Rashmika Mandanna: ವಿಜಯ್ ದೇವರಕೊಂಡ ಕ್ಲಿಕ್ಕಿಸಿದ ಫೋಟೋ ಹಂಚಿಕೊಂಡ್ರಾ ರಶ್ಮಿಕಾ! ಕ್ರೇಜಿ ಫ್ಯಾನ್ಸ್ ಹೇಳಿದ್ದೇನು
Actress Rashmika Mandanna: ಬಹುಭಾಷಾ ನಟಿ, ಬಾಲಿವುಡ್ ನಲ್ಲಿ ಬ್ಯೂಸಿ ಇರುವ ನಟಿ ರಶ್ಮಿಕಾ ಮಂದಣ್ಣ ಅವರು ಸನ್‌ಸೆಟ್ (ಸೂರ್ಯಾಸ್ತ) ವೀಕ್ಷಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದೇ ದಿನದಲ್ಲಿ ಒಂದೂವರೆ ಮಿಲಿಯನ್ ಲೈಕ್ಸ್ ಪಡೆದ ಫೋಟೋಗಳನ್ನು ರಶ್ಮಿಕಾ ಪ್ರೇಮಿ ನಟ ವಿಜಯ್ ದೇವರಕೊಂಡ ಅವರು ಕ್ಲಿಕ್ಕಿಸಿದ್ದಾರೆ ಎನ್ನಲಾಗಿದೆ. ಏಕೆಂದರೆ ಇತ್ತೀಚೆಗೆ ಒಮನ್‌ನಲ್ಲಿ ನಟಿ ಜೊತೆಗೆ ವಿಜಯ್ ಸಹ ಇದ್ದರು ಎನ್ನಲಾಗಿದೆ.
ನಟಿ ರಶ್ಮಿಕಾ ಅವರು ಕ್ಯೂಟ್ ಫೋಟೋಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ನೀವು ಇಷ್ಟದ ಭಂಗಿಯ ಫೋಟೋ ತೆಗೆಸಿಕೊಂಡ ಬಳಿಕವು ನಿಮಗೆ ಏನು ಮಾಡಲು ಮನಸ್ಸಿರುವುದಿಲ್ಲ. ಆಗ ನಿಮ್ಮ ಬೆಸ್ಟಿ ನಿಮ್ಮನ್ನು ಮರಳಿ ಅದೇ ರೀತಿ ಪಡೆಯುತ್ತಾರೆ ಎಂದು ಬೆಸ್ಟ್ ಫ್ರೆಂಡ್ ಕುರಿತು ಬರೆದುಕೊಳ್ಳಲಾಗಿದೆ.

ಇದನ್ನು ನೋಡಿದರೆ ಫ್ಯಾನ್ಸ್ ಈ ಫೋಟೋ ಕ್ಲಿಕ್ಕಿಸಿದ ವಿಜಯ್ ದೇವರಕೊಂಡ ಅವರಿಗೆ ಕ್ರೆಡಿಟ್ ಕೊಡಿ ಎಂದಿದ್ದಾರೆ. ಈ ಮೂಲಕ ರಶ್ಮಿಕಾ ಬಾಯ್ ಫ್ರೆಂಡ್ ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಅಂದಾಜು ಮಾಡಿದ್ದಾರೆ. ಮತ್ತೊಬ್ಬರು ಎಲ್ಲಿ ವಿಜಯ್ ದೇವರಕೊಂಡ ಎಂದು ಪ್ರಶ್ನಿಸಿದ್ದಾರೆ. ಯೂ ಆರ್ ಬ್ಯೂಟಿಫುಲ್, ಲೈವ್ ಯು ಎಂದೆಲ್ಲ ಅಭಿಮಾನಿಗಳು ರಶ್ಮಿಕಾ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಹೋಟೆಲ್, ಬೀಚ್‌ನಲ್ಲಿ ರಶ್ಸು, ವಿಜಿ ಟೈಮ್ ಸ್ಪೆಂಡಿಂಗ್..
ಫ್ಯಾನ್ಸ್ ಹೀಗೆ ಊಹಿಸಲು ಕಾರಣವಿದೆ. ಇತ್ತೀಚೆಗೆ ನಟಿ ರಶ್ಮಿಕಾ ಓಮನ್ ದೇಶದಲ್ಲಿ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರ ಬೀಚ್ ಫೋಟೋಗಳು ಹರಿದಾಡಿದ್ದವು. ಇದೇ ಬೀಚ್‌ನಲ್ಲಿರುವ ನಟ ವಿಜಯ್ ದೇವರಕೊಂಡ ಅವರ ಫೋಟೋ ಸಹ ಹರಿದಾಡಿದ್ದವು. ಆದರೆ ಇಬ್ಬರು ಒಂದೇ ಕಡೆ ಇದ್ದಾರೆಂದು ಅಭಿಮಾನಿಗಳು ಊಹಿಸಿದ್ದಾರೆ. ಹಿಂದಿನಿಂದಲೂ ವಿಶೇಷ ಸಂದರ್ಭಗಳಲ್ಲಿ, ಆಗಾಗ ವಿದೇಶಗಳಲ್ಲಿ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇಬ್ಬರು ಒಟ್ಟಿಗೆ ಕಾಣಸಿಕೊಂಡಿರುವ ಫೋಟೋಗಳು ವೈರಲ್ ಆಗಿದ್ದವು.
1.6 ಮಿಲಿಯನ್ ಲೈಕ್ಸ್, ಸಾವಿರಾರು ಕಾಮೆಂಟ್ಸ್
ರಶ್ಮಿಕಾ ಪೋಸ್ಟ್‌ಗೆ ಒಂದೇ ದಿನದಲ್ಲಿ 1.6 ಮಿಲಿಯನ್‌ಗೂ ಹೆಚ್ಚು ಲೈಕ್ಸ್‌ಗಳು ಬಂದಿವೆ. 4000ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ತಮ್ಮ ಸೌಂದರ್ಯ ಹಾಗೂ ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ರಶ್ಮಿಕಾ ಅದರ ಕುರಿತು ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಆಗಾಗ ಫ್ಯಾನ್ಸ್ ಜೊತೆ ಸಂರ್ಪದಲ್ಲಿರುತ್ತಾರೆ.
'ಅನಿಮಲ್' ನಂತರ ಬಾಲಿವುಡ್‌ನ ನಟ ಸಲ್ಮಾನ್ ಖಾನ್ ಜೊತೆಗೆ 'ಸಿಕಂದರ್' ಸಿನಿಮಾ ಮಾಡಿದ ನಟಿ ರಶ್ಮಿಕಾ ಬಾಲಿವುಡ್‌ನಲ್ಲಿ ನೆಲೆ ಕಂಡು ಕೊಂಡಿದ್ದಾರೆ. 'ಕುಬೇರಾ, ಗರ್ಲ್ ಫ್ರೆಂಡ್' ಸೇರಿದಂತೆ ಹಲವು ಸಿನಿಮಾ, ಜಾಹೀರಾತುಗಳಲ್ಲಿ ನಟಿ ಬ್ಯೂಸಿ ಇದ್ದಾರೆ. ಇತ್ತೀಚೆಗೆ ಅವರು ಪಾರ್ಟಿಯಲ್ಲಿ ಧರಿಸಿದ್ದ ಕೆಂಪು, ಕಪ್ಪು ಮಿಶ್ರಿತ ಡ್ರೆಸ್‌ನಲ್ಲಿ ಸಖತ್ ಮಿಂಚಿಸಿದ್ದರು. ಫ್ಯಾನ್ಸ್ ಕಣ್ಣಿಗೆ ಕುಕ್ಕುವಂತೆ ಮಾಡಿದ್ದರು.












Click it and Unblock the Notifications