Rashmika Mandanna: 'ಪುಷ್ಪಾ-2' ಪ್ರಮೋಷನ್‌ನಲ್ಲಿ ನಟಿ ರಶ್ಮಿಕಾ ಬ್ಯೂಸಿ, ಬಾಲಿವುಡ್ 'ಚಾವಾ' ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ..
Actress Rashmika Mandanna Films: ತೆಲಗು ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣಾ ಅವರು ಜೊತೆಗೆ ನಟಿಸಿರುವ 'ಪುಷ್ಪಾ-2' (Pushpa-2) ಸಿನಿಮಾ ಇನ್ನೇನು ಬಿಡುಗಡೆಗೆ ಒಂದು ವಾರವಷ್ಟೇ ಬಾಕಿ ಇದೆ. ಡಿಸೆಂಬರ್ 6ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಪುಷ್ಪಾ-2' ರಿಲೀಸ್ ಆಗಲಿದೆ. ಇತ್ತ ಅದೇ ದಿನ ಬಾಲಿವುಡ್ ಬಹುನಿರೀಕ್ಷೆಯ ನಟ ವಿಕ್ಕಿ ಕೌಶಲ್ ಅಭಿನಯದ 'ಚಾವಾ '(Chhaava) ಸಿನಿಮಾ ಸಹ ರಿಲೀಸ್‌ಗೆ ರೆಡಿ ಆಗಿತ್ತು. ಆದರೆ ಕಾರಣಾಂತರಗಳಿಂದ 'ಚಾವಾ' ಸಿನಿಮಾ ಬಿಡುಗಡೆ ದಿನಾಂಕ ದಿಢೀರ್ ಮುಂದೂಡಿಕೆ ಮಾಡಲಾಗಿದೆ.
'ಪುಷ್ಪಾ' ಸಿನಿಮಾದ ಮೊದಲ ಭಾಗ ಈಗಾಗಲೇ ಬಿಡುಗಡೆ ಆಗಿ ಭರ್ಜರಿ ಸಕ್ಸಸ್ ಕಂಡಿದೆ. ಅದರ ಬೆನ್ನಲ್ಲೆ ಪುಷ್ಪಾ 2 (ಭಾಗ ಎರಡು) ತೆರೆಗೆ ಬರುತ್ತಿದೆ. ಇದು ಬೃಹತ್ ಸಿನಿಮಾ ಆಗಿದ್ದು, ಸಾಕಷ್ಟು ನಿರೀಕ್ಷೆಗಳು ಇವೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕ್ರೇಜ್ ಹೆಚ್ಚಾಗಿದೆ. ಈ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಆಗಲಿದೆ.

ಇತ್ತ ಬಾಲಿವುಡ್‌ನಲ್ಲಿ ಸಿದ್ಧವಾಗಿರುವ ಮರಾಠಾ ದೊರೆ ಸಂಭಾಜಿ ಜೀವನ ಆಧಾರಿತ ಸಿನಿಮಾದಲ್ಲಿ ನಟ ವಿಕ್ಕಿ ಕೌಶಲ್‌ಗೆ ಪುಷ್ಪಾ ನಟಿ ರಶ್ಮಿಕಾ ಮಂದಣ್ಣಾ ಅವರೇ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಮೇಲೂ ವ್ಯಾಪಕ ನಿರೀಕ್ಷೆಗಳು ಇವೆ. ಈ ವರ್ಷದ ಭರವಸೆ ಸಿನಿಮಾ ಆಗಲಿದೆ. ರಶ್ಮಿಕಾ ಇದರಲ್ಲಿ ರಗಡ್ ಪಾತ್ರ ಮಾಡಿದ್ದಾರೆ ಎನ್ನಲಾಗಿದೆ.
ಎರಡು ಪ್ರಮುಖ ಸಿನಿಮಾ ಒಂದೇ ದಿನ ಬಿಡುಗಡೆ
ಈ ಎರಡು ಪ್ರಮುಖ ಸಿನಿಮಾಗಳು ಒಂದೇ ದಿನ ಬಿಡುಗಡೆ ಆದರೆ ಕಲೆಕ್ಷನ್, ಥಿಯೇಟರ್ ಹಂಚಿಕೆ ವಿಚಾರದಲ್ಲಿ ತೊಂದರೆ ಆಗುವುದು ಸೇರಿದಂತೆ ಹಲವು ಲೆಕ್ಕಾಚಾರದಿಂದಾಗಿ 'ಚಾವಾ' ಸಿನಿಮಾ ಮುಂದಿನ ವರ್ಷ 2025ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಸದ್ಯ ಸಿನಿಮಾ ಮುಂದೂಡಿರುವುದು ಅಧಿಕೃತವಾಗಿದೆ. ಆದರೆ ಬಿಡುಗಡೆಯ ಹೊಸ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಬಾಲಿವುಡ್ ಮೂಲಗಳು ಮಾಹಿತಿ ನೀಡಿವೆ.
It’s getting closerrrr! ❤️🔥❤️🔥💃🏻 https://t.co/dB1zwBNaXP
— Rashmika Mandanna (@iamRashmika) November 28, 2024
ಪುಷ್ಪಾ ಪ್ರಮೋಷನ್: ಸೀರೆಯಲ್ಲಿ ನಟಿ ರಶ್ಮಿಕಾ ಮಿಂಚಿಂಗ್
ಸದ್ಯ ನಟಿ ರಶ್ಮಿಕಾ ಮಂದಣ್ಣಾ ಅವರು ಪುಷ್ಪಾ2 ಸಿನಿಮಾ ಪ್ರಮೋಷನ್‌ನಲ್ಲಿ ಬ್ಯೂಸಿ ಇದ್ದಾರೆ. ಪಾಟ್ನಾ, ಹೈದರಾಬಾದ್, ಕೇರಳ, ಮುಂಬೈ ಹೀಗೆ ವಿವಿಧೆಡೆ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ನಟ ಅಲ್ಲು ಅರ್ಜುನ್ ಹಾಗೂ ಸೀರೆಯಲ್ಲಿ ಹಾಟ್ ಹಾಟ್ ಆಗಿ ಕಾಣಿಸುತ್ತಿರುವ ನಟಿ ರಶ್ಮಿಕಾರನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಕರ್ನಾಟಕ ಸೇರಿದಂತೆ ಇನ್ನೊಂದೆರಡು ಕಡೆಗಳಲ್ಲಿ ಪ್ರಮೋಷನ್ ನಡೆಸುವುದು ಬಾಕಿ ಇದೆ. ಇಡೀ ಪುಷ್ಪಾ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಟೈಲರ್ ಬಳಿಕ ಹಾಡು ಬಿಡುಗಡೆ ಮಾಡುವ ಮೂಲಕ ಸಖತ್ ಕ್ರೇಜ್ ಸೃಷ್ಟಿಸುತ್ತಿದೆ.
ಮುಖ್ಯವಾದ ವಿಷಯವೆಂದರೆ, ಪುಷ್ಪನಿಗೆ ಜೊತೆಯಾದ ರಶ್ಮಿಕಾ ಮಂದಣ್ಣಾ ಹಾಗೂ ಹಾಡಿನಲ್ಲಿ ಸಾಥ್ ಕೊಟ್ಟಿರುವ ನಟಿ ಶ್ರೀಲೀಲಾ ಇಬ್ಬರು ಕನ್ನಡ ಮೂಲದವರೇ ಎಂಬುದು ಮತ್ತೊಂದು ವಿಶೇಷವಾಗಿದೆ.
ಪುಷ್ಪಾ 2 ಸಿನಿಮಾ ತೆಲುಗು, ಕನ್ನಡ, ಹಿಂದಿ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ಪ್ಯಾನ್‌ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.












Click it and Unblock the Notifications