Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ ಎರಡನೇ ವಾರದಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಳ್ಳಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ರಶ್ಮಿಕಾ ಮಂದಣ್ಣ ಅಥವಾ ವಿಜಯ್ ದೇವರಕೊಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನ್ಯೂಸ್ 18 ತೆಲುಗು ವರದಿಯ ಪ್ರಕಾರ, ಫೆಬ್ರವರಿ ಎರಡನೇ ವಾರದಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಆದರೆ ಅವರ ನಿಶ್ಚಿತಾರ್ಥದ ಬಗ್ಗೆ ಅಧಿಕೃತವಾಗಿ ಇಬ್ಬರು ಘೋಷಣೆ ಮಾಡಿಲ್ಲ.

Reports Suggest Vijay Deverakonda and Rashmika Mandannas Engagement Set for February

ರಶ್ಮಿಕಾ ಇತ್ತೀಚೆಗೆ ಅನಿಮಲ್ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಅನಿಮಲ್ ಸಿನಿಮಾ ಬಗ್ಗೆ ಹಲವು ಮಹಿಳಾ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೂ, ಚಿತ್ರ ಬಾಕ್ಸಾಫಿಸ್‌ನಲ್ಲಿ ಅತ್ಯುತ್ತಮ ಗಳಿಕೆ ಮಾಡಿದೆ. ರಶ್ಮಿಕಾ ಮಂದಣ್ಣ ಪ್ರಸ್ತುತ ಅಲ್ಲು ಅರ್ಜುನ್ ಅವರ 'ಪುಷ್ಪ: ದಿ ರೂಲ್' ಚಿತ್ರೀಕರಣದಲ್ಲಿದ್ದಾರೆ. ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಮತ್ತು ಚಾವಾ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ತೊಡಗಿಸಿಕೊಂಡಿದ್ದಾರೆ.

ತೆಲುಗು ನಟ ವಿಜಯ್ ದೇವರ ಕೊಂಡ ಅಭಿನಯದ ಲೈಗರ್ ಸಿನಿಮಾ ಮಕಾಡೆ ಮಲಗಿದ ಬಳಿಕ ಪರಶುರಾಮ್ ಪೆಟ್ಲಾ ಅವರ ಫ್ಯಾಮಿಲಿ ಸ್ಟಾರ್ ಮತ್ತು ನಿರ್ದೇಶಕ ಗೌತಮ್ ತಿನ್ನನೂರಿ ಅವರ ಹೆಸರಿಡದ 'ವಿಡಿ 12' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಲೈಗರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇದು ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತು.

ಇಬ್ಬರ ನಡುವೆ ಪ್ರೀತಿ?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಆದಾಗ್ಯೂ, ಇಬ್ಬರು ನಟರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ.

ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿರುವ ವಿಜಯ್ ದೇವರಕೊಂಡ 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರೂ ಸಂಬಂಧದಲ್ಲಿದ್ದಾರೆ ಎಂದು ವ್ಯಾಪಕವಾಗಿ ವರದಿಯಾಗಿದೆ.

ಇತ್ತೀಚೆಗೆ ರಶ್ಮಿಕಾ ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಆಚರಿಸಿದರು. ಇಬ್ಬರೂ ಒಟ್ಟಿಗೆ ವಿಹಾರಕ್ಕೆ ಹೋಗುವುದು ಸಹ ಕಂಡುಬಂದಿದೆ. ಇಬ್ಬರೂ ಸ್ನೇಹಿತರು ಅಷ್ಟೇ ಎಂದು ಹೇಳಿಕೊಂಡಿದ್ದರೂ ಅದು ಸ್ನೇಹಕ್ಕೆ ಮಾತ್ರ ಸೀಮಿತವಾಗಿಲ್ಲ ಎನ್ನುವ ವರದಿಗಳು ಸಿನಿಮಾ ವಲಯದಲ್ಲಿ ಕೇಳಿಬಂದಿವೆ.

ನಿಶ್ಚಿತಾರ್ಥದ ವಿಚಾರ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಭಾರಿ ಚರ್ಚೆಯಾಗುತ್ತಿದ್ದು, ಎಕ್ಸ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಅಭಿಮಾನಿಗಳು ಈ ಸುದ್ದಿ ಕೇಳಿ ಖಷಿಯಾಗಿದ್ದಾರೆ. ಆದರೆ, ಇದೆಲ್ಲಾ ನಿಜವಾ ಅಲ್ಲವಾ ಎನ್ನುವುದನ್ನು ಸ್ವತಃ ರಶ್ಮಿಕಾ ಮತ್ತು ವಿಜಯ್ ಸ್ಪಷ್ಟಪಡಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+