅನುಪಮ್ ಖೇರ್ ಅಭಿನಯದ ಚಿತ್ರಗಳು ಅಕಾಡೆಮಿ ವಿಧಿಸಿದ ಕಠಿಣ ಮಾನದಂಡಗಳನ್ನು ಪೂರೈಸಿದ್ದು, 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅರ್ಹತೆ ಪಡೆದ 201 ಚಲನಚಿತ್ರಗ ಪಟ್ಟಿಗೆ ಸೇರ್ಪಡೆ ಆಗಿವೆ.

ಭಾರತೀಯ ಸಿನಿಮಾ ಜಾಗತಿಕ ವೇದಿಕೆಯತ್ತ ಮತ್ತೊಂದು ಹೆಜ್ಜೆ ಇಟ್ಟಿದೆ. 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅರ್ಹತೆ ಪಡೆದಿರುವ 201 ಚಲನಚಿತ್ರಗಳ ಪಟ್ಟಿಗೆ ಎರಡು ಭಾರತೀಯ ಚಿತ್ರಗಳು ಅಧಿಕೃತವಾಗಿ ಸೇರಿವೆ. ರಿಷಬ್ ಶೆಟ್ಟಿ ಅವರ 'ಕಾಂತಾರ ಚಾಪ್ಟರ್ 1' ಮತ್ತು ಅನುಪಮ್ ಖೇರ್ ಅವರ 'ತನ್ವಿ ದಿ ಗ್ರೇಟ್' ಚಿತ್ರಗಳು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪರಿಗಣನೆಗೆ ಅರ್ಹತೆ ಪಡೆದುಕೊಂಡಿವೆ.
ನೀರಜ್ ಘಾಯವಾನ್ ಅವರ 'ಹೋಮ್‌ಬೌಂಡ್' ಸಿನಿಮಾ ಆಸ್ಕರ್ 2026ಕ್ಕೆ ಭಾರತದಿಂದ ಅಧಿಕೃತ ಪ್ರವೇಶವಾಗಿದ್ದು, ಅಂತಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಮುಂದಿನ ಹಂತಕ್ಕೂ ಆಯ್ಕೆ ಆಗಿದೆ. ಇದೇ ವೇಳೆ ಭಾರತದಿಂದ ಇನ್ನೆರಡು ಚಿತ್ರಗಳು ಆಸ್ಕರ್ ಸ್ಪರ್ಧೆಗೆ ಸೇರ್ಪಡೆಯಾಗಿವೆ. ರಿಷಬ್ ಶೆಟ್ಟಿ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ 'ಕಾಂತಾರ: ಚಾಪ್ಟರ್ 1' ಹಾಗೂ ಅನುಪಮ್ ಖೇರ್ ಅವರ 'ತನ್ವಿ ದಿ ಗ್ರೇಟ್' ಚಿತ್ರಗಳು ಕೂಡ ಈ ಸಾಲಿನಲ್ಲಿವೆ.
ರಿಷಬ್ ಶೆಟ್ಟಿ ಅವರು 'ಕಾಂತಾರ' ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಬಳಿಕ 'ಕಾಂತಾರ: ಚಾಪ್ಟರ್ 1' ಸಿನಿಮಾ ನಿರ್ದೇಶನ ಮಾಡುವ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದರು. ಇದು ಬಾಕ್ಸ್ ಆಫೀಸ್ನಲ್ಲಿ 850 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಬಾಚಿದ ಹೆಗ್ಗಳಿಕೆ ಪಡೆದಿಕೊಂಡಿದೆ. ಒಟಿಟಿಯಲ್ಲೂ ಕೂಡ ಬಿಡುಗಡೆಯಾಗಿದ್ದು, ಇದೀಗ ಈ ಸಿನಿಮಾ ಸಿನಿಮಾ ಆಸ್ಕರ್ ರೇಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.
'ಹೊಂಬಾಳೆ ಫಿಲ್ಮ್ಸ್ ವಿಜಯ್ ಕಿರಗಂದೂರು ಅವರು 'ಕಾಂತಾರ: ಚಾಪ್ಟರ್ 1' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಮೊದಲು 'ಆರ್ಆರ್ಆರ್' ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಅವಾರ್ಡ್ ಬಂದಿತ್ತು. ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆ ಮಾಡಿ ರೇಸ್‌ನಲ್ಲಿ ಈ ಹಾಡು ಸ್ಥಾನ ಪಡೆದುಕೊಂಡಿತ್ತು. 'ಕಾಂತಾರ: ಚಾಪ್ಟರ್ 1' ಚಿತ್ರವನ್ನು ರಿಷಬ್ ನಿರ್ದೇಶನ ಮಾಡಿ, ನಟಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ.
ಪ್ರಮುಖ ಅರ್ಹತಾ ಮಾನದಂಡಗಳು
ಪ್ರದರ್ಶನ ಸ್ವರೂಪ: ಅತ್ಯುತ್ತಮ ಚಿತ್ರ ವಿಭಾಗಕ್ಕೆ ಅರ್ಹತೆ ಪಡೆಯಲು ಚಿತ್ರವನ್ನು ಮಾನ್ಯಗೊಂಡ ಪ್ರದರ್ಶನ ಸ್ವರೂಪದಲ್ಲಿ ಪ್ರದರ್ಶಿಸಿರಬೇಕು. ಸಾಮಾನ್ಯವಾಗಿ 35mm, 70mm ಅಥವಾ ಅಕಾಡೆಮಿ ಅಂಗೀಕರಿಸಿದ ಡಿಜಿಟಲ್ ಸ್ವರೂಪದಲ್ಲಿ ಪ್ರದರ್ಶಿಸಲ್ಪಟ್ಟಿರಬೇಕು.
ಚಿತ್ರಮಂದಿರಗಳಲ್ಲಿ ಪ್ರದರ್ಶನ: ಯಾವುದೇ ಸಿನಿಮಾ ಅತ್ಯುತ್ತಮ ಚಿತ್ರ ವಿಭಾಗಕ್ಕೆ ಅರ್ಹತೆ ಪಡೆಯಲು, ಅದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿರಬೇಕು. ಜೊತೆಗೆ ನಿರ್ಮಾಪಕರು ಅಕಾಡೆಮಿ ಪ್ರಾತಿನಿಧ್ಯ ಮತ್ತು ಸೇರ್ಪಡೆ ಮಾನದಂಡಗಳ ಪ್ರವೇಶ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ.
ಯುಎಸ್‌ನಲ್ಲಿ ಬಿಡುಗಡೆ: ಚಲನಚಿತ್ರಗಳು ಅಕಾಡೆಮಿ ನಿಗದಿಪಡಿಸಿರುವ ನಾಲ್ಕು ಸೇರ್ಪಡೆ ಮಾನದಂಡಗಳಲ್ಲಿ ಕನಿಷ್ಠ ಎರಡು ಮಾನದಂಡಗಳನ್ನು ಪೂರೈಸಿರಬೇಕು. ಅಲ್ಲದೇ, 2025ರಲ್ಲಿ ಮೊದಲ ಬಿಡುಗಡೆಯಾದ 45 ದಿನಗಳಲ್ಲಿ ಯುಎಸ್ ಟಾಪ್ 50 ಮಾರುಕಟ್ಟೆಗಳಲ್ಲಿ ಕನಿಷ್ಠ 10 ಮಾರುಕಟ್ಟೆಗಳಲ್ಲಿ ಅರ್ಹತೆಯ ಚಿತ್ರಮಂದಿರದಲ್ಲಿ ಪ್ರದರ್ಶನವನ್ನು ಪೂರ್ಣಗೊಳಿಸಿರಬೇಕು.
ಅಕಾಡೆಮಿ ಸದಸ್ಯರ ಪ್ರದರ್ಶನ: ಅಕಾಡೆಮಿ ಸದಸ್ಯರಿಗಾಗಿ ನಿರ್ಮಾಪಕರು ಸಾಮಾನ್ಯವಾಗಿ ಖಾಸಗಿ ಪ್ರದರ್ಶನಗಳನ್ನು ಆಯೋಜಿಸುತ್ತಾರೆ ಮತ್ತು ಚಿತ್ರಗಳ ಸ್ಕ್ರೀನರ್‌ಗಳನ್ನು ಕೂಡ ಕಳುಹಿಸುತ್ತಾರೆ.
ಆಸ್ಕರ್ ಪ್ರಶಸ್ತಿಯನ್ನು ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುತ್ತದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಮತ್ತು ನಟಿ, ಅತ್ಯತ್ತಮ ಚಿತ್ರಕಥೆ, ಅತ್ಯುತ್ತಮ ಆನಿಮೇಟಿಡ್ ಚಿತ್ರ, ಅತ್ಯುತ್ತಮ ಕಿರುಚಿತ್ರ, ಹೀಗೆ ಪ್ರಸ್ತುತ 24 ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications