Pushpa-2 Collection: ಬಾಕ್ಸ್ ಆಫೀಸ್‌ ದಾಖಲೆ ಉಡೀಸ್: RRR, ಜವಾನ್, ಬಾಹುಬಲಿ 2' ಮೀರಿಸಿದ ಪುಷ್ಪರಾಜ್!

Pushpa-2 Box Office Collection: ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾ ಗುರುವಾರ ರಿಲೀಸ್ ಆಗಿ, ನಿರೀಕ್ಷೆಯಂತೆ ಭರ್ಜರಿ ಓಪನಿಂಗ್ ಪಡೆದುಕೊಂಡು ಮುನ್ನಗ್ಗುತ್ತಿದೆ. ಐದು ಭಾಷೆಗಳಲ್ಲಿ ವಿಶ್ವದಾಂದ್ಯತ ತೆರೆಗೆ ಅಪ್ಪಳಿಸಿದ Pushpa-2 ಸಿನಿಮಾ ಹಲವು ವಿಚಾರಗಳಲ್ಲಿ ಹಳೆಯ ದಾಖಲೆಗಳನ್ನು ಪುಡಿ ಮಾಡಿದೆ. 'ಪುಷ್ಪ-2' ಮೊದಲ ದಿನದ ಬಾಕ್ಸ್ ಆಫೀಸ್ ಕಲೆನ್ಷನ್‌ನಲ್ಲಿ ಭಾರೀ ಸದ್ದು ಮಾಡಿದ್ದು, ಪ್ಯಾನ್‌ ಇಂಡಿಯಾ ಸಿನಿಮಾಗಳ ದಾಖಲೆ ಬ್ರೇಕ್ ಮಾಡಿದೆ.

ಬಿಡುಗಡೆಯಾದ ಮೊದಲ ದಿನವೇ 'ಪುಷ್ಪ-2' 175 ಕೋಟಿ ಗಳಿಕೆ ಮಾಡಿದೆ, ಪ್ರಪಂಚದಾದ್ಯಂತ ಒಂದೇ ದಿನಕ್ಕೆ ಭರ್ತಿ 282.91 ಕೋಟಿ ಗಳಿಸುವ ಮೂಲಕ ಮಹತ್ವ ದಾಖಲೆ ಬರೆದಿದೆ ಎಂದು ಸಿನಿ ಪಂಡಿತರು ಲೆಕ್ಕ ಕೊಟ್ಟಿದ್ದಾರೆ. ಹಾಗಾದರೆ ಮೊದಲ ದಿನದ ಕಲೆಕ್ಷನ್‌ನಲ್ಲಿ ಯಾವೆಲ್ಲ ಪ್ಯಾನ್ ಇಂಡಿಯಾ ಸಿನಿಮಾಗಳ ದಾಖಲೆ ಮುರಿದಿದೆ ಎಂಬ ರಿಪೋರ್ಟ್ ಇಲ್ಲಿದೆ.

Pushpa-2 vs Jawan and Bahubali 2 film First Day Box Office Collection Comparison here

ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾದ ಮುಂದುವರಿದ ಭಾಗ 'ಪುಷ್ಪ-2' ಥಿಯೇಟರ್ ಬಿಡುಗಡೆ, ಮುಂಗಡ ಬುಕ್ಕಿಂಗ್, ಮೊದಲ ದಿನದ ಕಲೆಕ್ಷನ್‌ನಲ್ಲಿ ಭಾರೀ ಸುದ್ದಿ ಮಾಡಿದೆ. ಗುರುವಾರ ಮೊದಲ ದಿನ 165 ಕೋಟಿ ಗಳಿಕೆ ಮಾಡಿದ 'ಪುಷ್ಪ-2' ಬುಧವಾರವೇ ಅಡ್ವಾನ್ಸ್ ಸ್ಟ್ರೀಮಿಂಗ್ ನಲ್ಲಿ ತೆಲುಗು ಒಂದರಲ್ಲಿಯೇ 10.1 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಮೊದಲ ದಿನದ ಗಳಿಕೆಯ ರೂ 175.1 ಕೋಟಿಗೆ ಏರಿದೆ ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

'ಪುಷ್ಪ 2' ಸಿನಿಮಾ ಕನ್ನಡದಲ್ಲಿ ಅತೀ ಕಡಿಮೆ ಹಾಗೂ ಮೂಲ ಭಾಷೆ ತೆಲುಗಿನಲ್ಲಿ ಗರಿಷ್ಠ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲಿ 95.1 ಕೋಟಿ ರೂ., ಹಿಂದಿಯಲ್ಲಿ 67 ಕೋಟಿ ರೂ., ತಮಿಳಲ್ಲಿ 7 ಕೋಟಿ ರೂ., ಮಲಯಾಳಂನಲ್ಲಿ 5 ಕೋಟಿ ರೂ. ಹಾಗೂ ಕನ್ನಡದಲ್ಲಿ ಕೇವಲ 1 ಕೋಟಿ ರೂ. ಗಳಿಸಿದೆ. ಇಂದು ಎರಡನೇ ದಿನಕ್ಕೆ ಕಾಲಿಟ್ಟ 'ಪುಷ್ಪ 2' ಇನ್ನಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆಗಳು ಇವೆ.

ಜವಾನ್, RRR, ಬಾಹುಬಲಿ -2 ಹಿಂದಿಕ್ಕಿದ ಪುಷ್ಪರಾಜ್

ಭರ್ಜರಿ ಓಪನಿಂಗ್ ಪಡೆದ 'ಪುಷ್ಪ 2' ಹಿಂದಿಯಲ್ಲಿ 'ಜವಾನ್' ಸಿನಿಮಾ ಮೊದಲ ದಿನ ಗಳಿಸಿದ್ದ (65.5 ಕೋಟಿ ರೂ.) ದಾಖಲೆಯನ್ನು ರೂ.67 ಕೋಟಿ ಗಳಿಸುವ ಮೂಲಕ 'ಪುಷ್ಪ 2' ಪುಡಿ ಮಾಡಿದೆ.

Pushpa-2 vs Jawan and Bahubali 2 film First Day Box Office Collection Comparison here

SS ರಾಜಮೌಳಿ ನಿರ್ದೇಶನದ RRR ಸಿನಿಮಾ ಮೊದಲ ದಿನ 133 ಕೋಟಿ ರೂ. ಗಳಿಸಿ ದಾಖಲೆ ನಿರ್ಮಿಸಿತ್ತು. ಅದರ ನಂತರದ ಸ್ಥಾನದಲ್ಲಿ ರಾಜಮೌಳಿ ಅವರದ್ದೆ ಆದ ಬಾಹುಬಲಿ 2 ಸಿನಿಮಾ 121 ಕೋಟಿ ರೂ., ಕನ್ನಡದ KGF 2 ರೂ.116 ಕೋಟಿ ಹಾಗೂ 'ಕಲ್ಕಿ 2898' 114 ರೂ.ಕೋಟಿ ಗಳಿಕೆ ಮಾಡಿದ್ದವು. ಸದ್ಯ ಪುಷ್ಟ 2 ಇದೆಲ್ಲ ದಾಖಲೆಗಳನ್ನು ಉಡಿಸ್ ಮಾಡಿ, ಹೊಸ ದಾಖಲೆ ನಿರ್ಮಿಸಿದೆ.

ಥಿಯೇಟರ್‌ ಹೌಸ್‌ಫುಲ್‌ನಲ್ಲಿ ಪುಷ್ಟ-2 ಕಮಾಲ್

ಕಲೆಕ್ಷನ್ ವಿಚಾರದಲ್ಲಿ ಮಾತ್ರವಲ್ಲದೇ 'ಪುಷ್ಪ 2' ಸಿನಿಮಾ ಥಿಯೇಟರ್‌ ಭರ್ತಿ ವಿಚಾರದಲ್ಲಿ ದಾಖಲೆ ಆಗಿದೆ. ತೆಲುಗು ನಾಡಿನಲ್ಲಿ ಪ್ರದರ್ಶನಗೊಂಡ ಬಹುತೇಕ ಥಿಯೇಟರ್‌ಗಳಲ್ಲಿ ಶೇಕಡಾ 82.66 ರಷ್ಟು ಭರ್ತಿಯಾಗಿದ್ದವು. ಸಿನಿಮಾ ಹೈದರಾಬಾದ್‌ನಲ್ಲಿ 1500 ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಅಲ್ಲಿನ ಥಿಯೇಟರ್‌ಗಳು ಶೇ.94 ಕ್ಕಿಂತ ಅಧಿಕ ಪ್ರಮಾಣದಲ್ಲಿ ಭರ್ತಿಯಾಗಿದ್ದವು.

ಬೆಂಗಳೂರಿನಲ್ಲಿ 1000 ಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು, ಇಲ್ಲಿನ ಥಿಯೇಟರ್‌ಗಳು ಶೇಕಡಾ 70 ರಷ್ಟು ವೀಕ್ಷಕರಿಂದ ತುಂಬಿದ್ದವು. ಈವರೆಗಿನ ಈ ಆಕ್ಯುಪೆನ್ಸಿ (ಥಿಯೇಟರ್ ಭರ್ತಿ) ಪ್ರಮಾಣ ಹಿಂದಿಗಿಂತಲೂ ಪುಷ್ಪ 2 ಸಿನಿಮಾದಿಂದ ಹೆಚ್ಚಾಗಿದೆ. ದೆಹಲಿ-ಎನ್‌ಸಿಆರ್ ಹಾಗೂ ಮುಂಬೈನಲ್ಲಿ 1500 ಪ್ರದರ್ಶನ ಕಂಡಿದ್ದು, ಅಲ್ಲಿನ ಥಿಯೇಟರ್‌ಗಳು ಕ್ರಮವಾಗಿ ಶೇ. 61 ರಷ್ಟು, ಶೇ. 57 ರಷ್ಟು ಭರ್ತಿಯಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+