23 ಮಿಲಿಯನ್ ವೀವ್ಸ್, 9 ಭಾಷೆಗಳಲ್ಲಿ ರಿಲೀಸ್ ಹಿಂಗಿದೆ ನೋಡಿ ಉಪೇಂದ್ರ ಸಿನಿಮಾ ಹವಾ!
ಕನ್ನಡಿಗರ ಸಿನಿಮಾಗಳ ಬಗ್ಗೆ ಬಾಲಿವುಡ್ ಟು ಹಾಲಿವುಡ್ ಹವಾ ಕ್ರಿಯೇಟ್ ಆಗಿದ್ದು, ಎಲ್ಲೆಲ್ಲೂ ಸೌಂಡ್ ಜೋರಾಗಿದೆ. ಈ ಸಮಯದಲ್ಲೇ ಸ್ಯಾಂಡಲ್‌ವುಡ್ ಲೆಜೆಂಡ್ ಎಂಬ ಬಿರುದು ಪಡೆದ, ಡೈರೆಕ್ಟರ್ ಕಂ ಆಕ್ಟರ್ ರಿಯಲ್ ಸ್ಟಾರ್ ಉಪೇಂದ್ರ ಅಬ್ಬರಿಸಿದ್ದಾರೆ. ಹಲವು ವರ್ಷಗಳ ಬ್ರೇಕ್ ಬಳಿಕ ಉಪೇಂದ್ರ ಡೈರೆಕ್ಟರ್ ಕ್ಯಾಪ್ ಹಾಕಿದ್ದು, ಬಿರುಗಾಳಿ ಎಬ್ಬಿಸುತ್ತಿದೆ ಉಪೇಂದ್ರ ಅವರ 'ಯುಐ' ಸಿನಿಮಾ.
ಕನ್ನಡಿಗರ ನಿರೀಕ್ಷೆ ಕೆರಳಿಸಿದ 'UI' ಸಿನಿಮಾ ಈಗ ಟೀಸರ್ ಮೂಲಕ ಅದನ್ನ ನಿಜ ಮಾಡಿ ಅಬ್ಬರಿಸಿದೆ. ನಟ ಉಪೇಂದ್ರ ಅವರು ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದು ಜನವರಿ 8ಕ್ಕೆ ರಿಲೀಸ್ ಆಗಿದ್ದ 'UI' ಟೀಸರ್ ಬಿರುಗಾಳಿ ಎಬ್ಬಿಸಿದೆ. ಉಪ್ಪಿ ನಿರ್ದೇಶನ ಮಾಡಿ, ನಟಿಸಿ ಕನ್ನಡಿಗರ ಎದುರು ಹೊಸ ಲೋಕವನ್ನೇ ತೆರೆದಿಡಲು ಸಜ್ಜಾಗಿದ್ದಾರೆ. ಹೀಗಿದ್ದಾಗ, 'UI' ಸಿನಿಮಾವನ್ನ ಒಟ್ಟು 9 ಭಾಷೆಗೆ ಡಬ್ ಮಾಡಲು ಸಿದ್ಧತೆ ನಡೆಸಲಾಗಿದೆ. ಹಾಗಾದರೆ ಈ ಸಿನಿಮಾದ ಟೀಸರ್ ಗಳಿಸಿರುವುದು ಒಟ್ಟು ಎಷ್ಟು ವೀವ್ಸ್ ಗೊತ್ತೆ?

ಟೀಸರ್‌ಗೆ 23 ಮಿಲಿಯನ್ ವೀವ್ಸ್!
ಹೌದು, 'UI' ಸಿನಿಮಾ ಟೀಸರ್ ರಿಲೀಸ್ ಆದ ನಂತರ ಒಂದು ಹವಾ ಎದ್ದಿದೆ. ಹೀಗೆ ಕ್ರಿಯೇಟ್ ಆಗಿರುವ ಹವಾ ಬಿರುಗಾಳಿ ರೂಪ ಪಡೆಯುತ್ತಿದೆ. ಇನ್ನೇನು ಕೆಲವೇ ಕೆಲವು ದಿನದಲ್ಲಿ 'UI' ಸಿನಿಮಾ ಮತ್ತಷ್ಟು ದಾಖಲೆ ಪುಡಿ ಪುಡಿ ಮಾಡುವ ಸೂಚನೆ ನೀಡಿದೆ ಮತ್ತು ಟೀಸರ್ ರಿಲೀಸ್ ಆದ 2 ದಿನದಲ್ಲಿ ಬರೋಬ್ಬರಿ 23 ಮಿಲಿಯನ್ ವೀವ್ಸ್ ಕೂಡ ಪಡೆದಿದೆ. ಈ ಮೂಲಕ ಹೊಸ ಗಾಳಿ ಹುಟ್ಟುಹಾಕಿದೆ ರಿಯಲ್ ಸ್ಟಾರ್ ಸಿನಿಮಾ.
ಒಟ್ಟಾರೆ 9 ಭಾಷೆಯಲ್ಲಿ ರಿಲೀಸ್
ಮೂಲ ಕನ್ನಡ ಭಾಷೆಯಲ್ಲಿ ಈಗ 'UI' ಸಿನಿಮಾ ಸಿದ್ಧವಾಗಿದೆ. ಇದರ ಜೊತೆ ತೆಲುಗು & ತಮಿಳು, ಮಲಯಾಳಂ, ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಈ ಭಾಷೆಗಳು ಭಾರತೀಯ ಭಾಷೆಗಳಾಗಿದ್ದರೆ ಇದರ ಜೊತೆಗೆ ವಿದೇಶಿ ಭಾಷೆಗಳಿಗೂ 'UI' ಸಿನಿಮಾ ಡಬ್ ಆಗಲಿದ್ದು. ಫ್ರೆಂಚ್, ಸ್ಪ್ಯಾನಿಷ್, ಡಚ್ ಮತ್ತು ಇಟಾಲಿಯನ್ ಭಾಷೆಗಳಿಗೂ ಉಪೇಂದ್ರ ಅವರ ಬಹು ನಿರೀಕ್ಷಿತ 'ಯುಐ' ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆಯಂತೆ.
ಮೊದಲ ದಿನದಿಂದಲೇ ಹವಾ
ಉಪೇಂದ್ರ ಅವರ ಎಂಟ್ರಿಗೆ ಮೊದಲನೇ ದಿನವೇ ಹವಾ ಎದ್ದಿತ್ತು. ಅದರಲ್ಲೂ ಶೂಟ್ ಮಾಡುವ ಸಮಯದಲ್ಲಿ ಲೀಕ್ ಆಗಿದ್ದ ಒಂದೇ ಒಂದು ಫೋಟೋ, ಸಿನಿಮಾ ರಂಗಕ್ಕೆ ಹೊಸ ಸಂಚಲನ ತಂದಿತ್ತು. ಇದೀಗ ಟೀಸರ್ ರಿಲೀಸ್ ಮಾಡಿರುವ ರಿಯಲ್ ಸ್ಟಾರ್ & ಸೂಪರ್ ಸ್ಟಾರ್ ಉಪೇಂದ್ರ ಅವರು, 'ಯುಐ' ಸಿನಿಮಾ ಬೆಳ್ಳಿತೆರೆ ಮೇಲೆ ತರೋದಕ್ಕು ಸಕಲ ಸಿದ್ಧತೆ ನಡೆಸಿದ್ದಾರೆ.

ಹೇಗಿದೆ ಉಪ್ಪಿ ಸಿನಿಮಾ ಟೀಸರ್?
ಭಾರಿ ಕುತೂಹಲ ಕೆರಳಿಸಿತ್ತು ಉಪೇಂದ್ರರ UI ಸಿನ್ಮಾ ಟೀಸರ್ ರಿಲೀಸ್ ದಿನಾಂಕ. ಇದೀಗ ಅದ್ಧೂರಿಯಾಗಿ ಟೀಸರ್ ರಿಲೀಸ್ ಆಗಿದೆ. ಹೀಗೆ ರಿಲೀಸ್ ಆದ UI ಟೀಸರ್ ಅನ್ನು ಕನ್ನಡದ ಪ್ರೇಕ್ಷಕರ ಸಮೇತ ದೇಶವೇ ಮೆಚ್ಚಿಕೊಂಡಿದೆ. ನಟ ಉಪೇಂದ್ರ ಅವರ ಕಾಲ್ಪನಿಕ & ಹೊಸ ಲೋಕಕ್ಕು ಸಿನಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಮೂಲಕ, ಬರೋಬ್ಬರಿ 23 ಮಿಲಿಯನ್ ವೀವ್ಸ್ ಪಡೆದಿದೆ ಉಪೇಂದ್ರ ಅವರ ಸಿನಿಮಾ ಟೀಸರ್. ಅದು ಯುಟ್ಯೂಬ್ ಒಂದರಲ್ಲಿ ಅನ್ನೋದು ವಿಶೇಷ.
ಒಟ್ನಲ್ಲಿ ಕನ್ನಡ ಸಿನಿಮಾಗಳ ಅಬ್ಬರ ಬಲು ಜೋರಾಗಿದ್ದು, ಎಲ್ಲೆಲ್ಲೂ ಹೊಸ ಹೊಸ ದಾಖಲೆ ಬರೆಯುತ್ತಿವೆ. ಈ ಮೂಲಕ ಸಿನಿಮಾ ರಂಗದ ಅಖಾಡದಲ್ಲಿ ಕನ್ನಡಿಗರ ಹವಾ ಬಲು ಜೋರಾಗಿದೆ. ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಕನ್ನಡ ಸಿನಿಮಾಗೆ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಉಪೇಂದ್ರ ಅವರ 'ಯುಐ' ಸಿನಿಮಾ ಕೂಡ ಅದೇ ರೀತಿ ಕ್ರೇಜ್ ಹುಟ್ಟುಹಾಕಿದೆ.












Click it and Unblock the Notifications