Rakhi Sawant: ಮತ್ತೊಂದು ಮದುವೆಗೆ ರೆಡಿಯಾದ ರಾಖಿ ಸಾವಂತ್
ಬಾಲಿವುಡ್‌ನಲ್ಲಿ ವಿವಾದಿತ ನಟಿ ಅಂತಲೇ ಸುದ್ದಿಯಾದ ರಾಖಿ ಸಾವಂತ ಮತ್ತೊಂದು ಮದುವೆಗೆ ಸಜ್ಜಾಗಿದ್ದಾರೆ. ಹುಡುಗ ಯಾರು ಅಂತ ಗೊತ್ತಾಗದರೆ ನೀವು ಒಂದು ಕ್ಷಣ ಶಾಕ್ ಆಗೋದು ಗ್ಯಾರಂಟಿ. ರಾಖಿ ಸಾವಂತ ಮೂರನೇ ಮದುವೆಗೆ ರೆಡಿಯಾಗಿದ್ದಾರೆ. ಇದಕ್ಕಾಗಿ ತಮ್ಮ ಎರಡನೇ ಪತಿಗೆ ಬಾಯ್ ಹೇಳಿ ಪಾಕ್ ವರನಿಗೆ ಹಾಯ್ ಹೇಳಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಖಿ ಸಾವಂತ್ ಮೂರನೇ ಮದುವೆ
ರಾಖಿ ಸಾವಂತ್ ಇಲ್ಲಿಯವರೆಗೆ ಎರಡು ಬಾರಿ ವಿವಾಹವಾಗಿದ್ದಾರೆ. ಆದರೆ ಅವರ ಎರಡೂ ವಿವಾಹಗಳು ನೋವಿನಿಂದ ಕೊನೆಗೊಂಡಿವೆ. ಪ್ರಸ್ತುತ ರಾಖಿ ಸಾವಂತ್ ಅವರು ಮೂರನೇ ಮದುವೆಯ ಸುದ್ದಿ ಹೊರಬರುತ್ತಿದೆ. ಅವರು ಶೀಘ್ರದಲ್ಲೇ ಮೂರನೇ ಬಾರಿಗೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದಲ್ಲಿ ರಾಖಿಗೆ ಮದುವೆ
ಮಾಧ್ಯಮ ವರದಿಗಳ ಪ್ರಕಾರ, ಈ ಬಾರಿ ರಾಖಿ ಸಾವಂತ್ ತನ್ನ ಮೂರನೇ ವಿವಾಹವನ್ನು ಭಾರತದಲ್ಲಿ ಅಲ್ಲ, ಪಾಕಿಸ್ತಾನದಲ್ಲಿ ಮಾಡಿಕೊಳ್ಳಲಿದ್ದಾರಂತೆ. ರಾಖಿ ಇತ್ತೀಚೆಗೆ ಪಾಕಿಸ್ತಾನ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಅವರಿಗೆ ಉತ್ತಮ ವಿವಾಹ ಪ್ರಸ್ತಾಪಗಳ ಬಂದಿವೆಯಂತೆ. ಆ ಬಗ್ಗೆ ಸುದ್ದಿಗಾರರೊಂದಿಗೆ ರಾಖಿ ಮಾತನಾಡಿದ್ದಾರೆ.
ಪಾಕಿಸ್ತಾನದಲ್ಲಿ ಮದುವೆಯಾಗಲು ಬಯಸುತ್ತಿರುವ ರಾಖಿ ಸಾವಂತ್
ಟೈಮ್ಸ್ ಆಫ್ ಇಂಡಿಯಾ ಜೊತೆಗಿನ ಸಂಭಾಷಣೆಯಲ್ಲಿ ರಾಖಿ ಸಾವಂತ್ ಅವರು ಪಾಕಿಸ್ತಾನದಲ್ಲಿ ಮದುವೆಯಾಗಲು ಬಯಸುತ್ತಾರೆ ಎಂದು ಹೇಳಿದ್ದಾರೆ. 'ನನಗೆ ಪಾಕಿಸ್ತಾನದಿಂದ ಬಹಳಷ್ಟು ಪ್ರಸ್ತಾಪಗಳು ಬರುತ್ತಿವೆ. ನಾನು ಪಾಕಿಸ್ತಾನಕ್ಕೆ ಹೋದಾಗ, ನನ್ನ ಹಿಂದಿನ ಎರಡು ಮದುವೆಗಳಲ್ಲಿ ನಾನು ಎಷ್ಟು ಕಿರುಕುಳಕ್ಕೊಳಗಾಗಿದ್ದೇನೆಂದು ತಿಳಿದು ಮದುವೆಗೆ ಒಪ್ಪಿ ಪ್ರಸ್ತಾಪಗಳು ಬಂದಿವೆ. ಹೀಗಾಗಿ ನಾನು ಪಾಕಿಸ್ತಾನದಲ್ಲಿ ಮದುವೆಯಾಗುವುದನ್ನು ಬಯಸಿದ್ದೇನೆ ಎಂದು ರಾಖಿ ಹೇಳಿದ್ದಾರೆ.
ಅನೇಕ ಪಾಕಿಸ್ತಾನಿ ಮತ್ತು ಭಾರತೀಯ ಜೋಡಿಗಳು ಮದುವೆಯಾಗಿ ಅಮೆರಿಕ ಮತ್ತು ದುಬೈನಲ್ಲಿ ನೆಲೆಸಿದ್ದಾರೆ. ಅವರೆಲ್ಲಾ ಉತ್ತಮ ಜೀವನ ನಡೆಸುತ್ತಿದ್ದಾರೆ. ಈ ರೀತಿಯ ವಿವಾಹವು ಎರಡೂ ದೇಶಗಳ ನಡುವೆ ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸುತ್ತದೆ. ಭಾರತೀಯರು ಮತ್ತು ಪಾಕಿಸ್ತಾನಿಗಳು ಪರಸ್ಪರ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ನನಗೆ ಪಾಕಿಸ್ತಾನಿ ಜನರು ಇಷ್ಟ ಮತ್ತು ನನಗೆ ಅಲ್ಲಿಯೂ ಅಭಿಮಾನಿಗಳಿದ್ದಾರೆ. ನಾನು ಪಾಕಿಸ್ತಾನದ ಒಳ್ಳೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತೇನೆ ಎಂದು ರಾಖಿ ಅಭಿಪ್ರಾಯ ಪಟ್ಟಿದ್ದಾರೆ.
ರಾಖಿ ಸಾವಂತ್ ಹೊಸ ಗೆಳೆಯ ಯಾರು?
ಅಲ್ಲದೆ ರಾಖಿ ಸಾವಂತ ಹುಡುಗ ಯಾರು ಎನ್ನುವುದು ಕೂಡ ಗೊತ್ತಾಗಿದೆ. ತನ್ನ ಪ್ರಿಯಕರ ದೋಡಿ ಖಾನ್ ಬಗ್ಗೆ ರಾಖಿ ಸಾವಂತ ಮಾತನಾಡುತ್ತಾ, 'ದೋಡಿ ಖಾನ್ ಅವರು ನಟ ಮತ್ತು ಪೊಲೀಸ್ ಅಧಿಕಾರಿ' ಎಂದು ಹೇಳಿದರು. ಮದುವೆ ಪಾಕಿಸ್ತಾನದಲ್ಲಿ ನಡೆಯಲಿದೆ. ಆರತಕ್ಷತೆ ಭಾರತದಲ್ಲಿ ನಡೆಯಲಿದ್ದು, ನಾವು ಹನಿಮೂನ್‌ಗಾಗಿ ಸ್ವಿಟ್ಜರ್‌ಲ್ಯಾಂಡ್ ಅಥವಾ ನೆದರ್‌ಲ್ಯಾಂಡ್ಸ್‌ಗೆ ಹೋಗುತ್ತೇವೆ. ಆದರೆ ನಾವು ದುಬೈನಲ್ಲೇ ನೆಲೆಸುತ್ತೇವೆ ಎಂದಿದ್ದಾರೆ ರಾಶಿ.
ಎರಡು ಮದುವೆಯಾದ ರಾಖಿ
ರಾಖಿ ಸಾವಂತ್‌ಗೆ ಈ ಹಿಂದೆ ಎರಡು ಮದುವೆಗಳಾಗಿವೆ. ಎರಡೂ ಮದುವೆಗಳು ಬಹಳ ನೋವಿನಿಂದ ಕೊನೆಗೊಂಡಿವೆ. ರಾಖಿ ಮೊದಲು ರಿತೇಶ್ ಸಿಂಗ್ ಅವರನ್ನು ಮದುವೆಯಾಗಿದ್ದರು. ಇದಕ್ಕೂ ಮೊದಲು ರಾಖಿ ರಿತೇಶ್ ಅವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿ ಇರಲಿಲ್ಲ. ನಂತರ ಅವರು ರಿತೇಶ್ ಅವರೊಂದಿಗೆ ಬಿಗ್ ಬಾಸ್ ತಲುಪಿದಾಗ ಎಲ್ಲಾ ವಿಷಯ ಹೊರಬಿತ್ತು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ.
ಇದರ ನಂತರ, ರಾಖಿ ಸಾವಂತ್ ಆದಿಲ್ ಖಾನ್ ದುರಾನಿ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ನಂತರ ರಾಖಿ ಆದಿಲ್ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು. ಆದಿಲ್ ತನ್ನನ್ನು ಹೊಡೆಯುತ್ತಿದ್ದ ಮತ್ತು ಹಣವನ್ನೂ ಪಡೆಯುತ್ತಿದ್ದ ಎಂದು ರಾಖಿ ಹೇಳಿದ್ದಾಳೆ. ರಾಖಿ ಆದಿಲ್ ನನ್ನು ಜೈಲಿಗೆ ಕೂಡ ಕಳುಹಿಸಿದಳು. ಬಳಿಕ ಈ ವಿವಾಹವೂ ಮುರಿದು ಬಿತ್ತು. ಇದೀಗ ರಾಖಿ ಮೂರನೇ ಮದುವೆಗೆ ಸಜ್ಜಾಗಿದ್ದಾರೆ. ಅದು ಪಾಕಿಸ್ತಾನ ವರನ ಜೊತೆಗೆ. ಇದು ಎಷ್ಟು ದಿನ ಉಳಿಯುತ್ತೋ ಗೊತ್ತಿಲ್ಲ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications