Break Up Job: ಲವ್ ಬ್ರೇಕ್ ಅಪ್ ಮಾಡಿಸಿದ್ರೆ ಸಿಗುತ್ತೆ ₹2.8 ಲಕ್ಷ ಸಂಬಳ; ಬೆಂಗಳೂರು ಕಂಪನಿಯಲ್ಲೇ ಸಿಗುತ್ತೆ ಈ ವಿಚಿತ್ರ ಕೆಲಸ

ಸಾಮಾನ್ಯವಾಗಿ ಪ್ರೀತಿ-ಪ್ರೇಮದ ವಿಷಯಕ್ಕೆ ಬಂದರೆ, ಯಾವುದಾದರೂ ಒಂದು ಜೋಡಿಯ ಮಧ್ಯೆ ಜಗಳ ಅಥವಾ ವಿರಸ ಉಂಟಾದಾಗ ಮೂರನೆಯವರು ಬಂದು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ. ಇನ್ನು ಯಾರಾದರೂ ಬೇಕೆಂತಲೇ ಪ್ರೇಮಿಗಳ ನಡುವೆ ವಿಷ ಕಕ್ಕಿ ಅವರ ಪ್ರೀತಿಯನ್ನು ಮುರಿಯಲು ನೋಡಿದರೆ, ಆ ಜೋಡಿ ಅವರಿಗೆ ಶಾಪ ಹಾಕುವುದಂತೂ ಗ್ಯಾರಂಟಿ. ಆದರೆ ಇಲ್ಲೊಂದು ಕಂಪನಿ ಮಾತ್ರ ಪ್ರೇಮಿಗಳ ನಡುವೆ ಬ್ರೇಕ್ ಅಪ್ ಮಾಡಿಸುವುದಕ್ಕಾಗಿಯೇ ಉದ್ಯೋಗಿಗಳನ್ನು ಹುಡುಕುತ್ತಿದೆ. ಹೌದು, ಪ್ರೇಮಿಗಳ ಬ್ರೇಕ್ ಅಪ್ ಮಾಡಿಸುವುದನ್ನೇ ಕೆಲಸ ಮಾಡಿಕೊಂಡರೆ ನಿಮಗೆ ಬರೋಬ್ಬರಿ 2.8 ಲಕ್ಷ ರೂಪಾಯಿ ಮಾಸಿಕ ವೇತನ ಸಿಗಲಿದೆ.

ಏನಿದು ವಿಚಿತ್ರ ಉದ್ಯೋಗ?

ಬೆಂಗಳೂರು ಮೂಲದ ಪ್ರಮುಖ ಡೇಟಿಂಗ್ ಸ್ಟಾರ್ಟ್‌ಅಪ್ ಒಂದಾದ 'ಡೇಟಿಂಗ್.ಕಾಮ್' (Dating.com) ಈ ಒಂದು ವಿಚಿತ್ರ ಹಾಗೂ ನಂಬಲಸಾಧ್ಯವಾದ ಉದ್ಯೋಗದ ಆಫರ್ ಅನ್ನು ಜಗತ್ತಿನ ಮುಂದೆ ಇಟ್ಟಿದೆ. ಪ್ರೇಮಿಗಳ ನಡುವೆ ಸಂಬಂಧವನ್ನು ಕಡಿದುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಕಂಪನಿಯು ಈಗ ಎಕ್ಸ್‌ಪರ್ಟ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಈ ವಿಶಿಷ್ಟ ಹುದ್ದೆಗೆ ಕಂಪನಿಯು ಇಟ್ಟಿರುವ ಹೆಸರು 'ಚೀಫ್ ಬ್ರೇಕ್ ಅಪ್ ಆಫೀಸರ್' (Chief Breakup Officer). ಹೌದು, ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಸದ್ಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2 Lakh Salary

2.8 ಲಕ್ಷ ಸಂಬಳದ ಜೊತೆಗೆ ಏನೆಲ್ಲ ಕೆಲಸ?

ಈ 'ಚೀಫ್ ಬ್ರೇಕ್ ಅಪ್ ಆಫೀಸರ್' ಹುದ್ದೆಗೆ ಆಯ್ಕೆಯಾಗುವ ಉದ್ಯೋಗಿಗೆ ತಿಂಗಳಿಗೆ ಬರೋಬ್ಬರಿ 2.8 ಲಕ್ಷ ರೂಪಾಯಿ ಭಾರಿ ಮೊತ್ತದ ಸಂಬಳವನ್ನು ನಿಗದಿಪಡಿಸಲಾಗಿದೆ. ಈ ಹುದ್ದೆಯ ಪ್ರಮುಖ ಕೆಲಸ ಏನೆಂದರೆ, ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯಿಂದ ದೂರವಾಗಲು ಇಷ್ಟಪಡುವ ಹಾಗೂ ಸಂಬಂಧವನ್ನು ಮುನ್ನಡೆಸಲು ಕಷ್ಟಪಡುವ ಪ್ರೇಮಿಗಳಿಗೆ ಸೂಕ್ತವಾದ ಸಲಹೆ ನೀಡಿ, ಅವರು ನೆಮ್ಮದಿಯಿಂದ ಒಬ್ಬರಿಗೊಬ್ಬರು ದೂರವಾಗಲು (ಬ್ರೇಕ್ ಅಪ್ ಮಾಡಿಕೊಳ್ಳಲು) ಇವರು ನೇರವಾಗಿ ಸಹಾಯ ಮಾಡಬೇಕು.

ಜಗತ್ತಿನಲ್ಲಿ ಎಂತೆಂತಹದ್ದೋ ಕೆಲಸಗಳಿಗೆ ಸಂಬಳ ಕೊಡುವುದನ್ನು ನೋಡಿದ್ದೇವೆ. ಆದರೆ ಕೇವಲ ಪ್ರೇಮಿಗಳ ನಡುವೆ ಬ್ರೇಕ್ ಅಪ್ ಮಾಡಿಸುವುದಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಸ್ಯಾಲರಿ ಕೊಡುತ್ತಿರುವುದನ್ನು ಕಂಡು ನೆಟ್ಟಿಗರು ಅಕ್ಷರಶಃ ದಂಗಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಉದ್ಯೋಗದ ಜಾಹೀರಾತು ಭಾರಿ ವೈರಲ್ ಆಗುತ್ತಿದ್ದು, "ಕಾಲ ಎಲ್ಲಿಗೆ ಬಂತು ನೋಡಿ, ಇನ್ಮುಂದೆ ಇಂತಹ ಕೆಲಸಗಳಿಗೂ ಲಕ್ಷ ಲಕ್ಷ ಸಂಬಳ ಸಿಗುತ್ತೆ ಅಂದ್ರೆ ಕಣ್ಣಾರೆ ನೋಡಿದ್ರೂ ನಂಬೋಕೆ ಆಗ್ತಿಲ್ಲಪ್ಪಾ!" ಎಂದು ಜನರು ಕಮೆಂಟ್ ಮಾಡುತ್ತಾ ಕಾಲೆಳೆಯುತ್ತಿದ್ದಾರೆ. ಅದೇನೇ ಇರಲಿ, ನಿಮಗೂ ಬ್ರೇಕ್ ಅಪ್ ಮಾಡಿಸುವ ಕಲೆ ಕರಗತವಾಗಿದ್ದರೆ, ಈ 2.8 ಲಕ್ಷ ರೂ. ಸಂಬಳದ ಮೆಗಾ ಆಫರ್ ಕೈಜಾರುವ ಮುನ್ನ ಟ್ರೈ ಮಾಡಬಹುದು.

ರಿಯಾಲಿಟಿ ಶೋ ವೇದಿಕೆಯಲ್ಲೇ ಡಿವೋರ್ಸ್‌ ಘೋಷಿಸಿದ ಖ್ಯಾತ ನಟಿ: ಒಂದು ವರ್ಷದ ಹಿಂದಿನ ಆ ಕಟು ಸತ್ಯ ರಿವೀಲ್‌
ರಿಯಾಲಿಟಿ ಶೋ ವೇದಿಕೆಯಲ್ಲೇ ಡಿವೋರ್ಸ್‌ ಘೋಷಿಸಿದ ಖ್ಯಾತ ನಟಿ: ಒಂದು ವರ್ಷದ ಹಿಂದಿನ ಆ ಕಟು ಸತ್ಯ ರಿವೀಲ್‌

'ಬ್ರೇಕ್ ಅಪ್' ಹೆಚ್ಚಾಗುತ್ತಿರುವುದಕ್ಕೆ ಪ್ರಮುಖ ಕಾರಣಗಳು

ಇಂದಿನ ಜೀವನಶೈಲಿಯಲ್ಲಿ ಸಂಬಂಧಗಳ ಅರ್ಥ ಮತ್ತು ಆಯಸ್ಸು ಬದಲಾಗುತ್ತಿದೆ. ಕೇವಲ ಡೇಟಿಂಗ್ ಆಪ್‌ಗಳ ಹುಚ್ಚು ಮಾತ್ರವಲ್ಲದೆ, ದಿನನಿತ್ಯದ ಬದುಕಿನ ಕೆಲವು ಪ್ರಮುಖ ಬದಲಾವಣೆಗಳು ಪ್ರೇಮಿಗಳನ್ನು ಹಾಗೂ ದಂಪತಿಗಳನ್ನು ಬೇಗನೇ ದೂರ ಮಾಡುತ್ತಿವೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಒಂದು ಸಂಬಂಧ ಮುರಿದರೆ ಮತ್ತೊಂದು ಸುಲಭವಾಗಿ ಸಿಗುತ್ತದೆ ಎಂಬ ಭ್ರಮೆ ಯುವ ಪೀಳಿಗೆಯಲ್ಲಿದೆ. ಟಿಂಡರ್, ಬಂಬಲ್‌ನಂತಹ ಡೇಟಿಂಗ್ ಆಪ್‌ಗಳ ಹಾವಳಿಯಿಂದಾಗಿ, ಸಂಬಂಧದಲ್ಲಿ ಸಣ್ಣ ಪುಟ್ಟ ಗಲಾಟೆಯಾದರೂ ಅದನ್ನು ಸರಿಪಡಿಸಿಕೊಳ್ಳುವ ತಾಳ್ಮೆ ಯಾರಿಗೂ ಇಲ್ಲದಂತಾಗಿದೆ. "ನನಗಿಂತ ಉತ್ತಮವಾದ ಆಪ್ಷನ್ ಮತ್ಯಾರೋ ಸಿಗಬಹುದು" ಎಂಬ ಆಲೋಚನೆಯೇ ಬ್ರೇಕ್ ಅಪ್‌ಗಳಿಗೆ ದಾರಿ ಮಾಡಿಕೊಡುತ್ತಿದೆ.

ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳಲ್ಲಿ ಇತರ ಜೋಡಿಗಳು ಹಂಚಿಕೊಳ್ಳುವ ರೋಮ್ಯಾಂಟಿಕ್ ಫೋಟೋಗಳು ಮತ್ತು ರೀಲ್ಸ್‌ಗಳನ್ನು ನೋಡಿ, ತಮ್ಮ ನೈಜ ಸಂಬಂಧವನ್ನು ಅದರೊಂದಿಗೆ ಹೋಲಿಕೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ರೀಲ್ಸ್‌ನಲ್ಲಿ ಕಾಣುವ ಐಷಾರಾಮಿ ಲೈಫ್‌ಸ್ಟೈಲ್ ತಮಗಿಲ್ಲ ಎಂದಾಗ ಮನಸ್ತಾಪಗಳು ಶುರುವಾಗಿ, ಸಂಬಂಧಗಳು ಹಳಸುತ್ತಿವೆ. ಬೆಂಗಳೂರಿನಂತಹ ಐಟಿ ಹಬ್‌ಗಳಲ್ಲಿ ಕೆಲಸ ಮಾಡುವ ಯುವಕ-ಯುವತಿಯರಿಗೆ ತಮ್ಮ ಕರಿಯರ್ ಮತ್ತು ಕೆಲಸವೇ ಮೊದಲ ಆದ್ಯತೆಯಾಗಿರುತ್ತದೆ. ತಡರಾತ್ರಿಯ ಶಿಫ್ಟ್‌ಗಳು, ವೀಕೆಂಡ್ ಒತ್ತಡಗಳಿಂದಾಗಿ ಪ್ರೇಮಿಗಳಿಗೆ ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುತ್ತಿಲ್ಲ. ಸಂವಹನದ ಕೊರತೆಯೇ ಕೊನೆಗೆ ಬ್ರೇಕ್ ಅಪ್‌ನಲ್ಲಿ ಅಂತ್ಯವಾಗುತ್ತಿದೆ.

ಇಂದಿನ ದಿನಗಳಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಹೀಗಾಗಿ ಸಂಬಂಧದಲ್ಲಿ ಅಹಂ (Ego) ಬಂದಾಗ ಯಾರೂ ಯಾರನ್ನೂ ಸಹಿಸಿಕೊಂಡು ಹೋಗಲು ಸಿದ್ಧರಿರುವುದಿಲ್ಲ. ತಪ್ಪು ನಿರ್ಧಾರಗಳು ಅಥವಾ ಹೊಂದಾಣಿಕೆಯಾಗದ ಯೋಚನೆಗಳು ಎದುರಾದಾಗ, ಗೌರವಯುತವಾಗಿಯೇ ದೂರವಾಗುವ ಪ್ರವೃತ್ತಿ ಹೆಚ್ಚಾಗಿದೆ. ಇಂದಿನ ತಲೆಮಾರಿಗೆ ಎಲ್ಲವೂ ಇನ್‌ಸ್ಟಂಟ್ ಆಗಿ ಬೇಕು. ಪ್ರೀತಿ ಮತ್ತು ಸಂಬಂಧಗಳು ಗಟ್ಟಿಯಾಗಬೇಕಾದರೆ ಪರಸ್ಪರ ನಂಬಿಕೆ, ತ್ಯಾಗ ಮತ್ತು ಸಮಯ ಬೇಕಾಗುತ್ತದೆ. ಆದರೆ ಇಂದಿನ ಯುವ ಪೀಳಿಗೆಗೆ ಸಂಬಂಧದಿಂದ ತಕ್ಷಣದ ಸಂತೋಷ ಬೇಕಿರುತ್ತದೆ. ಅದರಲ್ಲಿ ಕೊಂಚ ಏರುಪೇರಾದರೂ ಬೇಸತ್ತು "ಮೂವ್ ಆನ್" ಆಗುವ ನಿರ್ಧಾರಕ್ಕೆ ಬರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+