Pushpa-2: ವಿಜಯ್ ದೇವರಕೊಂಡ ತಾಯಿ, ಸಹೋದರನೊಂದಿಗೆ 'ಪುಷ್ಪ 2' ಸಿನಿಮಾ ವೀಕ್ಷಿಸಿದ ಶ್ರೀವಲ್ಲಿ ರಶ್ಮಿಕಾ!

ಡಿಸೆಂಬರ್ 5ರಂದು 'ಪುಷ್ಪ-2 ದಿ ರೂಲ್' ಸಿನಿಮಾ ರಿಲೀಸ್ ಆದ ಬಳಿಕ ರಶ್ಮಿಕಾ ಮಂದಣ್ಣ ಭಾರೀ ಸುದ್ದಿಯಲ್ಲಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರೊಂದಿಗೆ ರಶ್ಮಿಕಾ ಮಂದಣ್ಣ ಸಖತ್ ಆಗಿ ನಟಿಸಿದ್ದು ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇನ್ನೂ ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್ ಅವರೊಂದಿಗೆ ರಶ್ಮಿಕಾ ಚಿತ್ರದ ಪ್ರದರ್ಶನದಲ್ಲಿ ಹಾಜರಾಗಿದ್ದರು. ಆದರೀಗ ಅವರ ಗೆಳೆಯ ವಿಜಯ್ ದೇವರಕೊಂಡ ಅವರ ಕುಟುಂಬಸ್ಥರೊಂದಿಗೆ ಸಿನಿಮಾ ನೋಡಿದ್ದಾರೆ.

ಹೌದು... ವಿಜಯ್‌ ದೇವರಕೊಂಡ ಅವರ ತಾಯಿ ಮತ್ತು ಅವರ ಸಹೋದರನೊಂದಿಗೆ ರಶ್ಮಿಕಾ ಮಂದಣ್ಣ ಹೈದರಾಬಾದ್‌ನಲ್ಲಿ ಪುಷ್ಪ-2 ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಕ್ಲಿಪ್‌ನಲ್ಲಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ಅವರೊಂದಿಗೆ ಕುಳಿತಿದ್ದಾರೆ. ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಕೂಡ ಅವರೊಂದಿಗೆ ಇರುವುದು ಕಂಡು ಬಂದಿದೆ.

Rashmika mandanna watched pushpa 2 movie with vijay devarakonda s mother and brother

ಇದರಿಂದ ವಿಜಯ್‌ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ವದಂತಿಗಳಿಗೆ ಪುಷ್ಟಿ ನೀಡಿದಂತಾಗಿದೆ. ಈಗಾಗಲೇ ರಶ್ಮಿಕಾ ಹಾಗೂ ವಿಜಯ್ ಒಟ್ಟಿಗೆ ಸಿನಿಮಾಗಳನ್ನು ಮಾಡಿ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿದೆ ಎಂದು ಹಲವಾರು ಜನ ಮಾತನಾಡಿಕೊಳ್ಳುತ್ತಿರುವುದು ಗೊತ್ತೇ ಇದೆ. ಆದರೆ ಈ ಎಲ್ಲಾ ವದಂತಿಗಳಿಗೆ ಈ ಜೋಡಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಸ್ವತ: ರಶ್ಮಿಕಾ ಮಂದಣ್ಣ ವಿಜಯ್‌ ದೇವರಕೊಂಡ ಅವರ ತಾಯಿ ಹಾಗೂ ಸಹೋದರೊಂದಿಗೆ 'ಪುಷ್ಪ-2 ದಿ ರೂಲ್' ಸಿನಿಮಾವನ್ನು ವೀಕ್ಷಿಸಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅಷ್ಟೇ ಅಲ್ಲ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ 'ಗೀತ ಗೋವಿಂದಂ' ಸಿನಿಮಾ ಮೂಲಕ ಪರಿಚಯವಾದರು. ನಂತರ ಮತ್ತೊಂದು ಸಿನಿಮಾದಲ್ಲೂ ಈ ಜೋಡಿ ಒಟ್ಟಿಗೆ ನಟಿಸಿ ಸಾಕಷ್ಟು ಜನ ಮೆಚ್ಚುಗೆಯನ್ನು ಪಡೆಯಿತು. ಇದಾದ ಬಳಿಕ ಇವರಿಬ್ಬರ ನಡುವೆ ಸಂಥಿಂಗ್ ಶುರುವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಸಾಕ್ಷಿ ಎಂಬಂತೆ ವಿಜಯ್ ಹಾಗೂ ರಶ್ಮಿಕಾ ಒಟ್ಟಿಗೆ ಸುತ್ತಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದವು.

ಇದೀಗ ಹೈದರಾಬಾದ್‌ನಲ್ಲಿ ರಶ್ಮಿಕಾ ಫಸ್ಟ್ ಡೇ ಫಸ್ಟ್ ಶೋವನ್ನು ವಿಜಯ್‌ ದೇವರಕೊಂಡ ಕುಟುಂಬಸ್ಥರೊಂದಿಗೆ ವೀಕ್ಷಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಶ್ರೀವಲ್ಲಿ ಆದಷ್ಟು ಬೇಗ ಈ ಬಗ್ಗೆ ಸಿಹಿ ಸುದ್ದಿ ಹಂಚಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

'ಪುಷ್ಪ 2' 2021 ರಲ್ಲಿ ಬಿಡುಗಡೆಯಾದ 'ಪುಷ್ಪ' ಚಿತ್ರದ ಮುಂದುವರಿದ ಭಾಗವಾಗಿದೆ. 400 ರಿಂದ 500 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದು, ಅಲ್ಲು ಅರ್ಜುನ್ ಪುಷ್ಪರಾಜ್ ಪಾತ್ರದಲ್ಲಿ ಮತ್ತು ಫಹದ್ ಫಾಸಿಲ್ ಎಸ್ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+