Rishab Shetty: ‘ಕಾಂತಾರ’ ರಿಷಬ್ ಶೆಟ್ಟಿ ಸಾಧನೆಗೆ ಸಾಟಿ ಇಲ್ಲ, ಮಮ್ಮುಟ್ಟಿ & ಮೆಸ್ಸಿಯನ್ನೇ ಸೋಲಿಸಿದ ಧೀರ!

'ಕಾಂತಾರ' ಸಿನಿಮಾ ಮೂಲಕ ಕನ್ನಡ ನಾಡು ಮಾತ್ರವಲ್ಲ ಇಡೀ ಜಗತ್ತಿನ ಹೃದಯ ಗೆದ್ದು, ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದರು ನಟ ರಿಷಬ್ ಶೆಟ್ಟರು. ಇಂತಹ ಮಹಾನ್ ನಟನಿಗೆ ಇದೀಗ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿದೆ. ಅತಿ ಕಿರಿಯ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಪಡೆದು ಮಿಂಚಿದ್ದಾರೆ ನಟ ರಿಷಬ್ ಶೆಟ್ಟಿ ಅವರು. ಹಾಗಿದ್ರೆ ಈ ಪ್ರಶಸ್ತಿ ರಿಷಬ್ ಶೆಟ್ಟಿ ಅವರಿಗೆ ಸುಲಭವಾಗಿ ಸಿಕ್ಕಿದೆಯಾ? ಚಾನ್ಸೆ ಇಲ್ಲ, ಹತ್ತಾರು ಘಾಟನುಘಟಿ ಹೀರೋಗಳನ್ನ ಹಿಂದೆ ಹಾಕಿಯೇ ನಟ ರಿಷಬ್ ಶೆಟ್ಟಿ ರಾಷ್ಟ್ರೀಯ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ರಿಷಬ್ ಶೆಟ್ಟಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಬೆಳೆದಿದ್ದು, ಅವರ ಸಿನಿಮಾ ಕರಿಯರ್ ರಾರಾಜಿಸ್ತಿದೆ. ಅದ್ರಲ್ಲೂ ಕಾಂತಾರ ಸಿನಿಮಾಗೆ ಸಿಕ್ಕ, ಅಭೂತ ಪೂರ್ವ ಬೆಂಬಲ ರಿಷಬ್ ಶೆಟ್ಟಿ ಅವರ ಸಿನಿಮಾ ಬದುಕಿಗೆ ದೊಡ್ಡ ತಿರುವು ನೀಡಿದೆ. ಹೀಗಿದ್ದಾಗಲೇ ಬ್ರೇಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದ್ದು, ನಟ ರಿಷಬ್ ಶೆಟ್ಟಿ ಅವರು ಅದೆಷ್ಟೋ ವರ್ಷಗಳ ನಂತರ ಕನ್ನಡ ಸಿನಿಮಾ ಇಂಡಸ್ಟ್ರಿಗಾಗಿ ಒಂದು ರಾಷ್ಟ್ರ ಪ್ರಶಸ್ತಿ ಗೆದ್ದು ತಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಈ ಸಾಲಿನಲ್ಲಿ 7 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿರುವುದು ಸಂತಸದ ತಂದಿದೆ. ಹಾಗಾದ್ರೆ ರಿಷಬ್ ಶೆಟ್ಟಿ ಈ ಪ್ರಶಸ್ತಿ ಪಡೆಯಲು ಯಾವ ದೊಡ್ಡ ದೊಡ್ಡ ನಟರ ಜೊತೆ ಪೈಪೋಟಿ ನಡೆಸಿದ್ದರು ಗೊತ್ತೆ? ಮುಂದೆ ಓದಿ.

Rishab Shetty Lifetime Achievement By Kantara Movie

ಮಮ್ಮುಟಿ ಅವರನ್ನೂ ಹಿಂದಿಕ್ಕಿದ ರಿಷಬ್ ಶೆಟ್ಟಿ!

ಭಾರತದ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಟ್ಟಿಯಲ್ಲಿ ಅತ್ಯುತ್ತಮ ನಟ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಅತ್ಯುತ್ತಮ ನಟನೆಗಾಗಿ 'ಕಾಂತಾರಾ' ಸಿನಿಮಾದಿಂದ ರಿಷಬ್‌ ಶೆಟ್ಟರ ಜೊತೆ ಮಲೆಯಾಳಂ ಭಾಷೆಯ ದಿಗ್ಗಜ ನಟರಾದ ಮಮ್ಮುಟಿ ಭರ್ಜರಿ ಪೈಪೋಟಿ ನೀಡಿದ್ದರು. 'ನನ್ಪಾಕಲ್ ನೆರತು ಮಾಯಕ್ಕಂ' ಚಿತ್ರದ ನಟನೆಗೆ, ಅತ್ಯುತ್ತಮ ನಟ ಪ್ರಶಸ್ತಿ ರೇಸ್‌ನಲ್ಲಿ ಇದ್ದರು ನಟ ಮಮ್ಮುಟಿ ಅವರು. ಹಾಗೇ ಇದೇ ವೇಳೆ ವಿಕ್ರಾಂತ್ ಮಾಸ್ಸೆ ಕೂಡ ಈ ರೇಸ್‌ನಲ್ಲಿ ಇದ್ದರು. ಇಬ್ಬರನ್ನೂ ಹಿಂದಿಕ್ಕಿ ಇದೀಗ ನಟ ರಿಷಬ್ ಶೆಟ್ಟರು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

23 ವರ್ಷಗಳ ನಂತರ ಪ್ರಶಸ್ತಿ!

ಅಷ್ಟಕ್ಕೂ, 78ನೇ ಸ್ವಾತಂತ್ರ್ಯ ದಿನಾಚರಣೆಯ ಬೆನ್ನಲ್ಲೇ ಇಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾದ ಅತ್ಯುತ್ತಮ ಸಿನಿಮಾ, ನಟ & ನಟಿಯರ ಪಟ್ಟಿ ಘೋಷಣೆ ಆಗಿದೆ. ದೆಹಲಿಯಲ್ಲಿ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ ಘೋಷಣೆ ಆಗಿದೆ. ಅದರಲ್ಲೂ 'ಕಾಂತಾರ' ಸಿನಿಮಾದ ಮೂಲಕ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಿಷಬ್ ಶೆಟ್ಟರು, ಭರ್ಜರಿ 23 ವರ್ಷದ ಬರ ನೀಗಿಸಿ ಕನ್ನಡಕ್ಕಾಗಿ ಅತ್ಯುತ್ತಮ ಸಿನಿಮಾ ರಾಷ್ಟ್ರೀಯ ಪ್ರಶಸ್ತಿ ಗೆದ್ದು ತಂದಿದ್ದಾರೆ.

2001 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ದ್ವೀಪ' ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿತ್ತು. ಇಷ್ಟು ದೊಡ್ಡ ಗ್ಯಾಪ್ ಬಳಿಕ ಈಗ 2024ನೇ ಸಾಲಲ್ಲಿ ಕಾಂತಾರ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಮತ್ತೊಂದು ವಿಶೇಷತೆ ಏನು ಅಂದರೆ ಇದೇ ಸಿನಿಮಾ ನಟನೆಗಾಗಿ, ನಟ ರಿಷಬ್ ಶೆಟ್ಟಿ ಅವರಿಗೆ ಇದೀಗ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಸಿಕ್ಕಿರುವುದು ಭರ್ಜರಿ ಖುಷಿ ನೀಡಿದೆ. ಇದು ಕನ್ನಡ ಸಿನಿಮಾ ಅಭಿಮಾನಿಗಳಲ್ಲೂ ಸಂಭ್ರಮ ತಂದಿದ್ದು, ಚರ್ಚೆಯೂ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+