Rakshak Bullet: ಕೊನೆಗೂ 'ಸೈಲೆಂಟ್‌' ಸತ್ಯ ಬಾಯ್ಬಿಟ್ಟ ರಕ್ಷಕ್‌ ಬುಲೆಟ್‌: ಇದಕ್ಕೆಲ್ಲ ಆ ಹುಡುಗಿಯೇ ಕಾರಣವಂತೆ..

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌ ಸೀಸನ್ 2 ಮುಕ್ತಾಯದ ಹಂತದಲ್ಲಿದೆ. ಈ ಬಾರಿ ಬಿಗ್‌ ಬಾಸ್‌ 11ರ ಸ್ಪರ್ಧಿ ಹಾಗೂ ರಕ್ಷಕ್ ಬುಲೆಟ್ ಹಾಗೂ ರಮೋಲ ಜೋಡಿ ಸಖತ್ ಸೌಂಡ್‌ ಮಾಡುತ್ತಿದೆ. ಅದು ಯಾವ ಮಟ್ಟಿಗೆ ಅಂದ್ರೆ, ವೀಕ್ಷಕರು ಇವರಿಬ್ಬರ ಜೋಡಿ ಹೇಳಿ ಮಾಡಿಸಿದ್ದಾಗಿದೆ ಎನ್ನುವಷ್ಟರ ಮಟ್ಟಿಗೆ. ಈ ನಡುವೆಯೇ ರಕ್ಷಕ್‌ ಮಾಧ್ಯಮದವರ ಬಳಿ ಮಾತನಾಡಿ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮೊದಲೆಲ್ಲ ರಕ್ಷಕ್‌ ಬುಲೆಟ್‌ ಪಂಚ್‌ ಡೈಲಾಗ್‌ಗಳನ್ನು ಹೊಡೆದುಕೊಂಡು ಹೆಚ್ಚು ಟ್ರೋಲ್‌ ಆಗುತ್ತಿದ್ದರು. ಆದರೆ, ಭರ್ಜರಿ ಬ್ಯಾಬ್ಯುಲರ್ಸ್‌ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಾಗಿನಿಂದ ಅವರಲ್ಲಿ ತುಂಬಾ ಬದಲಾವಣೆ ಕಾಣುತ್ತಿದ್ದೇವೆ. ಅವರ ಈ ಚೇಂಜಸ್‌ ತುಂಬಾ ಪಾಸಿಟೀವ್‌ ಅಗಿ ಕಾಣುತ್ತಿದೆ. ಅದರಲ್ಲೂ ರಮೋಲ ಇವರಿಗೆ ನಿಜಜೀವನದಲ್ಲಿ ಜೋಡಿಯಾಗಿ ಬಂದರೆ ಇನ್ನೂ ಉತ್ತಮವಾಗಿರುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದೀಗ ಈ ಬಗ್ಗೆ ರಕ್ಷಕ್‌ ಅವರೇ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ.

Rakshak bullet Ramola is the reason I went silent

ಭರ್ಜರಿ ಬ್ಯಾಚುಲರ್ಸ್‌ ಸೀಸನ್ 2 ಉತ್ತಮವಾಗಿ ಮೂಡಿಬರುತ್ತಿದೆ. ಈ ಬಾರಿ ರಕ್ಷಕ್‌ ಬುಲೆಟ್‌ ಹಾಗೂ ರಮೋಲ ಅವರದ್ದೇ ಸದ್ದು ಜೋರಾಗಿದೆ. ಇನ್ನೂ ನಿಮ್ಮ ಜೋಡಿ ಬಗ್ಗೆ ಏನು ಹೇಳುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಕ್ಷಕ್‌ ಬುಲೆಟ್‌ ಸೈಲೆಂಟ್‌ ಆಗಿ ಉತ್ತರ ನೀಡಿ ಗಮನ ಸೆಳೆದಿದರು.

ನಮಗೆ ಇನ್ನೂ ಎರಡೇ ಎರಡು ವಾರ ಬಾಕಿಯಿದೆ ಅಷ್ಟೇ. ದಯವಿಟ್ಟು ಎಲ್ಲರೂ ವೋಟ್‌ ಮಾಡಿ ಸಪೋರ್ಟ್‌ ಮಾಡಿ. ಆಮೇಲೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತೇನೆ. ಇನ್ನೆರಡೇ ವಾರ ಇರುವುದರಿಂದ ಅದಕ್ಕಂತಲೇ ತುಂಬಾ ಶ್ರಮಪಡುತ್ತಿದ್ದೇವೆ. ಸೀಸನ್‌ ಮುಗಿಸಿಕೊಂಡು ಬಂದ ಮೇಲೆ ಎಲ್ಲದ್ದಕ್ಕೂ ಉತ್ತರ ಕೊಡುತ್ತೇವೆ ಎಂದು ಹೇಳಿದರು. ಇದೇ ವೇಳೆ ಮುಂದುವರೆದು ಮಾತನಾಡಿ ತಮ್ಮ ಸೈಲೆಂಟ್‌ಗೆ ಯಾರು ಕಾರಣ ಎನ್ನುವ ಗುಟ್ಟನ್ನು ಹೊರಹಾಕಿದರು.

ನಮ್ಮ ಜೋಡಿ ಬಗ್ಗೆ ಈಗಾಗಾಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸಪೋರ್ಟ್‌ ಮಾಡುತ್ತಿರುವ ಎಲ್ಲಾರಿಗೂ ಧನ್ಯವಾದಗಳು. ಇಷ್ಟು ದಿನ ಒಬ್ಬೊಂಟಿಯಾಗಿ ನಿಂತುಕೊಂಡು ಆಡಿದ್ದೆ. ಇದೀಗ ಕಪಲ್‌ ಆಗಿ ಆಡಿಕೊಂಡು ಬರುತ್ತಿದ್ದೇನೆ. ಇದರಿಂದ ತುಂಬಾ ಖುಷಿ ಇದೆ. ಇನ್ನೆರಡು ವಾರದಲ್ಲಿ ರಿಸಲ್ಟ್‌ ಬರಲಿದ್ದು, ಏನೆ ಆಗಲಿ ಇಲ್ಲಿಂದ ತುಂಬಾ ಕಲಿತಿದ್ದೇನೆ ಸಂತೋಷ ಇದ್ದೇ ಇರುತ್ತದೆ ಎಂದು ಹೇಳಿದರು.

ಚಿಕ್ಕ ವಯಸ್ಸು ಇದ್ದಾಗ ಒಂದು ಥರಾ ಇರ್ತೀವಿ. ದೊಡ್ಡವರಾದಂತೆ ಬದಲಾವಣೆ ಆಗುತ್ತಾ ಹೋಗುತ್ತೇವೆ. ಬಳಿಕ ಮತ್ತೊಬ್ಬರು ಜೀವನದಲ್ಲಿ ಬಂದಾಗ ಮತ್ತಷ್ಟು ಬದಲಾವಣೆ ಆಗುತ್ತೇವೆ. ಇವೆಲ್ಲವೂ ಆಗ್ಲಿಲ್ಲ ಆಂದ್ರೆ ಶೋಗೆ ಯಾಕೆ ಹೋಗ್ಬೇಕು ನಾವು? ನೀವು ಎರಡು ರೀತಿ ರಕ್ಷಕ್‌ನನ್ನ ನೋಡಬಹುದು. ಮನೆಲಿ ಫ್ಯಾಮಿಲಿ ಜೊತೆ ಮಾತನಾಡಿಕೊಂಡು ಸೈಲೆಂಟ್‌ ಆಗಿರುತ್ತೇನೆ. ಆಚೆ ಬಂದಾಗ ಡೈಲಾಗ್‌ ಹೊಡೆದು ರಕ್ಷಕ್‌ ಮಾಸ್‌ ಅನಿಸಿಕೊಳ್ಳಬಹುದು. ಅದು ಬಿಟ್ಟರೆ ಮತ್ತೇನು ಇಲ್ಲ ಎಂದುರು.

ರಕ್ಷಕ್‌ ಸೈಲೆಂಟ್‌ ಆಗಲು ಕಾರಣ ಏನು: ವೈಲೆಂಟ್‌ ಆಗಿದ್ದ ನನ್ನನ್ನು ಡೀಸೆಂಟ್‌ ಮಾಡಿದ ಕ್ರೆಡಿಟ್ ರಮೋಲಗೆ ಹೋಗಬೇಕು. ನಾನು ಜೋರಾಗಿ ರೇಗಾಡಿಕೊಂಡು ಮಾತನಾಡುವಾಗ ಇದು ರಕ್ಷಕ್‌ ಅಲ್ಲ, ಇದು ಬೇರೆ ಎಂದು ಹೇಳುತ್ತಾರೆ. ಆಗ ನಾನು ಸೈಲೆಂಟ್‌ ಆಗಿಬಿಡುತ್ತಿದ್ದೆ. ಆದ್ದರಿಂದ ರಮೋಲಾಗೆ ಸೈಲೆಂಟ್‌ ಕ್ರೆಡಿಟ್‌ ಎಂದು ರಕ್ಷಕ್‌ ಬುಲೆಟ್‌ ಹೇಳಿದರು.

ರಮೋಲ ಹೇಳಿದ್ದೇನು?: ರಕ್ಷಕ್‌ ಬುಲೆಟ್‌ ಬದಲಾವಣೆ ಬಗ್ಗೆ ಬಗ್ಗೆ ಮಾತನಾಡಿದ ರೊಮಾಲಾ, ರಕ್ಷಕ್‌ ತುಂಬಾ ಚೇಂಜ್‌ ಆಗಿದ್ದಾನೆ. ಹುಡುಗೀರ ಜೊತೆ ಇರುವುದಾಗ ಹೇಗೆ ಡೀಸೆಂಟ್‌ ಆಗಿರಬೇಕೋ ಆಗೆ ಇರುತ್ತಾನೆ. ಇನ್ನೂ ಗುಡುಗರ ಜೊತೆ ಹೇಗೆ ಇರಬೇಕೋ ಹಾಗೆ ಇರುತ್ತಾನೆ. ನಾನೇನು ಅಂಥದ್ದೇನು ಮೋಡಿ ಮಾಡಿಲ್ಲ, ನನ್ನನ್ನ ನೋಡಿ ಅವನು ಸೈಲೆಂಟ್‌ ಆಗಿರುವುದನ್ನ ಕಲಿತುಕೊಂಡ. ನಾನು ಅವನಿಂದ ಮಾತನಾಡುವುದನ್ನು ಕಲಿತಿದ್ದೇನೆ. ಅವರಲ್ಲಿ ತುಂಬಾ ಒಳ್ಳೆಯ ಗುಣಗಳಿವೆ ಎಂದು ಹೇಳಿದರು.

ಪಾಸಿಟೀವ್‌ ಕಾಮೆಂಟ್‌ ಬಗ್ಗೆ ಮಾತನಾಡಿದ ರಕ್ಷಕ್‌ ಬುಲೆಟ್‌, ಜೀವನದಲ್ಲಿ ಬದಲಾವಣೆ ಇದ್ರೆ ಖುಷಿ. ಇದರಿಂದ ನನಗೆ ತುಂಬಾ ಖುಷಿ ಆಗುತ್ತಿದೆ. ಮುಂದೆ ಏನೇ ಹೇಳೋದಿದ್ದರೂ ನಿಮ್ಮ ಮುಂದೆ ಬಂದೇ ಹೇಳುತ್ತೇವ ಎಂದು ಇಬ್ಬರು ಮಾಧ್ಯಮದವರಿಗೆ ಹೇಳಿ ಗಮನ ಸೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+