Trisha Krishnan: ಪ್ರೀತಿ ಇಲ್ಲದ ಜೀವನ ಅರ್ಥಹೀನ: ನಟ ದಳಪತಿ ವಿಜಯ್ ಡಿವೋರ್ಸ್ ಕೇಸ್ ನಡುವೆ ನಟಿ ತ್ರಿಶಾ ಪೋಸ್ಟ್ ವೈರಲ್

ಕಾಲಿವುಡ್‌ ನಟ, ರಾಜಕಾರಣಿ 'ದಳಪತಿ' ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ನಡುವೆ ಪ್ರೇಮ ಸಂಬಂಧದ ವದಂತಿಗಳು ಕಳೆದ ಕೆಲವು ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಈಗ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ನಟಿ ತ್ರಿಶಾ ಹಂಚಿಕೊಂಡಿರುವ ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.

ವಿಜಯ್ ಪತ್ನಿಯಿಂದ ಡಿವೋರ್ಸ್ ಅರ್ಜಿ

ವಿಜಯ್ ಅವರ ಪತ್ನಿ ಸಂಗೀತಾ ಅವರು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ 25 ವರ್ಷಗಳಿಂದ ಸುಖ ಸಂಸಾರ ನಡೆಸುತ್ತಿದ್ದ ಈ ದಂಪತಿಗಳ ನಡುವೆ ಬಿರುಕು ಮೂಡಲು ವಿಜಯ್ ಅವರ ಸಹೋದ್ಯೋಗಿ ನಟಿಯೊಬ್ಬರ ಜೊತೆಗಿನ ಸಂಬಂಧವೇ ಕಾರಣ ಎಂದು ಕೆಲವು ಮೂಲಗಳು ಆರೋಪಿಸಿವೆ. ಆದರೆ, ಈ ಬಗ್ಗೆ ವಿಜಯ್ ಅಥವಾ ಸಂಗೀತಾ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

Trisha Krishnan

ತ್ರಿಶಾ ಪೋಸ್ಟ್‌ನಲ್ಲಿ ಏನಿದೆ?

ತಮ್ಮ ವಿರುದ್ಧದ ಟೀಕೆಗಳಿಗೆ ನೇರವಾಗಿ ಪ್ರತಿಕ್ರಿಯಿಸದ ತ್ರಿಶಾ, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. "ನಾನು ಈಗ ಜೀವನದ ಅಂತಹ ಹಂತದಲ್ಲಿದ್ದೇನೆಂದರೆ, ನಾನು ಯಾರೊಂದಿಗೂ ವಾದ ಮಾಡುವುದಿಲ್ಲ. ನೀವು 'ಆನೆ ಹಾರುತ್ತದೆ' ಎಂದು ಹೇಳಿದರೂ ಸಹ ನಾನು 'ನೀವು ಹೇಳುವುದು ಸರಿ' ಎನ್ನುತ್ತೇನೆ. ಇದರರ್ಥ ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ ಎಂದಲ್ಲ, ಬದಲಾಗಿ ನಿಮ್ಮನ್ನು ಒಪ್ಪಿಸಲು ನನ್ನ ಶಕ್ತಿಯನ್ನು ವ್ಯಯಿಸಲು ನಾನು ಬಯಸುವುದಿಲ್ಲ" ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಮನಸ್ಸಿನ ಶಾಂತಿ ಮುಖ್ಯ

"ಸರಿ ಇರುವುದಕ್ಕಿಂತ ಮನಸ್ಸಿನ ಶಾಂತಿ ಮುಖ್ಯ ಎಂದು ನಾನು ಕಲಿತಿದ್ದೇನೆ. ವಿವರಣೆ ನೀಡುವುದಕ್ಕಿಂತ ಮೌನವಾಗಿರುವುದು ಸುಲಭ. ಪ್ರತಿಯೊಬ್ಬರಿಗೂ ನನ್ನ ಶಕ್ತಿಯನ್ನು ವ್ಯಯಿಸುವ ಅಗತ್ಯವಿಲ್ಲ. ಕೆಲವು ವಾದಗಳು ಕೇವಲ ನಮ್ಮನ್ನು ದಣಿಸಲು ಇರುತ್ತವೆ. ಹಾಗಾಗಿ ಅಂತಹವುಗಳಿಂದ ದೂರ ಸರಿದು, ಕಿರುನಗೆ ಬೀರಿ ನನ್ನ ಶಾಂತಿಯನ್ನು ನಾನು ಕಾಪಾಡಿಕೊಳ್ಳುತ್ತೇನೆ" ಎಂಬ ಅರ್ಥದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ "ಪ್ರೀತಿಯೇ ಎಲ್ಲವೂ ಅಲ್ಲದಿರಬಹುದು, ಆದರೆ ಪ್ರೀತಿ ಇಲ್ಲದಿದ್ದರೆ ಉಳಿದೆಲ್ಲವೂ ಅರ್ಥಹೀನವಾಗುತ್ತದೆ" ಎಂಬ ಸಾಲುಗಳನ್ನು ಹಂಚಿಕೊಂಡು ಅದಕ್ಕೆ 'ಸತ್ಯ' ಎಂದು ಬರೆದುಕೊಂಡಿದ್ದಾರೆ. ಇದು ವಿಜಯ್ ಜೊತೆಗಿನ ವದಂತಿಗಳಿಗೆ ಅವರು ನೀಡಿದ ಪರೋಕ್ಷ ಪ್ರತಿಕ್ರಿಯೆಯೇ ಎಂಬ ಚರ್ಚೆ ಶುರುವಾಗಿದೆ.

'ಗಿಲ್ಲಿ' ಮತ್ತು 'ಕುರುವಿ'ಯಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ವಿಜಯ್ ಮತ್ತು ತ್ರಿಶಾ, ಇತ್ತೀಚೆಗೆ 'ಲಿಯೋ' (Leo) ಚಿತ್ರದ ಮೂಲಕ ಸುಮಾರು 14 ವರ್ಷಗಳ ನಂತರ ತೆರೆ ಹಂಚಿಕೊಂಡಿದ್ದರು. ಮತ್ತೊಂದೆಡೆ ವಿಜಯ್ ಪತ್ನಿಯ ವಿಚ್ಛೇದನದ ಸುದ್ದಿ ಇದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಆದರೆ ಈವರೆಗೂ ವಿಜಯ್ ಅಥವಾ ಅವರ ಕುಟುಂಬದ ಕಡೆಯಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.

Trisha Krishnan

ನಟ ವಿಜಯ್ ಅವರು ಈಗಷ್ಟೇ 'ತಮಿಳಗ ವೆಟ್ರಿ ಕಳಗಂ' (TVK) ಎಂಬ ಪಕ್ಷವನ್ನು ಕಟ್ಟಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಈ ಹೊತ್ತಿನಲ್ಲಿ ಅವರ ವೈಯಕ್ತಿಕ ಜೀವನದ ಈ ಗೊಂದಲಗಳು ಅವರ ರಾಜಕೀಯ ಭವಿಷ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಮನೆಮಾಡಿದೆ.

ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಸುದ್ದಿ ಹರಿದಾಡಿತ್ತು. ಪತಿಯ ಪರಸ್ತ್ರೀ ಸಂಬಂಧವೇ ಇದಕ್ಕೆ ಕಾರಣ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದರಿಂದ, ಸೋಶಿಯಲ್ ಮೀಡಿಯಾದಲ್ಲಿ ತ್ರಿಶಾ ಅವರ ಮೇಲೆ ತೀವ್ರ ಟೀಕೆ ಮತ್ತು ಟ್ರೋಲ್‌ಗಳು ಶುರುವಾದವು. ಇದರ ನಡುವೆ ಚೆನ್ನೈನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವಿಜಯ್ ಮತ್ತು ತ್ರಿಶಾ ಜೊತೆಯಾಗಿ ಕಾಣಿಸಿಕೊಂಡಿದ್ದು ಈ ಪ್ರೇಮ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+