9 ಭಾಷೆಗಳಲ್ಲಿ ರಿಲೀಸ್ ಆಗುತ್ತೆ ಉಪೇಂದ್ರ ನಿರ್ದೇಶನದ ಸಿನಿಮಾ: ಯಾವ ಯಾವ ಭಾಷೆಗಳು ತಿಳಿಯಿರಿ

ನಟ ಉಪೇಂದ್ರ ಯಾವುದಾದರೂ ಸಿನಿಮಾ ಮಾಡ್ತಾರೆ ಅಂದ್ರೆ ಅಲ್ಲಿ ಬರೀ ಸ್ಪೆಷಾಲಿಟಿ ಮಾತ್ರ ಇರಲ್ಲ, ಅದರ ಜೊತೆಗೆ ದೊಡ್ಡ ಕುತೂಹಲ ಕೂಡ ಮನೆ ಮಾಡಿರುತ್ತದೆ. ಅದರಲ್ಲೂ ಈ ನಟ ಡೈರೆಕ್ಷನ್ ಮಾಡಲು, ಡೈರೆಕ್ಟರ್ ಕ್ಯಾಪ್ ತೊಟ್ಟುಬಿಟ್ಟರೆ ಇಡೀ ದೇಶವೇ ಉಪೇಂದ್ರರ ಸಿನಿಮಾಗೆ ಕಾಯುತ್ತದೆ. ಇದೀಗ ಉಪ್ಪಿ ನಿರ್ದೇಶನ ಮಾಡಿ, ಹೀರೋ ಆಗಿ ಎಂಟ್ರಿಯನ್ನೂ ಕೊಡುತ್ತಿರುವ 'UI' ಸಿನಿಮಾದ ಬಗ್ಗೆ ಭರ್ಜರಿ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ!

ಹೌದು, ನಟ ಉಪೇಂದ್ರ ಅವರು ತಮ್ಮ ಮೊದಲನೇ ಸಿನಿಮಾದಿಂದ ಹಿಡಿದು ಇಂದಿನ ತಮ್ಮ 'ಯುಐ' ತನಕ ಒಂದಲ್ಲ ಒಂದು ವಿಭಿನ್ನತೆ ನೀಡುತ್ತಾ ಬಂದಿದ್ದಾರೆ. ಹೀಗಾಗಿಯೇ ಉಪ್ಪಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಅಲ್ಲದೆ ಅವರ ಸಿನಿಮಾಗೆ ಅಂತಾ ವರ್ಷಗಟ್ಟಲೇ ಕಾಯುತ್ತಾರೆ ಅವರ ಫ್ಯಾನ್ಸ್. ಇದೇ ರೀತಿ ಉಪೇಂದ್ರ ಅವರ 'UI' ಸಿನಿಮಾಗೆ ಕೂಡ ಇಡೀ ದೇಶವೇ ಕಾಯುತ್ತಿದೆ. ಹೀಗಿದ್ದಾಗ ಇಂದು ಬಹು ನಿರೀಕ್ಷಿತ 'UI' ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದೆ. ಇದರ ಜೊತೆಗೆ ಯುಐ ಸಿನಿಮಾ ಬರೋಬ್ಬರಿ 9 ಭಾಷೆಗಳಲ್ಲಿ ರಿಲೀಸ್ ಆಗುತ್ತೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ.

Real Star Upendras UI Movie Will Release In 9 Languages

ಜಗತ್ತಿನಾದ್ಯಂತ ಕನ್ನಡಿಗರ ಅಬ್ಬರ

ಕನ್ನಡಿಗರ ನಿರೀಕ್ಷೆ ಕೆರಳಿಸಿದ್ದ 'UI' ಸಿನಿಮಾ ಈಗ ಟೀಸರ್ ಮೂಲಕ ಅದನ್ನು ನಿಜ ಮಾಡುವ ನಿರೀಕ್ಷೆ ಮೂಡಿಸಿದೆ. ನಟ ಉಪೇಂದ್ರ ಅವರು ಈಗ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ. ಉಪ್ಪಿ ಡೈರೆಕ್ಷನ್ ಮಾಡಿ ನಟನೆ ಮಾಡಿ ಕನ್ನಡಿಗರ ಎದುರು ಹೊಸ ಲೋಕವನ್ನೇ ತೆರೆದಿಡಲು ಸಜ್ಜಾಗಿದ್ದಾರೆ. ಹೀಗಿದ್ದಾಗ 'UI' ಸಿನಿಮಾವನ್ನ ಒಟ್ಟು 9 ಭಾಷೆಗೆ ಡಬ್ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಕನ್ನಡದ ಸಿನಿಮಾ ಇಡೀ ಜಗತ್ತಿನಲ್ಲಿ ತನ್ನ ಖದರ್ ತೋರಿಸಲಿದೆ. ಹಾಗಾದರೆ ಯಾವ ಯಾವ ಭಾಷೆಗಳಲ್ಲಿ, ಯುಐ ಬಿಡುಗಡೆಗೆ ಸಿದ್ಧವಾಗಿದೆ ಗೊತ್ತೆ?

ಯುರೋಪ್ ಭಾಷೆಗಳಿಗೆ ಡಬ್

ಮೂಲ ಕನ್ನಡ ಭಾಷೆಯಲ್ಲಿ 'UI' ಸಿನಿಮಾ ತಯಾರಾಗುತ್ತಿದೆ. ಇದರ ಜೊತೆಗೆ ತೆಲುಗು & ತಮಿಳು, ಮಲಯಾಳಂ, ಹಿಂದಿಯಲ್ಲೂ ಬಿಡುಗಡೆ ಆಗುತ್ತದೆ. ಈ ಭಾಷೆಗಳು ಭಾರತೀಯ ಭಾಷೆಗಳಾಗಿದ್ದರೆ, ಇದರ ಜೊತೆಗೆ ವಿದೇಶಿ ಭಾಷೆಗಳಿಗೂ 'UI' ಸಿನಿಮಾ ಡಬ್ ಆಗಲಿದ್ದು. ಫ್ರೆಂಚ್, ಸ್ಪ್ಯಾನಿಷ್, ಡಚ್, ಇಟಾಲಿಯನ್ ಭಾಷೆಗಳಿಗೂ ಉಪೇಂದ್ರ ಅವರ ಬಹು ನಿರೀಕ್ಷಿತ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆಯಂತೆ.

ಹೇಗಿದೆ ಉಪ್ಪಿ ಸಿನಿಮಾ ಟೀಸರ್?

ಭಾರಿ ಕುತೂಹಲ ಕೆರಳಿಸಿತ್ತು, ಉಪೇಂದ್ರ ಅವರ UI ಸಿನಿಮಾ ಟೀಸರ್ ಬಿಡುಗಡೆಯ ದಿನಾಂಕ. ಈಗ ಅದ್ಧೂರಿಯಾಗಿ ಟೀಸರ್ ರಿಲೀಸ್ ಆಗಿದೆ. ಹೀಗೆ ರಿಲೀಸ್ ಆದ UI ಟೀಸರ್ ಅನ್ನು ಕನ್ನಡದ ಪ್ರೇಕ್ಷಕರ ಸಮೇತ ದೇಶವೇ ಮೆಚ್ಚಿಕೊಂಡಿದೆ. ಉಪೇಂದ್ರ ಅವರ ಕಾಲ್ಪನಿಕ & ಹೊಸ ಲೋಕಕ್ಕು ಸಿನಿಮಾ ಫ್ಯಾನ್ಸ್ ಫಿದಾ ಆಗಿದ್ದಾರೆ. ರಿಲೀಸ್ ಆದ ಕೆಲವೇ ಕ್ಷಣಕ್ಕೆ ಯುಐ ಟೀಸರ್ ಬಿರುಗಾಳಿಯ ರೀತಿ ಮುನ್ನುಗ್ಗುತ್ತಿದೆ. ಈ ಮೂಲಕ ಸಿನಿಮಾ ಮತ್ತಷ್ಟು ಕುತೂಹಲ ಹೆಚ್ಚಿಸಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+