Pushpa-2 OTT Release Date: ಅಮೆಜಾನ್ ಪ್ರೈಮ್ ಇಲ್ಲ ನೆಟ್‌ಫ್ಲಿಕ್ಸ್? ಯಾವ ಒಟಿಟಿಗೆ ಬರಲಿದೆ 'ಪುಷ್ಪ-2'
ಬೆಂಗಳೂರು, ಡಿಸೆಂಬರ್ 05: ತೆಲುಗಿನ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ 'ಪುಷ್ಪ-2 'ಸಿನಿಮಾ ಇಂದು ಗುರುವಾರ ಡಿ.5ರಂದು ದೇಶಾದ್ಯಂತ ಬಿಡುಗಡೆ ಆಗಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ನನ್ನು ಅಭಿಮಾನಿಗಳು ಪುಷ್ಪರಾಜ್ ಆಗಿ ಮತ್ತೊಮ್ಮೆ ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ಮೊದಲ ದಿನವೇ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ 'ಪುಷ್ಪ 2 'ಸಿನಿಮಾ ಯಾವ ಒಟಿಟಿಗೆ ರಿಲೀಸ್ ಆಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ರಕ್ತ ಚಂದನ ಕಳ್ಳ ಸಾಗಾಣೆ ಕಥೆಯೊಂದಿಗೆ ರಿಲೀಸ್ ಆಗಿದ್ದ ಪುಷ್ಪ ಸಿನಿಮಾದ ಸೀಕ್ವೆಲ್ ಇದಾಗಿದೆ. ಮೊದಲ ಸಿನಿಮಾ ಪುಷ್ಪದಲ್ಲಿ ನಟ ಅಲ್ಲು ಅರ್ಜುನ್ ಬೆಳವಣಿಗೆ, ಶತ್ರುಗಳನ್ನು ಎದುರು ಹಾಕಿಕೊಂಡು ಸಿಂಡಿಕೇಟ್‌ನಲ್ಲಿ ಮುಖ್ಯಸ್ಥನಾಗುವ ಕತೆ ಇದೆ. ಇದರೊಂದಿಗೆ ತನ್ನ ಕುಟುಂಬಕ್ಕೆ ಅಂಟಿರುವ ಕಳಂಕ ತೊಡೆಯಲು ಹೋರಾಡುತ್ತಾನೆ. ಅದರ ಮುಂದುವರೆದ ಭಾಗವೇ ಪುಷ್ಪ 2 ಸಿನಿಮಾ.

ಪುಷ್ಪ 2 ರಿಲೀಸ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣಾ ಅವರು ನಟಿಸಿದ್ದಾರೆ. ಅಲ್ಲು ಅರ್ಜುನ್ ವಿರುದ್ಧ ಪೊಲೀಸ್ ಪಾತ್ರದಲ್ಲಿ ಫಹಾದ್ ಫಾಸಿಲ್ ಅಬ್ಬರಿಸಿದ್ದಾರೆ. ನಟರಾದ ಜಗಪತಿ ಬಾಬು, ಡಾಲಿ ಧನಂಜಯ್, ಅನುಸುಯಾ ಇನ್ನಿತರ ಕಲಾವಿದರು ನಟಿಸಿದ್ದಾರೆ.
ಪುಷ್ಪ 2 OTT ರಿಲೀಸ್ ದಿನಾಂಕ
ಸುಕುಮಾರ್ ನಿರ್ದೇಶನದ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ವಿದ್ದು, ನವೀನ್ ನೂಲಿ ಅವರು ಸಂಕಲನ ಮಾಡಿದ್ದಾರೆ. ಛಾಯಾಗ್ರಹಣವನ್ನು ಮಿರೋಸ್ಲಾವ್ ಕುಬಾ ಬ್ರೋಜೆಕ್ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಸೇರಿ ಐದು ಭಾಷೆಯಲ್ಲಿ ಬಿಡುಗಡೆ ಆಗಿದ್ದು. ಸಿನಿಮಾ ಶೋಗಳು ಗುರುವಾರ ತಡರಾತ್ರಿಯಿಂದಲೇ ಆರಂಭವಾಗಿದ್ದು, ವಿತರಕರು ಫುಲ್ ಖುಷ್ ಆಗಿದ್ದಾರೆ. ಸದ್ಯಕ್ಕೆ ತಯಾರಕರು ಯಾವಾಗ ಸಿನಿಮಾ ಒಟಿಟಿಗೆ ಪ್ರವೇಶಿಸಲಿದೆ ಎಂದು ಅಧಿಕೃತ ದಿನಾಂಕ ಪ್ರಕಟಿಸಿಲ್ಲ. ಜನವರಿ 2 ನೇವಾರ ಸಿನಿಮಾ ಒಟಿಟಿಗೆ ಬರುವ ನಿರೀಕ್ಷೆಗಳು ಇವೆ.
ಡಿಜಿಟಲ್ ಹಕ್ಕು ಪಡೆದಿರುವ ನೆಟ್‌ಫಿಕ್ಸ್
ಪುಷ್ಪಾ ಸಿನಿಮಾ ಅಮೆಜಾನ್ ಪೈಮ್‌ನಲ್ಲಿ ರಿಲೀಸ್ ಆಗಿತ್ತು. ಆದರೆ ಪುಷ್ಪಾ 2 ಸಿನಿಮಾದ ಡಿಜಿಟಲ್ ಹಕ್ಕನ್ನು ನೆಟ್‌ಫಿಕ್ಸ್ ಪಡೆದುಕೊಂಡಿದೆ. ಪುಷ್ಪಾ 2 ಸ್ಟ್ರೀಮಿಂಗ್ ಗಾಗಿ ನೆಟ್‌ಫಿಕ್ಸ್ ಹಣ ಈಗಾಗಲೇ ಪಾವತಿಸಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಪುಷ್ಪಾ 2 ಅಮೆಜಾನ್ ಬದಲಾಗಿ ನೆಟ್‌ಫ್ಲಿಕ್ಸ್‌ಗೆ ಬರುವ ನಿರೀಕ್ಷೆ ಇದೆ.












Click it and Unblock the Notifications