Rashmika Mandanna: ವಿಡಿಯೋದಿಂದ ನಟಿ ರಶ್ಮಿಕಾ & ವಿಜಯ್ ಸಂಬಂಧ ಬಹಿರಂಗ! ಮದುವೆ ಡೇಟ್ ಅನೌನ್ಸ್?

ಬೆಂಗಳೂರು, ಜೂನ್ 19: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಯಾರಿಗೂ ಗೊತ್ತಾದಂತೆ ಗೌಪ್ಯವಾಗಿ ತಮ್ಮ ಲವ್ ರಿಲೇಷನ್‌ಶಿಪ್ ಮುನ್ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇತ್ತು. ಇಬ್ಬರು ತಾವು ಬೆಸ್ಟ್ ಫ್ರೆಂಡ್ಸ್ ಎನ್ನುವ ಅವರು ಲವ್ ವಿಚಾರ ಇನ್ನೇನು ಗುಟ್ಟಾಗಿ ಉಳಿದಿಲ್ಲ. ಶೀಘ್ರವೇ ಈ ತಾರಾ ಜೋಡಿ ಮದುವೆ ದಿನಾಂಕ ಘೋಷಣೆ ಮಾಡಿದರೂ ಅಚ್ಚರಿ ಇಲ್ಲ. ಈ ಮಾತಿಗೆ ಪುಷ್ಠಿ ನೀಡುವಂತೆ ರಶ್ಮಿಕಾ ಮತ್ತು ವಿಜಯ್ ಇಬ್ಬರು ಒಂದೇ ಕಾರಿನಲ್ಲಿ ಪ್ರಯಾಣ ಮಾಡಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವಕೊಂಡ (Vijay Deverakonda) ಇಬ್ಬರು ಒಳ್ಳೆಯ ಪೇರ್ ಎಂಬುದು ತೆರೆ ಮೇಲಿನ 'ಗೀತ ಗೋವಿಂದ' ಮತ್ತು 'ಡಿಯರ್ ಕಾಮ್ರೆಡ್' ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಗೊತ್ತಾಗಿದೆ. ಇವರಿಬ್ಬರು ನಿಜ ಜೀವನದಲ್ಲಿ ಒಂದಾಗಬೇಕು ಎಂಬುದು ಅಪಾರ ಅಭಿಮಾನಿಗಳ ಆಶಯ. ಈ ಆಸೆ ಈಡೇರುವ ಕಾಲ ಹತ್ತಿರವಾಗುತ್ತಿದೆ...

Rashmika Mandanna- Vijay Deverakonda Spotted Together at Airport Both goint in Same car

ಒಂದೇ ಕಾರಲ್ಲಿ ರಶ್ಮಿಕಾ-ವಿಜಯ್ ಪ್ರಯಾಣ

ಇಷ್ಟು ದಿನ ಗುಟ್ಟಾಗಿ ಡೇಟಿಂಗ್ ಮಾಡುತ್ತಿದ್ದ, ಏರ್‌ಪೋರ್ಟ್, ಹೋಟೆಲ್, ರೆಸ್ಟೋರೆಂಟ್ ಹಾಗೂ ಬೀಚ್‌ಗಳಲ್ಲಿ ಸಿಗುತ್ತಿದ್ದರು. ಆದರೆ ಆ ಬಗ್ಗೆ ಫೊಟೋಗಳು ಮಾತ್ರ ಹರಿದಾಡುತ್ತಿದ್ದವು. ಇಬ್ಬರು ಒಂದೇ ಸ್ಥಳದಲ್ಲಿದ್ದ ಪ್ರತ್ಯೇಕ ಫೋಟೋಗಳು ಹಂಚಿಕೊಳ್ಳುತ್ತಿದ್ದರು. ಇದೀಗ ಇಬ್ಬರು ಮುಂಬೈನ ಏರ್‌ಪೋರ್ಟ್‌ನಿಂದ ಕಪ್ಪು ಬಣ್ಣದ ಕಾರಿನಲ್ಲಿ ಒಟ್ಟು ಪ್ರಯಾಣ ಮಾಡಿದ್ದು ಪಾಪರಾಜಿಗಳ ಕ್ಯಾಮೆರಾದಿಂದ ಬಹಿರಂಗವಾಗಿದೆ.

ಈ ಮೂಲಕ ನಟಿ ರಶ್ಮಿಕಾ ಹಾಗೂ ವಿಜಯ್ ಲವ್ ಖಚಿತವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಮಹೂರ್ತವನ್ನು ಸಹ ಘೋಷಿಸಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಿರುವ ರಶ್ಮಿಕಾ ನಟನೆಯ 'ಕುಬೇರ' ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ರಶ್ಮಿಕಾ, ನಟ ಧನುಷ್ ಭಾಗಿಯಾಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣಗೆ ವಿಜಯ್ ಸಾಥ್

ಈ ವೇಳೆ ನಟಿ ರಶ್ಮಿಕಾಗೆ ಸ್ನೇಹಿತ ವಿಜಯ್ ದೇವಕೊಂಡ ಸಾಥ್ ನೀಡಿದ್ದಾರೆ. ಕದ್ದು ಮುಚ್ಚು ಓಡಾಡುತ್ತಿದ್ದ ಈ ಜೋಡಿ ಇದೀಗ ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ. ಮೊನ್ನೆಯಷ್ಟೇ ಇದೇ 'ಕುಬೇರ' ಸಿನಿಮಾ ಪ್ರಚಾರ ವೇಳೆ ನಿಮಗೆ ವಿಜಯ್ ದೇವರಕೊಂಡ ಅವರಲ್ಲಿ ಯಾವ ವಿಚಾರಗಳು ಇಷ್ಟ ಎಂದು ಕೇಳಿ ಪ್ರಶ್ನೆಗೆ ರಶ್ಮಿಕಾ ''ವಿಜಯ್ ಎಲ್ಲ ವಿಚಾರಗಳು ತಮಗೆ ಇಷ್ಟ'' ಎಂದು ಹೇಳಿ ನಾಚಿ ನೀರಾಗಿದ್ದರು. ಈ ಹಿಂದೆಯು ಇಂತಹ ಸನ್ನಿವೇಶಗಳನ್ನು ಇಬ್ಬರು ಎದುರಿಸಿದ್ದಾರೆ. ಪುಷ್ಪಾ-2 ಸಿನಿಮಾಗೆ ವಿಜಯ್ ಶಾಪ್‌ನ ರೌಡಿ ಬಾಯ್ ಟೀ ಶರ್ಟ್ ಧರಿಸಿದ್ದ ರಶ್ಮಿಕಾ ದೇವಕೊಂಡ ಫ್ಯಾಮಿಲಿ ಜೊತೆ ಕೂತು ಸಿನಿಮಾ ನೋಡಿದ್ದರು. ಅವರ ಮನೆಯಲ್ಲಿಯೇ ಹಬ್ಬ ಆಚರಿಸಿಕೊಂಡಿದ್ದ ಫೋಟೋಗಳು ಹರಿದಾಡುತ್ತಲೇ ಇರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+