Rashmika Mandanna: ಬಹುನಿರೀಕ್ಷೆಯ 'ಥಾಮ' ಪೋಸ್ಟರ್ ರೀಲೀಸ್, ತಡಕಾ ಆಗಿ ರಶ್ಮಿಕಾ! ಅಪ್ಡೇಟ್ಸ್

Rashmika Mandanna Thama: ಬಾಲಿವುಡ್‌ನ ಬಹುನಿರೀಕ್ಷೆಯ 'ಥಾಮ' (Thama) ಸಿನಿಮಾದ ಪೋಸ್ಟರ್‌ಗಳನ್ನು ಚಿತ್ರತಂಡ ಸೋಮವಾರ ಬಿಡುಗಡೆ ಮಾಡಿದೆ. ವಾರಗಳ ಬಳಿಕ ನಿರ್ದೇಶಕ ಆದಿತ್ಯ ಸರ್ಪೋತ್ದಾರ್ ಅವರು ಆಕ್ಷನ್ ಕಟ್ ಹೇಳಿರುವ 'ಥಾಮಾ' ಪೋಸ್ಟರ್‌ಗಳ ಮೂಲಕ ಪಾತ್ರ ಪರಿಚಯಿಸಲಾಗಿದೆ. ಇದರಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಪೋಸ್ಟರ್ ವಿಭಿನ್ನವಾಗಿದೆ. 'ಥಾಮ'ದಲ್ಲಿ ಅವರು ಇದುವರೆಗೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಅವರ ಅಭಿಮಾನಿಗಳು ಪೋಸ್ಟರ್ ನೋಡಿ ಥ್ರಿಲ್ ಆಗಿದ್ದಾರೆ.

ಈ ಸಿನಿಮಾದಲ್ಲಿ ರಶ್ಮಿಕಾ ತಡಕಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ 'ಥಾಮ'ದ ಇತರರ ಪಾತ್ರಗಳ ಪರಿಚಯಿಸುವ ಪೋಸ್ಟರ್‌ಗಳು ರಿಲೀಸ್ ಆಗಿವೆ. ನಟ ವಾಜುದ್ದೀನ್ ಸಿದ್ದಿಕಿ ಅವರು ಯಕ್ಷಸನ್ ಆಗಿ, ಪರೇಶ್ ರಾವಲ್ ಅವರು ರಾಮ್ ಬಜಾಜ್ ಗೋಯಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಾಳೆ ಮಂಗಳವಾರ ಆಗಸ್ಟ್ 19ರಂದು 'ದಿ ವರ್ಲ್ಡ್ ಆಫ್ ಥಾಮಾ' ಬಿಡುಗಡೆ ಆಗಲಿದೆ. ಈ ಮೂಲಕ ಫ್ಯಾನ್ಸ್ ಗೆ ಮತ್ತೊಂದು ಸರ್ಪೈಸ್ ಸಿಗಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ 'ಮ್ಯಾಡಾಕ್ ಫಿಲ್ಮ್ಸ್' ಹ್ಯಾಂಡಲ್‌ನಲ್ಲಿ ಚಿತ್ರತಂಡ ಅನೌನ್ಸ್ ಮಾಡಿದೆ.

Rashmika Mandanna s Intense Look Unveiled in Thama Posters Know More Details

'ಥಾಮ' ಹಿಂದಿ ಸಿನಿಮಾ ಇದೇ ವರ್ಷ ದೀಪಾವಳಿ 2025 ಹಬ್ಬಕ್ಕೆ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಇದು ಪ್ರೇಕ್ಷಕರಿಗೆ ರಕ್ತಸಿಕ್ತ ಪ್ರೇಮಕಥೆ ಉಣಬಡಿಸಲಿದೆ. ಇಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ತಡಕಾ-ರೋಷ್ನಿ ಕಿ ಏಕ್ ಹಿ ಪಹೇಲಿ ಕಿರಣ್ ಪಾತ್ರದಲ್ಲಿ ಪ್ರಸ್ತುತಪಡಿಸಲಾಗಿದೆ. ಪೋಸ್ಟರ್ ನೋಡಿದ ರಶ್ಮಿಕಾ ಫ್ಯಾನ್ಸ್ ಕುತೂಹಲ ಹೆಚ್ಚಾಗಿದೆ.

ಥಾಮ ಕಥೆ ಹೇಗಿದೆ?

'ಥಾಮ' ಸಿನಿಮಾ ಪೋಸ್ಟರ್ ನೋಡಿದರೆ ಕಥೆಯು ಇತಿಹಾಸಕಾರರನ್ನು ನೆನಪಿಸುವಂತಿದೆ. ಭಾರತೀಯ ಜಾನಪದದಲ್ಲಿ ರಕ್ತಪಿಶಾಚಿಯ ಪೌರಾಣಿಕ ಕುರುಹು ಪತ್ತೆಗೆ ಹೊರಟವರಂತೆ ಕಾಣುತ್ತದೆ. ಎರಡು ರೀತಿಯ ನಿರೂಪಣಾ ಶೈಲಿ ಹೊಂದಿರುವ ಕಥೆ ಇದಾಗಿರಲಿದೆ ಎಂದು ವಿಶ್ಲೇಷಿಸಲಾಗಿದೆ. ಕಥೆಯಲ್ಲಿ ಆಧುನಿಕ ಭಾರತ ಮತ್ತು ಪ್ರಾಚೀನ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿಕೊಡಲಾಗುತ್ತದೆ. ಅತೃಪ್ತ ಪ್ರೀತಿಯ ಕಾಡುವ ಕಥೆ ಸಹ ಒಳಗೊಂಡಿದೆ ಎಂದು ಊಹಿಸಲಾಗಿದೆ.

ನಿರ್ದೇಶಕ ಆದಿತ್ಯ ಸರ್ಪೋತ್‌ದಾರ್ ಅವರು ಹಾರರ್ ಕಾಮಿಡಿ ಕಥೆ ಹೇಳಲು ಹೊರಟಿದ್ದಾರೆ ಎನ್ನಲಾಗಿದೆ. ಮುಂದಿನ ಕೆಲವೇ ವಾರಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಭಾರತ ಮಾತ್ರವಲ್ಲದೇ ವಿಶ್ವಾದಾದ್ಯಂತ ಬಿಡುಗಡೆ ಸಜ್ಜಾಗಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪೋಸ್ಟರ್ ಬಿಡುಗಡೆ ಮೂಲಕ ಪ್ರಚಾರ ಆರಂಭಿಸಿದೆ.

ಪುಷ್ಪ ಸರಣಿ ಸಿನಿಮಾ, ಛಾವಾ ಮೂಲಕ ಸಕ್ಸಸ್ ಕಂಡಿರುವ ನಟಿ ರಶ್ಮಿಕಾ ಅವರ ಬಾಲಿವುಡ್‌ನ ಸಿಕಂದರ್ ಹಾಗೂ ತಮಿಳಿನ ಕುಬೇರ ಸಿನಿಮಾ ಅಷ್ಟಾಗಿ ಹೆಸರು ಮಾಡಲಿಲ್ಲ. ಇದೀಗ 'ಥಾಮ' ಹಾಗೂ 'ದಿ ಗರ್ಲ್ ಫ್ರೆಂಡ್' ಮೇಲೆ ಅಭಿಮಾನಿಗಳಿಗೆ ಅಪಾರ ನಿರೀಕ್ಷೆ ಇದೆ. ಇವುಗಳೂ ಸೇರಿದಂತೆ 'ಮೈಸಾ' ಹಾಗೂ ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾಗಳಲ್ಲಿ ತಯಾರಿಯಲ್ಲಿ ರಶ್ಮಿಕಾ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+