Pushpa-2 OTT Release: ರೀಲೋಡ್ ವರ್ಷನ್ ಪುಷ್ಪ-2 ಒಟಿಟಿಗೆ ಎಂಟ್ರಿಗೆ ದಿನಾಂಕ ಫಿಕ್ಸ್, ಎಲ್ಲಿ ನೋಡಬೇಕು?

ಬೆಂಗಳೂರು, ಜನವರಿ 28: ಭಾರತ ಸೇರಿ ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗಿ ಹಲವು ವಿಚಾರಗಳಿಗೆ ದಾಖಲೆ ಬರೆದ ನಟ ಅಲ್ಲು ಅರ್ಜುನ್ ನಟನೆಯ 'ಪುಷ್ಪ -2 ದಿ ರೂಲ್' ಪ್ಯಾನ್ ಇಂಡಿಯಾ ಸಿನಿಮಾ OTT ಬಿಡುಗಡೆ ದಿನಾಂಕ ಫೀಕ್ಸ್ ಆಗಿದೆ. ಐದು ಭಾಷೆಗಳಲ್ಲಿ ರಿಲೀಸ್ ಆಗಿ ರೂ. 1700 ಕೋಟಿಗೂ ಹೆಚ್ಚು ಕೆಲೆಕ್ಷನ್ ಮಾಡಿದೆ. ಕೆಲವು ಸಿನಿಮಾಗಳ ದಾಖಲೆ ಮುರಿದಿದೆ. ಇದೀಗ ಈ ಸಿನಿಮಾ OTT ಗೆ ಬರಲಿದೆ.

ಸುಕುಮಾರ ನಿರ್ದೇಶನದ ಈ ಸಿನಿಮಾ ಕಳೆದ ವರ್ಷ ಡಿಸೆಂಬರ್ 5ರಂದು ಬಿಡುಗಡೆ ಆಗಿತ್ತು. ಈ 53 ದಿನಗಳ ಬಳಿಕ ಇದೀಗ ಒಟಿಟಿಗೆ ಬರಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ ಎಂಬ ಮಾಹಿತಿಯನ್ನು ಒಟಿಟಿ ವೇದಿಕೆಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ರಿಲೋಡ್ ವರ್ಷನ್ ನಲ್ಲಿ ಪುಷ್ಪ-2 ಸಿನಿಮಾ ಒಟಿಟಿಗೆ ರಿಲೀಸ್ ಆಗುತ್ತಿದ್ದು, ನೀವು 23 ನಿಮಿಷ ಹೆಚ್ಚುವರಿ ನಿಮಿಷಗಳ ವರ್ಷನ್ ನೋಡಬಹುದಾಗಿದೆ.

Pushpa 2 Movie OTT Release Date Fix Watch on Netflix Very Soon

ನೆಟ್‌ಫ್ಲಿಕ್ಸ್‌ನಲ್ಲಿ ತೆಲುಗು, ತಮಿಳು, ಹಿಂದು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಅಭಿಮಾನಿಗಳು ಸಿನಿಮಾ ನೋಡಬಹುದು. ಥಿಯೇಟರ್‌ಗಳಲ್ಲಿ ಪುಷ್ಪನ ಹವಾ ಇನ್ನೂ ಮುಂದುವರಿದಿದೆ. ಕೆಲವು ಚಿತ್ರಮಂದಿರಗಳಲ್ಲಿ ಪುಷ್ಪರಾಜನ ಓಟ ನಿಂತಿಲ್ಲ. ಬಾಕ್ಸ್‌ ಆಫೀಸ್ ಕಲೆಕ್ಷನ್‌ನಲ್ಲಿ ಸಾರ್ವಕಾಲಿಕ ದಾಖಲೆ ಮಾಡಿದೆ. ನಟ ಅಲ್ಲು ಅರ್ಜುನ್ ಅವರಿಗೆ ಬೇರೆಯದ್ದೇ ಇಮೇಜ್ ನೀಡಿದ ಚಿತ್ರವನ್ನು OTT ವೇದಿಕೆಯಲ್ಲಿ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಐದನೇ ವಾರದಲ್ಲಿ ಹಿಂದಿಯೊಂದರಲ್ಲೇ ಪುಷ್ಪ 2 ಸಿನಿಮಾ ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗಾಗಲೇ ನೆಟ್‌ಫ್ಲಿಕ್ಸ್ 250 ಕೋಟಿ ರೂಪಾಯಿ ನೀಡಿರುವುದು ಗೊತ್ತೇ ಇದೆ. ಇದೇ ನೆಟ್‌ಫ್ಲಿಕ್ಸ್ ಐದು ಭಾಷೆಗಳಲ್ಲಿ ಸ್ಟ್ರೀಮಿಂಗ್ ಮಾಡಲಿದೆ. ಆದರೆ ಸೂಕ್ತ ದಿನಾಂಕ ಪ್ರಕಟವಾಗಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಒಟಿಟಿಗೆ ಬರಬಹುದು ಎಂದು ಹೇಳಲಾಗುತ್ತಿದೆ.

ಪುಷ್ಪ-2 ಸಿನಿಮಾವು ಹೆಚ್ಚುವರಿ 23 ನಿಮಿಷ ಸೇರಿ ಒಟ್ಟು 3.40 ನಿಮಿಷಗಳ ಕಾಲ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ನಟಿ ರಶ್ಮಿಕಾ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ನಟ ಫಹದ್ ಫಾಸಿಲ್ ನಟಿಸಿದ್ದಾರೆ. ಸುನೀಲ್, ಅನಸೂಯಾ ಮತ್ತತರ ಕಲಾವಿದರ ಮಿಂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+