Ranjani Boyfriend: ಬಾಯ್‌ಫ್ರೆಂಡ್ ಪರಿಚಯಿಸಿದ 'ಕನ್ನಡತಿ' ರಂಜನಿ ರಾಘವನ್‌

'ಕನ್ನಡತಿ' ಧಾರವಾಹಿ ಮೂಲಕ ಕನ್ನಡಿಗರ ಮನೆ, ಮನದಲ್ಲಿ ಹೆಸರಾಗಿರುವ ನಟಿ ರಂಜನಿ ರಾಘವನ್, ಕೊನೆಗೂ ತಮ್ಮ ಜೀವನ ಸಂಗಾತಿಯನ್ನು ಪರಿಚಯಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾವು ಕೈ ಹಿಡಿಯಲಿರುವ ಹುಡುಗನ ಜೊತೆಗಿರುವ ಫೋಟೊವನ್ನು ಹಂಚಿಕೊಂಡಿದ್ದು, ಆಕರ್ಷಕ ಕ್ಯಾಪ್ಷನ್ ನೀಡಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ಇದ್ದ ಎಲ್ಲಾ ಗಾಸಿಪ್‌ಗಳಿಗೂ ಅಂತ್ಯ ಹಾಡಿದ್ದು, ಶೀಘ್ರದಲ್ಲೇ ಹಸೆಮಣೆ ಏರುವ ಸೂಚನೆ ಕೊಟ್ಟಿದ್ದಾರೆ.

ಸಾಗರ್ ಭಾರದ್ವಾಜ್ ಎನ್ನುವ ಯುವಕನ ಜೊತೆ ರಂಜನಿ ರಾಘವನ್‌ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸಾಗರ್ ಭಾರಧ್ವಾಜ್ ವೃತ್ತಿಯಲ್ಲಿ ಅಥ್ಲಿಟ್ ಎಂದು ತಿಳಿದುಬಂದಿದೆ. ಅವರು ರನ್ನರ್, ಸೈಕಲಿಸ್ಟ್ ಮತ್ತು ಬೈಕರ್ ಆಗಿದ್ದಾರೆ. ಇದನ್ನು ಬಿಟ್ಟು ಅವರ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

Ranjani Raghavan Shares Boyfriend s Photo and Name on Instagram

ರಂಜನಿ ರಾಘವನ್ ಗೆಳೆಯನ ಜೊತೆಗಿರುವ ಫೋಟೊ ಇದೀಗ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. ಜನಪ್ರಿಯ ನಟಿಯಾಗಿರುವ ರಂಜನಿ ರಾಘವನ್‌ಗೆ ಇನ್‌ಸ್ಟಾಗ್ರಾಂನಲ್ಲಿ 11 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್ ಇದ್ದಾರೆ. ಗೆಳೆಯನ ಜೊತೆಗಿರುವ ಫೋಟೊ ಹಂಚಿಕೊಳ್ಳುತ್ತಿದ್ದಂತೆ ವೈರಲ್ ಆಗುತ್ತಿದ್ದು, ಈಗಾಗಲೇ 30 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

ಫ್ಯಾನ್ಸ್ ಏನಂದ್ರು?

ತಮ್ಮ ಹುಡುಗನ ಜೊತೆ ಹಂಚಿಕೊಂಡಿರುವ ಫೋಟೊಗೆ ರಂಜನಿ ರಾಘವನ್ ಅಭಿಮಾನಿಗಳು ಲೈಕ್ ಮಾಡುವ ಜೊತೆಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. "ಕನ್ನಡಿಯಲ್ಲಿರುವ ವಸ್ತುವು ಕಾಣಿಸುತ್ತಿರುವುದಕ್ಕಿಂತ ಹತ್ತಿರವಾಗಿದೆ" (Objects in the mirror are closer than they appear) ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಜೊತೆಗೆ ಸಾಗರ್ ಭಾರಧ್ವಾಜ್ ರಂಜನಿ ರಾಘವನ್ ಎಂದು ಬರೆದಿದ್ದು, ಹೃದಯದ ಸಿಂಬಲ್‌ ಅನ್ನು ಹಾಕಿದ್ದಾರೆ.

ಕಿರುತೆರೆಯಲ್ಲಿ ಭಾರಿ ಬ್ಯುಸಿಯಾಗಿರುವ ರಂಜನಿ ರಾಘವನ್, ಕಾಂಗರೂ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಒಟಿಟಿಯಲ್ಲಿ ಕಾಂಗರೂ ಸಿನಿಮಾ ಬಿಡುಗಡೆಯಾಗಿದ್ದು, ರಂಜನಿ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+