Rashmika Mannada: ಪುಷ್ಪಾ-2 ಶ್ರೀವಲ್ಲಿ ಪಾತ್ರದ ಫೋಟೋಗಳು ವೈರಲ್

ಬೆಂಗಳೂರು, ನವೆಂಬರ್ 15: ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪಾ-2' ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್‌ ಅವರಿಗೆ ನಾಯಕಿಯಾಗಿರುವ ನಟಿ ರಶ್ಮಿಕಾ ಮಂದಣ್ಣಾ ಅವರ ಫೋಟೋಗಳು ವೈರಲ್ ಆಗಿವೆ. ಹಳೇಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ 'ಪುಷ್ಪಾ-2 'ಗಾಗಿ ನಟಿ ವಿಭಿನ್ನ ಪ್ರಚಾರ ನಡೆಸಿದ್ದಾರೆ. ಅವರ ಫೋಟೋಗಳನ್ನು ಅಭಿಮಾನಿಗಳು ಹೆಚ್ಚು ಹೆಚ್ಚು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ 'ಪುಷ್ಪಾ-2' ಡಬ್ಬಿಂಗ್ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಡಬ್ಬಿಂಗ್ ಫೋಟೋ ಹಂಚಿಕೊಂಡು, ಸಿನಿಮಾ ಹೇಗೆ ಎಂಬುದರ ಕುರಿತು ನಟಿ ರಶ್ಮಿಕಾ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಪುಷ್ಪಾ 1ರಲ್ಲಿ ಸೂಪರ್ ಹಿಟ್ ಆಗಿದ್ದ 'ಸಾಮಿ ಸಾಮಿ...' ಹಾಡಿನ ಫೋಟೋಗಳು ಸೇರಿದಂತೆ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Rashmika Mandanna Promotes Pushpa-2 Film with Throwback Photos from Pushpa-1

ಪುಷ್ಪಾ 2 ಡಿಸೆಂಬರ್ 5ರಂದು ರಿಲೀಸ್ ಆಗುತ್ತಿದ್ದು. ಅದಕ್ಕು ಮುನ್ನ ನವೆಂಬರ್ 17ರಂದು ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದೆ. ಇದು ಪ್ರೀ ರಿಲೀಸ್ ಇವೆಂಟ್ ಸಹ ಆಗಿರಲಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ನಡೆಸಿದ್ದಾರೆ.

ನಟಿ ರಶ್ಮಿಕಾ ಈ ಫೋಟೋಗಳು ವೈರಲ್

ಇದಕ್ಕೆ ಪೂರಕವಾಗಿ ನಟಿ ರಶ್ಮಿಕಾ ಮಂದಣ್ಣಾ ಅವರು ಈವರೆಗೆ ಹಂಚಿಕೊಳ್ಳದ ಥ್ರೋಬ್ಯಾಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪುಷ್ಪಾ 1 ಸಿನಿಮಾ ಶೂಟಿಂಗ್, ಮೇಕಪ್, ಸೆಟ್‌, ಹಾಡಿನ ಚಿತ್ರೀಕರಣದ ವಿಡಿಯೋ, ಸಹ ಕಲಾವಿದರೂ, ನೃತ್ಯಗಾರರು, ತಮ್ಮ ಉಡುಪು, ಆ ಚಿತ್ರದ ಪ್ರಮೋಷನ್ ವೇಳೆ ನಟ ಅಲ್ಲು ಅರ್ಜುನ್ ಜೊತೆಗಿನ ಫೋಟೋಗಳನ್ನು ನಟಿ ರಶ್ಮಿಕಾ ಹಂಚಿಕೊಂಡಿದ್ದಾರೆ.

ಅವರ ಈ ವಿಶೇಷ ರೀತಿಯ ಪ್ರಮೋಷನ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಇರುವ ನಟಿ ರಶ್ಮಿಕಾ ಮಂದಣ್ಣಾ ಅವರು ತಮ್ಮ ದೈನಂದಿನ ಚಟುವಟಿಕೆ, ಸಿನಿಮಾಗಳ ಬಗ್ಗೆ ಅಪ್ಡೇಟ್ ಕೊಡುವುದನ್ನು ಮರೆಯುವುದಿಲ್ಲ. ನಟಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ತಮ್ಮ ಅಭಿಮಾನಿಗಳ ಜತೆ ಸಂಪರ್ಕದಲ್ಲಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+