ಪತಿ ವಿಜಯ್ ದೇವರಕೊಂಡ ಜೊತೆ ಮೊದಲ ಬಾರಿಗೆ ತವರಿಗೆ ಬಂದ ರಶ್ಮಿಕಾ: ತಂದೆಯಿಂದ ಐಷಾರಾಮಿ ಬಂಗಲೆ ಉಡುಗೊರೆ
ಮಡಿಕೇರಿ: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ವಿವಾಹದ ನಂತರ ಮೊದಲ ಬಾರಿಗೆ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ತಮ್ಮ ಹುಟ್ಟೂರಾದ ಕೊಡಗಿಗೆ ಭೇಟಿ ನೀಡಿದ್ದಾರೆ. ಏಪ್ರಿಲ್ 5ರಂದು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮಿಸಲು ಈ ತಾರಾ ಜೋಡಿ ಕೊಡಗಿನ ವಿರಾಜಪೇಟೆಗೆ ಆಗಮಿಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದೇ ವೇಳೆ ರಶ್ಮಿಕಾ ಪೋಷಕರು ಐಷಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇಗ್ಗುತ್ತಪ್ಪನ ದರ್ಶನ
ತಮ್ಮ ಜನ್ಮದಿನದ ವಿಶೇಷವಾಗಿ ರಶ್ಮಿಕಾ ಮತ್ತು ವಿಜಯ್ ದಂಪತಿ ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿರುವ ಕೊಡಗಿನ ಆರಾಧ್ಯ ದೈವ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದರು. ಯಾವುದೇ ಅದ್ದೂರಿತನವಿಲ್ಲದೆ, ಸಾಮಾನ್ಯ ಭಕ್ತರಂತೆ ಸರತಿ ಸಾಲಿನಲ್ಲಿ ನಿಂತು ಈ ಜೋಡಿ ವಿಶೇಷ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ನೆಚ್ಚಿನ ನಟ-ನಟಿಯನ್ನು ಒಟ್ಟಾಗಿ ದೇವಸ್ಥಾನದಲ್ಲಿ ಕಂಡ ಭಕ್ತರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಕೋಟಿ ಬೆಲೆಯ ಬಂಗಲೆ ಉಡುಗೊರೆ
ಮಗಳು ಮತ್ತು ಅಳಿಯ ಮೊದಲ ಬಾರಿಗೆ ಮನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರು ಕದನೂರಿನ ತಮ್ಮ ನಿವಾಸವನ್ನು ವಿಶೇಷವಾಗಿ ನವೀಕರಣಗೊಳಿಸಿದ್ದರು. ಅಷ್ಟೇ ಅಲ್ಲದೆ, ಮಗಳ ಹುಟ್ಟುಹಬ್ಬದ ಉಡುಗೊರೆಯಾಗಿ ವಿರಾಜಪೇಟೆ ಹೊರವಲಯದ ಕದನೂರಿನಲ್ಲಿರುವ ಅತ್ಯಾಧುನಿಕ ಸೌಲಭ್ಯವುಳ್ಳ 'ಸೆರೆನಿಟಿ' ಬಂಗಲೆಯನ್ನು ರಶ್ಮಿಕಾ ಹೆಸರಿಗೆ ನೀಡಿದ್ದಾರೆ. ಬಂಗಲೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ವಿರಾಜಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕೃತವಾಗಿ ಪೂರ್ಣಗೊಂಡಿದ್ದು, ಮಗಳ ಮೇಲಿನ ಪ್ರೀತಿಗಾಗಿ ತಂದೆ ನೀಡಿರುವ ಈ ಬೆಲೆಬಾಳುವ ಗಿಫ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಆಪ್ತರಿಗಾಗಿ ವಿಶೇಷ ಔತಣಕೂಟ
ರಶ್ಮಿಕಾ ಅವರ ಪೋಷಕರು ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರಿಗಾಗಿ ಭರ್ಜರಿ ಔತಣಕೂಟವನ್ನು ಏರ್ಪಡಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ದಂಪತಿಯ ಕೊಡಗು ಭೇಟಿಯ ಫೋಟೋಗಳು ವೈರಲ್ ಆಗುತ್ತಿದ್ದು, 'ನ್ಯಾಷನಲ್ ಕ್ರಶ್' ತಮ್ಮ ತವರಿನಲ್ಲಿ ಹುಟ್ಟುಹಬ್ಬವನ್ನು ಸಖತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ.

ವಿರಾಜಪೇಟೆಯಲ್ಲಿ ಅದ್ದೂರಿ ರಿಸೆಪ್ಷನ್
ಕೊಡಗಿನ ಕುವರಿ, ಖ್ಯಾತ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ದಂಪತಿ ಸೋಮವಾರ (ಏಪ್ರಿಲ್ 6) ವಿರಾಜಪೇಟೆಯಲ್ಲಿ ಅದ್ಧೂರಿ ಔತಣಕೂಟ ಹಮ್ಮಿಕೊಂಡಿದ್ದರು. ರಶ್ಮಿಕಾ ಅವರ 30ನೇ ಹುಟ್ಟುಹಬ್ಬದ ಮರುದಿನವೇ ಈ ಕಾರ್ಯಕ್ರಮ ನಡೆದಿದ್ದು, ಕೊಡವ ಸಂಪ್ರದಾಯದ ಮೆರುಗು ಎದ್ದು ಕಾಣುತ್ತಿತ್ತು. ತಮ್ಮ ತವರು ಮತ್ತು ಸಂಪ್ರದಾಯದ ಬಗ್ಗೆ ಅಪಾರ ಗೌರವ ಹೊಂದಿರುವ ರಶ್ಮಿಕಾ, ಈ ವಿಶೇಷ ಸಮಾರಂಭಕ್ಕಾಗಿ ಕೊಡವ ಶೈಲಿಯ ಸೀರೆಯುಟ್ಟು ಮಿಂಚಿದರು.
ಗುಲಾಬಿ (Pink) ಮತ್ತು ಆಲಿವ್ ಗ್ರೀನ್ ಬಣ್ಣದ ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು. ಪತಿ ವಿಜಯ್ ದೇವರಕೊಂಡ ಅವರು ಕಪ್ಪು ಬಣ್ಣದ ಬ್ಲೇಜರ್ ಮತ್ತು ಬಿಳಿ ಶರ್ಟ್ ಧರಿಸಿ ರಶ್ಮಿಕಾ ಅವರಿಗೆ ಸಾಥ್ ನೀಡಿದರು. ವಿರಾಜಪೇಟೆಯ ಸೆರೆನಿಟಿ ಕನ್ವೆನ್ಷನ್ ಹಾಲ್ನಲ್ಲಿ ಈ ಔತಣಕೂಟ ಏರ್ಪಡಿಸಲಾಗಿತ್ತು. ರಶ್ಮಿಕಾ ಮತ್ತು ವಿಜಯ್ ಪರಸ್ಪರ ಕೈ ಕೈ ಹಿಡಿದು ವೇದಿಕೆಯತ್ತ ನಡೆದು ಬರುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮಂದಣ್ಣ ಕುಟುಂಬದ ಆಪ್ತರು, ನೆಂಟರಿಷ್ಟರು ಹಾಗೂ ಸ್ನೇಹಿತರು ಈ ಸಮಾರಂಭದಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭ ಹಾರೈಸಿದರು.
#Virosh Coorg reception♥️#RashmikaMandanna in a kodava Saree✨🫶#Vijaydeverakonda pic.twitter.com/sn6K6evMiO
— Aysha Musthaq (@AyshaMusthaq) April 6, 2026
ಕೊಡಗಿನ ಅಳಿಯನಿಗೆ ಭರ್ಜರಿ ಆತಿಥ್ಯ
ಮದುವೆಯ ನಂತರ ಮೊದಲ ಬಾರಿಗೆ ಅಳಿಯ ವಿಜಯ್ ದೇವರಕೊಂಡ ಮನೆಗೆ ಬಂದಿರುವ ಹಿನ್ನೆಲೆಯಲ್ಲಿ ಮದನ್ ಮಂದಣ್ಣ ದಂಪತಿ ಕೊಡಗಿನ ಶೈಲಿಯಲ್ಲೇ ವಿಶೇಷ ಔತಣಕೂಟ ಸಿದ್ಧಪಡಿಸಿದ್ದರು. ಇತ್ತೀಚೆಗಷ್ಟೇ ತಂದೆಯಿಂದ 'ಸೆರೆನಿಟಿ' ಬಂಗಲೆಯನ್ನು ಉಡುಗೊರೆಯಾಗಿ ಪಡೆದಿದ್ದ ರಶ್ಮಿಕಾ, ಈಗ ಕೊಡಗಿನ ಸಂಪ್ರದಾಯದಂತೆ ರಿಸೆಪ್ಷನ್ ಮಾಡಿಕೊಳ್ಳುವ ಮೂಲಕ ತಮ್ಮ ಹುಟ್ಟೂರಿನ ಭೇಟಿಗೆ ಮೆರುಗು ತುಂಬಿದರು.
-
Rashmika Mandanna: ಲವ್ ಯೂ ಜಯಮ್ಮ: ಪತ್ನಿ ರಶ್ಮಿಕಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ -
ಕೊಡಗು ಚಾರಣ: 4 ದಿನ ದಟ್ಟ ಕಾಡಿನಲ್ಲಿದ್ದ ಕೇರಳಂ ಮೂಲದ ಜಿ.ಎಸ್.ಶರಣ್ಯ ಬದುಕುಳಿದಿದ್ದು ಹೇಗೆ, ರೋಚಕ ಕಾರ್ಯಾಚರಣೆ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ













Click it and Unblock the Notifications