Rashmika Mandanna: ಗುರುತೇ ಸಿಗದಂತಾದ ನ್ಯಾಷನಲ್ ಕ್ರಷ್: ಪ್ರೇಮಿಯನ್ನು ಹಾಡಿ ಹೊಗಳಿದ ರಶ್ಮಿಕಾ..
Actress Rashmika Mandann: ಶೂಟಿಂಗ್ ಬ್ಯೂಸಿ ಸ್ಕೆಡ್ಯೂಲ್ ಹಿನ್ನೆಲೆಯಲ್ಲಿ ಮನೆ ಮಂದಿಯನ್ನು, ತಂಗಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದ ನಟಿ ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ನೋಡಲು ಫಿಟ್ ಆಂಡ್ ಫೈನ್ ಆಗಿ, ಸೌಂದರ್ಯಯುತವಾಗಿ ಕಾಣಿಸುತ್ತಿದ್ದ ನಟಿಗೆ ಏನಾಯಿತು? ಎಂದು ನೆಟ್ಟಿಗರು ಕೇಳುತ್ತಾರೆ. ಕಾರಣ ಅವರ ಬದಲಾದ ಲುಕ್. ಗುರತೇ ಸಿಗದಂತೆ ಬದಲಾಗಿರುವ ನಟಿ ರಶ್ಮಿಕಾ ಫೋಟೋ ವೈರಲ್ ಆಗುತ್ತಿದೆ.
ಇದಕ್ಕು ಮೊದಲು ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರೊಂದಿಗೆ ಕದ್ದು ಮುಚ್ಚಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಮೇಲ್ನೋಟಕ್ಕೆ ಮಾತ್ರವೇ ಸ್ನೇಹಿತರಂತೆ ವರ್ತಿಸುತ್ತಾರೆ ಎಂಬ ವದಂತಿಗಳು ಹರಿದಾಡುತ್ತಲೇ ಇವೆ. ಇವರಿಬ್ಬರು ತಮ್ಮ ಪ್ರೇಮ ಸಂಬಂಧ ಒಪ್ಪಿಕೊಳ್ಳದಿದ್ದರೂ ಅವರ ಅಭಿಮಾನಿಗಳು ಮಾತ್ರ ಇವರಿಬ್ಬರು ಪ್ರೇಮಿಗಳೇ ಎಂದು ಹೇಳುತ್ತಿದ್ದಾರೆ.

ವಿಜಯ್ ದೇವರಕೊಂಡ ಅವರ 'ಕಿಂಗ್‌ಡಮ್' ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಆಕ್ಷನ್ ಸಿನಿಮಾ ಇದಾಗಿದ್ದು, ವಿಜಯ್ ಅವರು ಈ ಸಿನಿಮಾ ತಮಗೆ ಬ್ರೇಕ್ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ವಿಜಯ್ ದೇವರಕೊಂಡ ಟೀಸರ್ ಪೋಸ್ಟ ಅನ್ನು ಎಕ್ಸ್‌ನಲ್ಲಿ ರಿ ಶೇರ್ ಮಾಡಿರುವ ನಟಿ ರಶ್ಮಿಕಾ 'ಟೀಸರ್ ತುಂಬಾ ಚೆನ್ನಾಗಿದೆ. ನನಗೆ ತುಂಬಾನೇ ಸ್ಪೆಷಲ್ ಅನ್ನಿಸಿತು. ಜುಲೈ 31ರಂದು ಸಂಭ್ರಮಾಚರಣೆಗೆ ಸಿದ್ಧರಾಗೋಣ' ಎಂದು ಹೇಳಿದ್ದಾರೆ. ಸ್ನೇಹಿತ ವಿಜಯ್‌ನನ್ನು ಹೊಗಳಿದ್ದಾರೆ. ನಿರ್ದೇಶಕರನ್ನು ಟ್ಯಾಗ್ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಶ್ ತಿಳಿಸಿದ್ದಾರೆ. ಬೇರೆ ಬೇರೆ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಟೀಸರ್ ಹಂಚಿಕೊಂಡು ವಿಶ್ ಮಾಡಿದ್ದಾರೆ.
ರಶ್ಮಿಕಾ ಆಗಲಿ, ವಿಜಯ್ ಆಗಲಿ ಇಬ್ಬರು ಸಿನಿಮಾ ಬಿಡುಗಡೆ ವೇಳೆ ಸಾಥ್ ನೀಡುತ್ತಾರೆ. ಪರಿಸ್ಪರ ವಿಶ್ ಮಾಡುತ್ತಾರೆ. ಬೆಳವಣಿಗೆ ನೋಡಿ ಖಷಿ ಪಡುತ್ತಾರೆ. ಆಗಾಗ ಹೋಟೆಲ್, ರೆಸ್ಟೋರೆಂಟ್, ವಿದೇಶಗಳಲ್ಲಿ ಭೇಟಿ ಮಾಡುತ್ತಾರೆ. ಜೊತೆಗೆ ಓಡಾಡುತ್ತಾರೆ ಎಂಬ ವದಂತಿ ಸಹ. ಅದೆಷ್ಟೋ ಹಬ್ಬಗಳನ್ನು ನಟಿ ರಶ್ಮಿಕಾ ವಿಜಯ್ ಅವರ ಮನೆಯಲ್ಲಿ ಆಚರಣೆ ಮಾಡಿ ಪೋಟೋಗಳು ವೈರಲ್ ಆಗುತ್ತಲೇ ಇರುತ್ತವೆ.

ಗುರುತೇ ಸಿಗದಂತಾದ ನಟಿ ರಶ್ಮಿಕಾ! ಆಗಿದ್ದೇನು?
ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ನಟಿ ರಶ್ಮಿಕಾ ಅವರ ನಟನೆಯ 'ಮೈಸಾ' ಚಿತ್ರದ ಪೋಸ್ಟರ್ ಸಾಕ್ಷಿಯಾಗಿದೆ. ತೆಲುಗು, ಹಿಂದಿ ಚಿತ್ರರಂಗದಲ್ಲಿ ಬ್ಯೂಸಿ ಇರುವ ನಟಿ ಆಗಾಗ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ಕ್ಯೂಟ್ ಎಕ್ಸ್‌ಪ್ರೆಶನ್, ಬಗೆ ಬಗೆಯ ಹಾರ್ಟ್ ಸಿಂಬಾಲ್ ತೋರಿಸಲು ಫೇಮಸ್ಸು. ಸದ್ಯ ಅವರಿಗೇ ಏನಾಯ್ತು. ಗುರುತೇ ಸಿಗಂತೆ ಬದಲಾಗಿದ್ದೇಕೆ? ಎಂದು ಫ್ಯಾನ್ಸ್ ಕೇಳುತ್ತಿದ್ದಾರೆ.
ನಟಿ ರಶ್ಮಿಕಾ ಸಿನಿಮಾದಲ್ಲಿ ಮಾತ್ರವಲ್ಲದೇ ಜಾಹೀರಾತುಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಅದೇ ರೀತಿ ಇತ್ತೀಚೆಗೆ ಮ್ಯಾಗ್‌ಜಿನ್ 'DirtyCut 25' ಮುಖ ಪುಟಕ್ಕಾಗಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಅದರಲ್ಲಿ ಬಣ್ಣ ಬಣ್ಣದ ಶಾಟ್ ಹೇರ್ ಕಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗುರುತೇ ಸಿಗದಂತಾಗಿಬಿಟ್ಟಿದ್ದಾರೆ. ಕ್ಯೂಟ್ ಕ್ಯೂಟ್ ಕಾಣುವ ತಮ್ಮ ನಟಿ ಬದಲಾಗಿದ್ದು ಕಂಡು ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಟನೆ ಜೊತೆಗೆ ಜಾಹೀರಾತು, ಮ್ಯಾಗ್‌ಜಿನ್ ಮುಖಪುಟದಲ್ಲಿ ಕಾಣಿಸಿಕೊಳ್ಳುವುದು ವೃತ್ತಿ ಭಾಗವೆಂದೆ ಸೆಲೆಬ್ರೆಟಿಗಳು ಪರಿಗಣಿಸುತ್ತಾರೆ. ಅದೇ ರೀತಿ ರಶ್ಮಿಕಾ ಕೂಡ ಬದಲಾಗಿದ್ದು, ತಮ್ಮ ಫೊಟೋಗಳನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ.












Click it and Unblock the Notifications