Rashmika Mandanna Dating: ವಿಜಯ್ ಜೊತೆ ಹೋಟೆಲ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ! ವಿಡಿಯೋ
Actress Rashmika Mandanna: ನಾನು ಹೈದರಾಬಾದ್‌ನವಳು, ನಾನು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲೇ, ನಾನು ಕರ್ನಾಟಕದವಳು ಎನ್ನುವ ಮೂಲಕ ಮುನ್ನೆಲೆಗೆ ಬಂದು ಟ್ರೋಲ್ ಆಗಿದ್ದ ಕನ್ನಡದ ನಟಿ ರಶ್ಮಿಕಾ ಮಂದಣ್ಣಾ ಡೇಟಿಂಗ್ ಮಾಡುತ್ತಿದ್ದಾರೆ. ರಶ್ಮಿಕಾ, ನಟ ವಿಜಯ್ ದೇವರಕೊಂಡ ಅವರೊಂದಿಗೆ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು, ವಿಡಿಯೋಗಳು ಹರಿದಾಡುತ್ತಿವೆ. ಇದು ಅವರ ಅಭಿಮಾನಿಗಳ ಕುತೂಹಲ, ಚರ್ಚೆಗೆ ಕಾರಣವಾಗಿದೆ.
ನಟಿ ರಶ್ಮಿಕಾ ಮತ್ತು ನಟ ವಿಜಯ್ ಮಧ್ಯೆ ಬಹುದಿನಗಳಿಂದ ಪ್ರೀತಿ ಇದೆ. ಆಗಾಗ ಅವರು ಒಟ್ಟಿಗೆ ಊಟಕ್ಕೆ ಸೇರುತ್ತಾರೆ. ಪ್ರವಾಸಕ್ಕೆ ಹೋಗುತ್ತಾರೆ. ಅಲ್ಲದೇ ಒಂದೇ ರೀತಿಯ ಬಟ್ಟೆ ಹಾಕಿದ್ದರ ಫೋಟೋಗಳು ವೈರಲ್ ಆಗುತ್ತಲೆ ಇರುತ್ತವೆ. ಈ ಮೂಲಕ ಅವರ ರಿಲೇಷನ್‌ಶಿಪ್ ಬಗ್ಗೆ ಆಗಾಗ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಈ ಜೋಡಿ ಎಲ್ಲೂ ಬಹಿರಂಗವಾಗಿ ತಮ್ಮಿಬ್ಬರ ಪ್ರೀತಿ ಸಂಬಂಧದ ಕುರಿತು ಮಾತನಾಡಿಲ್ಲ.

ರಶ್ಮಿಕಾ-ವಿಜಯ್ ಪ್ರೇಮ ವದಂತಿ ನಿಜ!
ಆದರೆ ಬೇರೆ ಬೇರೆ ಸಮಯದಲ್ಲಿ ಒಂದೇ ಸ್ಥಳದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮಾರ್ಚ್ 31ರಂದು ಸೋಮವಾರ ಊಟಕ್ಕೆ ಹೋಗಿದ್ದ ಒಂದೇ ಹೋಟೆಲ್‌ನಿಂದ ನಡೆದು ಬರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಪ್ರತ್ಯೇಕವಾಗಿ ಒಂದೇ ಹೋಟೆಲ್‌ನಿಂದ ಹೊರ ಬರುವ ದೃಶ್ಯಗಳು ಕಾಣಿಸುತ್ತವೆ. ಹೀಗಾಗಿ ಫ್ಯಾನ್ಸ್ ಇವರಿಬ್ಬರ ಮಧ್ಯದ ಪ್ರೇಮ ವದಂತಿಯಲ್ಲ. ಇದು ನಿಜ ಎಂಬ ಮುದ್ರೆ ಹಾಕಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋ, ವಿಡಿಯೋಗಳು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿವೆ. ನಟಿ ರಶ್ಮಿಕಾ ಮತ್ತು ವಿಜಯ್ ಅವರು ಕೆಲವು ಭಾರಿ ಸೂಕ್ಷ್ಮ ರೀತಿಯಲ್ಲಿ ತಾವು ಡೇಟಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ. ಹೆಸರು ಹೇಳದೇ ಪರೋಕ್ಷವಾಗಿ ತಿಳಿಸಿದ್ದಾರೆ. ನೆನ್ನೆ ಅವರು ಒಂದೇ ಹೋಟೆಲ್‌ನಲ್ಲಿ ಊಟಕ್ಕೆ ಸೇರಿದ್ದರು. ಬಳಿಕ ಕಾರಿನತ್ತ ಬಂದ ವಿಡಿಯೋ ವೈರಲ್ ಆಗಿದೆ. ಇದು ಇವರಿಬ್ಬರ ಮಧ್ಯದ ಲವ್, ಮದುವೆ ಆಗಲಿದ್ದಾರೆ ಮತ್ತೊಂದು ತಾರಾ ಜೋಡಿ ಎಂಬ ವದಂತಿಯನ್ನು ಜೀವಂತವಾಗಿರಿಸಿದೆ.

'ಸಿಕಂದರ್' ಸಿನಿಮಾದಲ್ಲಿ ರಶ್ಮಿಕಾ ಮಿಂಚಿಂಗ್
ಸದ್ಯ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ಸಲ್ಮಾನ್ ಖಾನ್ ಅವರ ಬಾಲಿವುಡ್ ಸಿನಿಮಾ 'ಸಿಕಂದರ್' ರಿಲೀಸ್ ಆಗಿದೆ. ಈದ್‌ಗೆ ಹೊಸ ಸಿನಿಮಾ ರಿಲೀಸ್ ಆಗಿದ್ದು, ನಟಿ ರಶ್ಮಿಕಾ ಮತ್ತೊಂದು ಸಕ್ಸಸ್ ನಿರೀಕ್ಷೆ ಯಲ್ಲಿದ್ದಾರೆ. 'ಅನಿಮಲ್' ಹಿಟ್ ಆಗಿದ್ದು, ರಶ್ಮಿಕಾರನ್ನು ಬಾಲಿವುಡ್‌ನಲ್ಲಿ ನಡೆಲೆಯೂರುವಂತೆ ಮಾಡಿತ್ತು. ಅದರ ಬೆನ್ನಲ್ಲೆ 'ಚಾವಾ' ಮತ್ತು 'ಸಿಕಂದರ್' ರಿಲೀಸ್ ಆಗಿವೆ.
'ಕುಬೇರ', 'ದಿ ಗರ್ಲ್‌ಫ್ರೆಂಡ್' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಬ್ಯೂಸಿಯಾಗಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಚೊಚ್ಚಲ ಸಿನಿಮಾದಲ್ಲಿ ಸಹನಟ ರಕ್ಷಿತ್ ಶೆಟ್ಟಿ ಅವರೊಂದಿಗೆ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದು ಮುರಿದುಕೊಂಡ ಅವರು ನಟ ವಿಜಯ್ ದೇವರಕೊಂಡ ಅವರೊಂದಿಗೆ ಆಗಾಗ ಕಾಣಿಸಿಕೊಳ್ಳುವ ಮೂಲಕ ಕುತೂಹಲ ಕೆರಳುವಂತೆ ಮಾಡಿದ್ದಾರೆ.












Click it and Unblock the Notifications