Rashmika Mandanna: ರಶ್ಮಿಕಾ ಮಂದಣ್ಣ ಸೊಂಟದ ಭಾಗಕ್ಕೆ ಗಂಭೀರ ಗಾಯ: ದೊಡ್ಡ ಬಜೆಟ್ ಸಿನಿಮಾಗಳಿಗೆ ಸಂಕಷ್ಟ!

Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾ ಚಿತ್ರೀಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿನಿಮಾದ ಡ್ಯಾನ್ಸ್‌ ಶೂಟಿಂಗ್‌ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಗಾಯವಾಗಿದೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಮುಂಬರುವ ಚಿತ್ರದ ಡ್ಯಾನ್ಸ್‌ ಶೂಟಿಂಗ್‌ನಲ್ಲಿ ತೊಡಗಿದ್ದರು. ಕಷ್ಟವಾದ ಡ್ಯಾನ್ಸ್‌ ಹಾಗೂ ಸಾಹಸದ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ನಟಿ ರಶ್ಮಿಕಾ ಅವರು ಬಿದ್ದಿದ್ದು, ಸೊಂಟದ ಸ್ನಾಯುರಜ್ಜುಗೆ ಪೆಟ್ಟಾಗಿದೆ ಎಂದು ಹೇಳಲಾಗಿದೆ. ಅವರ ಸೊಂಟದ ಸ್ನಾಯುರಜ್ಜು (hip tendon)ಗೆ ಗಂಭೀರವಾದ ಗಾಯವಾಗಿದ್ದು, ಸಂಪೂರ್ಣವಾಗಿ ಬೇರ್ಪಟ್ಟಿದೆ ಎಂದು ಹೇಳಲಾಗಿದೆ.

ರಶ್ಮಿಕಾ ಮಂದಣ್ಣ ಅವರಿಗೆ ರಣಬಾಲಿ ಅಥವಾ ಮೈಸಾ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅಪಘಾತದ ನಂತರ ಸಿನಿಮಾದ ಶೂಟಿಂಗ್ ಅನ್ನು ಕೂಡಲೇ ನಿಲ್ಲಿಸಲಾಗಿದೆ. ಅಲ್ಲದೆ ರಶ್ಮಿಕಾ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿ ರಶ್ಮಿಕಾ ಅವರಿಗೆ ಗಾಯದ ಪ್ರಮಾಣವು ತುಸು ಹೆಚ್ಚಾಗಿಯೇ ಇದೆ. ತೀವ್ರವಾಗಿ ತರಬೇತಿ ನೀಡುವ ವೃತ್ತಿಪರ ಕ್ರೀಡಾಪಟುಗಳಲ್ಲಿ ಇಂತಹ ಸ್ನಾಯುರಜ್ಜು ಹಾನಿ ಹೆಚ್ಚಾಗಿ ಕಂಡುಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಈ ಹಿಂದೆಯೂ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಗಾಯಗಳಾಗಿತ್ತು.

Rashmika Mandanna

ಇದೀಗ ರಶ್ಮಿಕಾ ಅವರಿಗೆ ಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಮತ್ತು ಚಿತ್ರೀಕರಣವನ್ನು ಪುನರಾರಂಭಿಸುವ ಮೊದಲು ಸ್ನಾಯುರಜ್ಜು ಸರಿಯಾಗಿ ಗುಣವಾಗುವುದನ್ನು ಖಚಿತಪಡಿಸಿಕೊಳ್ಳಲು ಆರು ವಾರಗಳ ಕಾಲ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಹೇಳಲಾಗಿದೆ. ಈ ಅವಧಿಯಲ್ಲಿ ವೈದ್ಯರು ನೀಡಿರುವ ಸಲಹೆಗಳನ್ನು ಸಂಪೂರ್ಣವಾಗಿ ಅನುಸರಿಸುವಂತೆ ತಿಳಿಸಲಾಗಿದೆ.

ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರಗಳು

ಇನ್ನು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಸಾಲು ಸಾಲು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಇದೀಗ ಈ ಸಿನಿಮಾಗಳ ಬಿಡುಗಡೆ ದಿನಾಂಕದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ರಣಬಾಲಿ ಮತ್ತು ಮೈಸಾ ಸೇರಿದಂತೆ ಕೆಲವು ದೊಡ್ಡ ಬಜೆಟ್ ಚಿತ್ರಗಳಲ್ಲಿಯೂ ರಶ್ಮಿಕಾ ಅವರು ಕೆಲಸ ಮಾಡುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಅವರನ್ನು ಮದುವೆಯಾದ ನಂತರ ರಶ್ಮಿಕಾ ತಮ್ಮ ಮುಂಬರುವ ಚಿತ್ರ ಮೈಸಾ ಚಿತ್ರೀಕರಣವನ್ನು ಪುನರಾರಂಭಿಸಿದರು. ರವೀಂದ್ರ ಪುಲ್ಲೆ ನಿರ್ದೇಶನದಲ್ಲಿ ಮತ್ತು ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಿಸಿದ ಮೈಸಾವನ್ನು ಗೊಂಡ್ ಬುಡಕಟ್ಟು ಜನಾಂಗದವರ ಸಾಂಸ್ಕೃತಿಕವಾಗಿ ಶ್ರೀಮಂತ ಹಿನ್ನೆಲೆ ಒಳಗೊಂಡಿರುವ ಮೂವಿ ಆಗಿದೆ.

ರಣಬಾಲಿ ಸಿನಿಮಾ ಸಹ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಈ ಸಿನಿಮಾವನ್ನು ನಿರ್ದೇಶಕ ರಾಹುಲ್ ಸಂಕೃತ್ಯಾನ್ ನಿರ್ದೇಶಿಸುತ್ತಿದ್ದಾರೆ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ನಡೆದ ಘಟನೆಗಳ ಕಾಲ್ಪನಿಕ ನಿರೂಪಣೆಯನ್ನು ಈ ಕಥೆ ಒಳಗೊಂಡಿದೆ. ಸೆಪ್ಟೆಂಬರ್ 11 ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಇದರಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+