Rashmika Mandanna: ಪಾರ್ಟಿಯಲ್ಲಿನ ನಟಿ ರಶ್ಮಿಕಾ ಸ್ಟನ್ನಿಂಗ್ ಲುಕ್‌ಗೆ ಫ್ಯಾನ್ಸ್ ಬೋಲ್ಡ್..

Actress Rashmika Mandanna: ಓಮನ್‌ನಲ್ಲಿ ತಮ್ಮ 29ನೇ ಹುಟ್ಟು ಹಬ್ಬ ಆಚರಿಸಿಕೊಂಡ ನಟಿ ರಶ್ಮಿಕಾ ಮಂದಣ್ಣಾ ಅವರು (Rashmika Mandanna) ಮುಂಬೈಗೆ ಬಂದಿಳಿದಿದ್ದಾರೆ. ನಟಿ ತಮ್ಮ ಸಿಗ್ನೇಚರ್ 'ಫಿಂಗರ್ ಹಾರ್ಟ್' ತೋರಿಸುವ ಮೂಲಕ ಸುಂದರ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಅವರ ಫೋಟೋ, ವಿಡಿಯೋ ಕಂಡ ಫ್ಯಾನ್ಸ್ ಸಖತ್ ಎಂಜಾಯ್ ಮಾಡಿದ್ದಾರೆ. ನಮ್ಮ ರಾಣಿಯ ಸುಂದರ ನೋಟ ಎಲ್ಲರನ್ನು ಸೋಲಿಸಿದೆ ಎಂದೆಲ್ಲ ಬರೆದುಕೊಂಡಿದ್ದಾರೆ. ನಿಮ್ಮ ಸ್ಟನ್ನಿಂಗ್ ಲೂಕ್‌ಗೆ ಫಿದಾ ಎಂದು ಕೊಂಡಾಡಿದ್ದಾರೆ.

ಮುಂಬೈನಲ್ಲಿ ಸೋಮವಾರ ರಾತ್ರಿ 'ಮ್ಯಾಡಾಕ್ ಫಿಲ್ಮ್ಸ್' (Maddock Films) ವಾರ್ಷಿಕೋತ್ಸವದ ಪಾರ್ಟಿಯಲ್ಲಿ ಬಾಲಿವುಡ್ ನಟ, ನಟಿಯರ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಪಾಲ್ಗೊಂಡಿದ್ದರು. ಕಪ್ಪು ಕಡುಗೆಂಪು ಮಿಶ್ರಿತ ಡ್ರೆಸ್‌ನಲ್ಲಿ ಕ್ಯೂಟ್ ಆಗಿ ಕಂಡ ರಶ್ಮಿಕಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

Rashmika Mandanna Stunning Look At Maddock Films Party Fans Give Back More Love

ಪಾರ್ಟಿಯಲ್ಲಿ ಬಾಲಿವುಡ್ ತಾರಾ ಮೆರಗು

ಪಾರ್ಟಿಯಲ್ಲಿ ಫೋಟೋ ಫ್ರೇಮ್‌ನಲ್ಲಿ ನಿಂತು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಸಿಗ್ನೇಚರ್ 'ಫಿಂಗರ್ ಹಾರ್ಟ್' ಪೋಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ನಟಿ ಪಾರ್ಟಿಯ ಮೆರಗು ಹೆಚ್ಚಿಸಿದರು. ಅವರ ಸರಳ ಮೇಕಪ್, ಡ್ರೆಸ್ ಸಹ ನೋಡುಗರನ್ನು ಹುಬ್ಬೇರುವಂತೆ ಮಾಡಿತು.

ಈ ಪಾರ್ಟಿಯಲ್ಲಿ ನಟಿ ರಶ್ಮಿಕಾ ಮಾತ್ರವಲ್ಲದೇ ನಟ ಅಭಿಷೇಕ್ ಬಚ್ಚನ್, ಟೈಗರ್ ಶ್ರಾಫ್, ಇಬ್ರಾಹಿಂ ಅಲಿ ಖಾನ್, ನಟಿಯರಾದ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಮ್ಯಾಡಾಕ್ ಫಿಲ್ಮ್ಸ್ ಮುಖ್ಯಸ್ಥ ದಿನೇಶ್ ವಿಜನ್ ಮತ್ತಿತರರು ಪಾಲ್ಗೊಂಡಿದ್ದರು. ಬಾಲಿವುಡ್ ತಾರಾಬಳಗವೇ ನೆರೆದಿತ್ತು.

Take a Poll

ದಾಖಲೆ ಬರೆದ ರಶ್ಮಿಕಾ ಸಿನಿಮಾ

ನಟಿ ರಶ್ಮಿಕಾ ಅವರ ಬಾಲಿವುಡ್‌ನಲ್ಲಿ ಸತತ ಮೂರು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದು, ಆ ಎಲ್ಲ ಸಿನಿಮಾಗಳು ಪ್ರೇಕ್ಷರಿಂದ ಮೆಚ್ಚುಗೆ ಪಡೆದಿವೆ. ಇತ್ತೀಚೆಗೆ ಬಿಡುಗಡೆಯಾದ ಐತಿಹಾಸಿಕ ಆಕ್ಷನ್ ಡ್ರಾಮಾ 'ಛಾವಾ' ಸಿನಿಮಾ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ 7 ನೇ ಬಾಲಿವುಡ್ ಎಂಬ ಖ್ಯಾತಿ ಪಡೆದಿದೆ. ಈ ಸಿನಿಮಾ 'ಸ್ತ್ರೀ 2' ಸಿನಿಮಾದ ದಾಖಲೆ ಪುಡಿ ಮಾಡಿದೆ ಎನ್ನಲಾಗಿದೆ. ಈ ಎರಡೂ ಚಲನಚಿತ್ರಗಳನ್ನು ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು.

ಪ್ಯಾನ್ ಇಂಡಿಯಾ 'ಪುಷ್ಪ' ಸರಣಿ ಸಿನಿಮಾಗಳು ಹಾಗೂ 'ಅನಿಮಲ್' ಸಿನಿಮಾದ ನಂತರ ನಟಿ ರಶ್ಮಿಕಾಗೆ ಬಾಲಿವುಡ್‌ನಲ್ಲಿ ನೆಲೆ ಸಿಕ್ಕಿದೆ. ಕರ್ನಾಟಕ ಮೂಲದ ರಶ್ಮಿಕಾ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಅತೀ ಕಡಿಮೆ ಸಮಯದಲ್ಲಿ ಭಾರೀ ಹೆಸರು ಮಾಡಿದ್ದಾರೆ. ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.

ನಟ ವಿಜಯ್ ಜೊತೆಗೆ ರಶ್ಮಿಕಾ ಬರ್ತಡೆ ಸೆಲೆಬ್ರೇಷನ್?

ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ತಮ್ಮ 29 ನೇ ಹುಟ್ಟುಹಬ್ಬ ಒಮನ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರೊಂದಿಗೆ ನಟ ವಿಜಯ್ ದೇವರಕೊಂಡ ಸಹ ಇದ್ದರು ಎಂಬ ಮಾತು ಕೇಳಿ ಬಂದಿದೆ. ಇವರಿಬ್ಬರು ಬೀಚ್‌ನಲ್ಲಿ ಇರುವ ಪ್ರತ್ಯೇಕ ಫೋಟೋಗಳು ಹರಿದಾಡುತ್ತಿರುವ. ಈ ಇಬ್ಬರು ವರ್ಷಗಳಿಂದಲೇ ಲವ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ. ಇವರಿಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು, ಅದಕ್ಕೆ ಪೂರಕವಾದ ಫೋಟೋಗಳು ಆಗಾಗ ಹರಿದಾಡುತ್ತಲೇ ಇವೆ. ಆದರೆ ಈ ಇಬ್ಬರು ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ಓಮನ್‌ನಿಂದ ಮುಂಬೈಗೆ ಬಂದಿರುವ ರಶ್ಮಿಕಾ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+