Rashmika Mandanna: ತಂಗಿ ಬೆಳೆಯುವುದನ್ನು ನೋಡಲಾಗ್ತಿಲ್ಲ! ರಜೆಗಾಗಿ ಅಳುತ್ತೇನೆ: ನಟಿ ರಶ್ಮಿಕಾ
Actress Rashmika Mandanna: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಇರುವ ಪ್ಯಾನ್ ಇಂಡಿಯಾ ನಟಿ. ಸ್ಟಾರ್ ಪಟ್ಟ ಸಿಗುತ್ತಿದ್ದಂತೆ ಜಾಹೀರಾತು, ಸಿನಿಮಾ ಶೂಟಿಂಗ್‌ಗಳಲ್ಲಿ ರಶ್ಮಿಕಾ ನಿರತರಾಗಿದ್ದಾರೆ. ಎಷ್ಟೇಂದರೆ ತನ್ನ ಕುಟುಂಬದಿಂದ ವರ್ಷಗಳಿಂದ ದೂರ ಉಳಿಯುವಷ್ಟು ಬ್ಯೂಸಿಯಾಗಿದ್ದಾರೆ. ಇದೆಲ್ಲ ನೆನೆದು ಭಾವುಕರಾಗಿರುವ ನಟಿ ರಸ್ಮಿಕಾ ವೈಯಕ್ತಿಕ ಹಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
ಕನ್ನಡದ ಮೂಲಕ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ನಟಿ ಮಾತ್ರವಲ್ಲದೇ ಅತೀ ಚಿಕ್ಕವಯಸ್ಸಿನಲ್ಲೇ ಉತ್ತುಂಗಕ್ಕೆ ಏರಿದ್ದಾರೆ. ಬೇರೆ ಬೇರೆ ಊರುಗಳಲ್ಲಿ ಶೂಟಿಂಗ್, ಪ್ರವಾಸ ಹೀಗೆ ಬ್ಯೂಸಿ ಸ್ಕೆಡ್ಯೂಲ್‌ನಲ್ಲಿ ಸದಾ ಕಾಲ ಕಳೆಯುತ್ತಾರೆ. ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿ ಪ್ರೇಕ್ಷಕರಿಗೆ ಅಪ್ಡೇಟ್ ನೀಡುತ್ತಾರೆ. ಸದ್ಯ ತನ್ನ ತಂಗಿ, ಕುಟುಂಬ ಹಾಗೂ ಸ್ನೇಹಿತರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅದಕ್ಕಾಗಿ ನಾನು ಕಣ್ಣೀರು ಹಾಕುತ್ತೇನೆ ಎಂದು ನೋಡ್ ಮ್ಯಾಗ್‌ಗೆ ನೀಡಿ ಸಂದರ್ಶನದಲ್ಲಿ ನಟಿ ರಶ್ಮಿಕಾ ಹೇಳಿಕೊಂಡಿದ್ದಾರೆ.

ಸ್ಟಾರ್ಡಂ, ಶೂಟಿಂಗ್, ಸಿನಿಮಾ, ಕುಟುಂಬ ಮುಖ್ಯವಾಗಿ ತಮ್ಮ ತಂಗಿ ಶಿಮನ್ ಮಂದಣ್ಣ ಕುರಿತು ರಶ್ಮಿಕಾ ಮಾತನಾಡಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವ ನಾನು ನನ್ನ ವೃತ್ತಿಯಿಂದಾಗಿ ವೈಯಕ್ತಿಕ ಜೀವನದಿಂದ ದೂರವಾಗಿದ್ದೇನೆ. 08 ವರ್ಷಗಳಿಂದ ನಾನು ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದೇನೆ. ಬಿಡುವಿನ ಸಮಯಕ್ಕಾಗಿ, ರಜೆಗಳಿಗಾಗಿ ನಾನು ಅಳುತ್ತೇನೆ ಎಂದಿದ್ದಾರೆ.
ಹೆಚ್ಚಿನ ಸಮಯ ಕುಟುಂಬದ ಜೊತೆಗೆ ಕಳೆಯಬೇಕು ಎಂದನಿಸಿದರೂ ಅದು ಆಗುತ್ತಿಲ್ಲ. ತಂಗಿ ಶಿಮನ್ ನನಗಿಂತ 16 ವರ್ಷ ಚಿಕ್ಕವಳು. ಅವಳಿಗೀಗ 13 ವರ್ಷ ನನ್ನಷ್ಟು ಎತ್ತರಕ್ಕೆ ಬೆಳೆದಿದ್ದಾಳೆ. ಅವರ ಬೆಳವಣಿಗೆಯನ್ನು ನಾನು ಎದುರಿಗೆ ಇದ್ದುಕೊಂಡು ನೋಡಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ. ಇದು ಸದಾ ನನ್ನನ್ನು ಅಳವಾಗಿ ಕಾಡುತ್ತದೆ. ನನ್ನ ತಂಗಿಯನ್ನು ನಾನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತೇನೆ.
ನಾನು ಒಂದೂವರೆ ವರ್ಷದಿಂದ ಕೊಡಗಿನ ಮನೆಗೆ ತೆರಳಿಲ್ಲ. ತಂಗಿ ಅಪ್ಪ-ಅಮ್ಮ ಮತ್ತು ಸ್ನೇಹಿತರನ್ನು ನೋಡಲು ಆಗುತ್ತಿಲ್ಲ. ಕುಟುಂಬದ ಎಲ್ಲ ಪ್ಲಾನ್‌ಗಳಲ್ಲೂ ನಾನು ಇರುತ್ತಿದ್ದೆ. ಸದ್ಯ ಹಾಗೆ ಆಗುತ್ತಿಲ್ಲ. ಹೊರಗುಳಿದಂತೆ ಭಾಸವಾಗುತ್ತಿದೆ. ಇದೆಲ್ಲವು ನನ್ನ ಜೀವನದ ವಾಸ್ತವ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ಅಮ್ಮನ ಮಾತು ನೆನೆದ ರಶ್ಮಿಕಾ..
ನನ್ನಮ್ಮ ನನಗೆ ಮೊದಲಿನಿಂದಲೂ ಹೇಳುತ್ತಿದ್ದ ಸಲಹೆ ಎಂದರೆ ಇದೊಂದೆ, 'ನಿನಗೆ ವೈಯಕ್ತಿಕ ಜೀವನ ಬೇಕಾದರೆ, ವೃತ್ತಿ ಜೀವನ ತ್ಯಾಗ ಮಾಡಬೇಕು. ವೃತ್ತಿಯಲ್ಲಿ ಸಾಧನೆ ಮಾಡಬೇಕಾದರೆ ವೈಯಕ್ತಿಕ ಜೀವನದಿಂದ ದೂರವಾಗಬೇಕಾಗುತ್ತದೆ' ಎಂದಿದ್ದರು. ಅವರ ಮಾತು ನನಗೆ ಸದಾ ಜ್ಞಾಪಕದಲ್ಲಿರುತ್ತದೆ. ಹೀಗಾಗಿ ನಾನು ಹೆಚ್ಚ ಕೆಲಸ ಮಾಡುವ ಜೊತೆಗೆ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎರಡು ಸಮತೋಲವಾಗಿ ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.
ರಶ್ಮಿಕಾ ನಟನೆಯ ಕುಬೇರ ಇತ್ತೀಚೆಗೆ ಬಿಡುಗಡೆ ಆಗಿದೆ. ದಿ ಗರ್ಲ್ ಫ್ರೆಂಡ್, ಮೈಸಾ ಸೇರಿದಂತೆ ಅನೇಕ ಪ್ರಾಜೇಕ್ಟ್‌ಗಳಲ್ಲಿ ನಟಿ ಬ್ಯೂಸಿಯಾಗಿದ್ದಾರೆ. ಈ ವೇಳೆ ಅವರು ತಮ್ಮ ಕುಟುಂಬ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಸ್ಟಾರ್ ನಟ, ನಟಿಯರು ಸಿನಿಮಾ ಬ್ಯೂಸಿ ಸ್ಕೆಡ್ಯೂಲ್‌ನಲ್ಲಿ ಕುಟುಂಬವನ್ನು ಆಪ್ತರನ್ನು ಮಿಸ್ ಮಾಡಿಕೊಳ್ಳುವುದು ಸಾಮಾನ್ಯ. ಹೀಗಾಗಿಯೇ ಅವರು ಶೂಟಿಂಗ್, ಕೊಟ್ಟ ಮಾತಿನಂತೆ ಚಿತ್ರೀಕರಣ, ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ ಪ್ರವಾಸಕ್ಕೆ, ವಿದೇಶಕ್ಕೆ ತೆರಳುತ್ತಾರೆ. ಕೆಲವೊಮ್ಮೆ ಪ್ರೀತಿ ಪಾತ್ರರ ಜೊತೆ, ಕುಟುಂಬದ ಜೊತೆ ತೆರಳುತ್ತಾರೆ. ಮೊನ್ನೆ ಕುಬೇರ ಸಿನಿಮಾ ಬಿಡುಗಡೆ ಬಳಿಕ ಪ್ರಚಾರ, ಶೂಟಿಂಗ್‌ನಲ್ಲಿ ತೊಡಗಿದ್ದ ನಟಿ ರಶ್ಮಿಕಾ ವಿದೇಶಕ್ಕೆ ಹೋಗಿದ್ದರು. ಮುಂದಿನ ದಿನಗಳಲ್ಲಿ ಅವರ ಕೈಲಿರುವ ಸಾಕಷ್ಟು ಸಿನಿಮಾಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಮತ್ತೆ ಬ್ಯೂಸಿಯಾಗಲಿದ್ದು, ಈ ವೇಳೆ ಅವರು ತಮ್ಮ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಬೇಸರ ಹೊರ ಹಾಕಿದ್ದಾರೆ.












Click it and Unblock the Notifications