Rashmika Engagement: ಹೈದ್ರಾಬಾದ್‌ನಲ್ಲಿ ಗುಟ್ಟಾಗಿ ನೆರವೇರಿತಾ ರಶ್ಮಿಕಾ-ವಿಜಯ್ ಎಂಗೇಜ್‌ಮೆಂಟ್?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿಬಂದಂತಿದೆ. ತನ್ನ ಬಹುಕಾಲದ ಗೆಳೆಯ ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದುವೆಯಾಗೋದು ಫಿಕ್ಸ್ ಅನ್ನೋದು ಇಂದು ನಿನ್ನೆಯ ವಿಚಾರವೇನಲ್ಲ. ಈಗಾಗಲೇ ಅವರು ಡೇಟಿಂಗ್‌ನಲ್ಲಿದ್ದು, ಎರಡೂ ಕುಟುಂಬಗಳು ಮದುವೆಗೆ ಒಪ್ಪಿವೆ, ಸದ್ಯದಲ್ಲೇ ಗುಡ್‌ನ್ಯೂಸ್ ಕೊಡ್ತಾರೆ ಅನ್ನೋ ಗಾಸಿಪ್ ಹಲವು ವರ್ಷಗಳಿಂದಲೂ ಇದೆ. ಇದೀಗ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ಗುಟ್ಟಾಗಿ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಂದು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ತಮ್ಮ ನಿವಾಸದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ನೆರವೇರಿದ್ದು, ಆಪ್ತ ಕುಟುಂಬ ಮತ್ತು ಸ್ನೇಹಿತರು ಮಾತ್ರ ಹಾಜರಿದ್ದರು ಎಂದು ವರದಿಯಾಗಿದೆ.

ಈಗಾಗಲೇ ಹಲವಾರು ಮಾಧ್ಯಮಗಳಲ್ಲಿ ಈ ಸುದ್ದಿ ವರದಿಯಾಗಿದೆ. ರಶ್ಮಿಕಾ ಹಾಗೂ ವಿಜಯ್ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಾರ್ವಜನಿಕರ ಗಮನಕ್ಕೆ ತರಲಿಲ್ಲ. ಅಲ್ಲದೆ ಇಲ್ಲಿಯವರೆಗೆ ಯಾವುದೇ ನಿಶ್ಚಿತಾರ್ಥದ ಅಧಿಕೃತ ಫೋಟೋಗಳು ಸಹ ಬಿಡುಗಡೆಯಾಗಿಲ್ಲ. ವರದಿಗಳ ಪ್ರಕಾರ ನಿಶ್ವಿತಾರ್ಥ ನೆರವೇರಿದ್ದು, ಮುಂದಿನ ವರ್ಷವೇ ಅವರು ಮದುವೆಯಾಗಲು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಫೆಬ್ರವರಿ ಕೊನೆಯಲ್ಲಿ ಇವರ ಮದುವೆ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.
ಈ ವಿಚಾರವಂತೂ ಎಲ್ಲೆಡೆ ಹರಿದಾಡುತ್ತಿದೆ. ಇಬ್ಬರೂ ಸೆಲೆಬ್ರಿಟಿಗಳ ಅಭಿಮಾನಿಗಳು ಇದನ್ನು ಗುಟ್ಟಾಗಿ ಇಟ್ಟಿದ್ದೇಕೆ? ಮೊದಲಿನಿಂದಲೂ ಗೊತ್ತಿರುವ ವಿಚಾರವೇ ಅಲ್ಲವೇ? ಎಂದು ಬೇಸರ ಹೊರಹಾಕುತ್ತಿದ್ದಾರೆ. ಆದರೆ ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡದ ಕಾರಣ ಇದು ಕೂಡ ಎಂದಿನಂತೆ ಗಾಸಿಪ್ ಎಂದೇ ಕೆಲವರು ಅಲ್ಲಗಳೆಯುತ್ತಿದ್ದಾರೆ.
ತೆರೆಯ ಮೇಲೆ ಮಿಂಚಿದ್ದ ಜೋಡಿ
"ಗೀತ ಗೋವಿಂದಂ" ಚಿತ್ರದಲ್ಲಿ ರಶ್ಮಿಕಾ ಹಾಗೂ ವಿಜಯ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಸಿಕ್ಕಾಪಟ್ಟೆ ಹಿಟ್ ಕೂಡ ಆಗಿತ್ತು. ಬಳಿಕ "ಡಿಯರ್ ಕಾಮ್ರೇಡ್" ಸಿನಿಮಾದಲ್ಲಿ ಈ ಜೋಡಿ ಮತ್ತೆ ಮೋಡಿ ಮಾಡಿತ್ತು. ಬಳಿಕ ಇವರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಹೆಚ್ಚಾಗಿತ್ತು. ನಂತರ ಅವರ ಒಟ್ಟಿಗೆ ಸಿನಿಮಾ ಮಾಡದೇ ಇದ್ದರೂ ಒಳ್ಳೆಯ ಬಾಂಡಿಂಗ್ ಇತ್ತು.
ಸಹನಟರಾಗಿ, ಸ್ನೇಹಿತರಾಗಿ ಅನೇಕ ಕಾರ್ಯಕ್ರಮಗಳಿಗೆ ಒಟ್ಟಿಗೆ ಹೋಗಿ ಪರಸ್ಪರರ ಸಿನಿಮಾಗಳಿಗೆ ಹಾರೈಸುವುದೆಲ್ಲ ನಡೆದಿತ್ತು. ಡೇಟಿಂಗ್ ವದಂತಿ ನಡುವೆಯೇ ಇಬ್ಬರೂ ಎಂಗೇಜ್‌ಮೆಂಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಿಗೆ ದಿಢೀರ್ ಅಚ್ಚರಿ ನೀಡಿ, ಅವರು ನಿಶ್ಚಿತಾರ್ಥದ ಉಂಗುರಗಳನ್ನು ಬದಲಾಯಿಸಿಕೊಂಡಿದ್ದಾರಂತೆ. ಕೊನೆಗೂ ಈ ಜೋಡಿ ಒಂದಾಯ್ತಲ್ಲ ಎಂದು ಹಾರೈಸುತ್ತಿದ್ದಾರೆ.
ಅವರ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಫೋಟೋಗಳು ಅಥವಾ ವೀಡಿಯೊಗಳು ಇನ್ನೂ ರಿವೀಲ್ ಆಗಿಲ್ಲ. ವಿಜಯ್ ದೇವರಕೊಂಡ ಅವರನ್ನು ರೌಡಿ ಹೀರೋ ಎಂದು ಕರೆಯಲಾಗುತ್ತದೆ. ಕನ್ನಡದಿಂದ ಸಿನಿ ಕೆರಿಯರ್ ಶುರು ಮಾಡಿದ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್ ಎಂದು ಕರೆಸಿಕೊಂಡಿದ್ದಾರೆ. ಮಾಧ್ಯಮಗಳ ಮುಂದೆಯೂ ಅವರು ತಮ್ಮ ಪ್ರೀತಿಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ನಿಶ್ಚಿತಾರ್ಥದ ಮೂಲಕ ಅಚ್ಚರಿ ಮೂಡಿಸಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಅವರ ಕಾಂಬಿನೇಷನ್‌ನಲ್ಲಿ ಹ್ಯಾಟ್ರಿಕ್ ಸಿನಿಮಾ ಕೂಡ ಸದ್ಯದಲ್ಲೇ ಬರಲಿದೆ. ತೆರೆಯ ಮೇಲೆ ಜೋಡಿಯಾಗಿದ್ದ ಇವರು, ನಿಜ ಜೀವನದಲ್ಲೂ ಜೋಡಿಯಾಗುತ್ತಿದ್ದಾರೆ ಎಂದು ಅಭಿಮಾನಿಗಳು ಖುಷ್ ಆಗಿದ್ದಾರೆ.












Click it and Unblock the Notifications