Rashmika Mandanna: ನನ್ನ ಹೃದಯಕ್ಕೆ ಹತ್ತಿರದ ವಿಚಾರದ ಬಗ್ಗೆ ದೊಡ್ಡ ಘೋಷಣೆ: ಇದು ಸರ್‌ಪ್ರೈಸ್ ಎಂದ ರಶ್ಮಿಕಾ
ಕನ್ನಡದಿಂದ ನಟನೆ ಶುರು ಮಾಡಿ, ಪರಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಒಂದೆಡೆ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಹಿಡಿದಿಟ್ಟುಕೊಂಡಿರುವ ಅವರಿಗೆ ಸದ್ಯ ಭಾರತೀಯ ಚಿತ್ರರಂಗದಲ್ಲೇ ಫುಲ್ ಡಿಮ್ಯಾಂಡ್ ಕೂಡ ಇದೆ. ಮತ್ತೊಂದೆಡೆ ಆ ನಟನೊಂದಿಗೆ ಲವ್, ಮದುವೆ, ಡೇಟಿಂಗ್ ಅಂತೆಲ್ಲ ಆಗಾಗ ಗಾಸಿಪ್‌ಗಳೂ ಇವೆ. ಇದರ ನಡುವೆ ರಶ್ಮಿಕಾ ಅವರು ತಮ್ಮ ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್ ನೀಡುವುದಾಗಿ ಸುಳಿವು ಕೊಟ್ಟಿದ್ದಾರೆ. ಇದು ನನ್ನ ಹೃದಯಕ್ಕೆ ಹತ್ತಿರವಾದ ವಿಚಾರದ ಕುರಿತು ದೊಡ್ಡ ಅನೌನ್ಸ್‌ಮೆಂಟ್ ಇದೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಹೌದು, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ತಮ್ಮ ಹೃದಯಕ್ಕೆ ಹತ್ತಿರ ಇರುವ ಹೊಸ ವಿಚಾರವೊಂದರ ಸುಳಿವು ನೀಡಿದ್ದಾರೆ. ಇದರ ಬಗ್ಗೆ ನಾನು ಸೋಮವಾರ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಬೆನ್ನಲ್ಲೇ ರಶ್ಮಿಕಾ ಏನು ಘೋಷಣೆ ಮಾಡಲಿದ್ದಾರೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಹಲವರು ರಶ್ಮಿಕಾ ಅವರು ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡಬಹುದು ಎಂದೂ ಊಹಿಸಿದ್ದಾರೆ.

ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು "ನಾನು ಅಂತಿಮವಾಗಿ ಇದನ್ನು ರೆಕಾರ್ಡ್ ಮಾಡುತ್ತಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಿಮಗೆ ಈಗಾಗಲೇ ತಿಳಿದಿರುವಂತೆ, ನಾನು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಕೆಲಸ ಮಾಡುತ್ತಿದ್ದೇನೆ. ಇದು ಕೇವಲ ಒಂದು ಯೋಜನೆಯಲ್ಲ, ಇದು ನಿಮಗಾಗಿ ನನ್ನ ಪ್ರೀತಿಯನ್ನು ಸುರಿದ ವಿಷಯ. ನೀವು ವರ್ಷಗಳಿಂದ ನನಗೆ ಕಳುಹಿಸಿದ ಪ್ರತಿಯೊಂದು ಸಂದೇಶ, ಪ್ರತಿಯೊಂದು ಪ್ರೀತಿಗಾಗಿ ನಿಮ್ಮ ಮುಂದೆ ದೊಡ್ಡ ಘೋಷಣೆ ಮಾಡುತ್ತಿದ್ದೇನೆ ಎಂದು ಫುಲ್ ಖುಷಿಯಿಂದ ಮಾತನಾಡಿದ್ದಾರೆ.
ಹೊಸ ಬಿಸಿನೆಸ್‌ಗೆ ಕೈಹಾಕಿದ್ರಾ ರಶ್ಮಿಕಾ?
ನೀವು ಆ ವಿಚಾರವನ್ನು ಅನುಭವಿಸುತ್ತೀರಿ, ಅದನ್ನು ಇಷ್ಟಪಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಕಾಯಲು ಸಾಧ್ಯವಿಲ್ಲ. ಇದು ನಾಳೆ ಬಿಡುಗಡೆಯಾಗುತ್ತಿದೆ. ನಾನು ಇದರ ಬಗ್ಗೆ ತುಂಬಾ ತುಂಬಾ ಉತ್ಸುಕಳಾಗಿದ್ದೇನೆ. ಮತ್ತೊಂದೆಡೆ ತುಂಬಾ ನರಳುತ್ತಿದ್ದೇನೆ ಮತ್ತು ತುಂಬಾ ಕೃತಜ್ಞನಾಗಿದ್ದೇನೆ. ಸ್ವಲ್ಪ ಸಮಯದಿಂದ ನನಗಾಗಿ ವಿಶೇಷವಾದದ್ದನ್ನು ಇಟ್ಟುಕೊಂಡಿದ್ದೇನೆ. ನನ್ನನ್ನು ನಂಬಿರಿ, ನಾನು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವುದು ಸುಲಭವಲ್ಲ, ಸ್ವಲ್ಪ ಸಮಯ ಎಂದೂ ಸುಳಿವು ಕೊಟ್ಟಿದ್ದಾರೆ.
ರಶ್ಮಿಕಾ ತಮ್ಮ ಅಭಿಮಾನಿಗಳು ಈ ಹೊಸ ವೃತ್ತಿಪರ ಪಯಣಕ್ಕೆ ಸಜ್ಜಾಗಲು ಕರೆ ನೀಡಿದ್ದು, ಈ ಘೋಷಣೆ ಅವರ ಅಭಿಮಾನಿಗಳಲ್ಲಿ ವಿಶೇಷ ಕುತೂಹಲವನ್ನು ಉಂಟುಮಾಡಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಸೋಮವಾರ ಹೊರಬರುತ್ತವೆ ಎಂದು ನಿರೀಕ್ಷಿಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ರಶ್ಮಿಕಾ ತಮ್ಮ ಹೊಸ ಯೋಜನೆಯ ಕುರಿತು ಮಾಹಿತಿ ನೀಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಕೆಲವರು ಹೇಳುವ ಪ್ರಕಾರ ರಶ್ಮಿಕಾ ಹೊಸ ಉದ್ಯಮಕ್ಕೆ ಕೈಹಾಕುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಹೊಸ ಪ್ರಯತ್ನವು ನಟಿಯ ವೃತ್ತಿ ಜೀವನದಲ್ಲಿ ಹೊಸ ತಿರುವು ನೀಡಲಿದೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.












Click it and Unblock the Notifications