Pushpa 2: ಆರೇ ದಿನಕ್ಕೆ ಎಲ್ಲ ದಾಖಲೆ ಮುರಿದ ಪುಷ್ಪ-2: ಭಾರತೀಯ ಮೊದಲ ಸಿನಿಮಾ ಪಟ್ಟ..
ಬೆಂಗಳೂರು, ಡಿಸೆಂಬರ್ 12: ಭಾರತದ ವಿಶ್ವಾದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದ ತೆಲುಗಿನ 'ಪುಷ್ಪ-2' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಇದುವರೆಗೂ ಯಾವ ಸಿನಿಮಾ ಮಾಡಿರದ ದಾಖಲೆಯನ್ನು ಮೊದಲ ಬಾರಿಗೆ ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ-2' ಸಿನಿಮಾ ಮಾಡಿದೆ. ಮೊದಲ ದಿನವೇ ನೂರಾರು ಕೋಟಿ ಗಳಿಸಿದ್ದ ಸಿನಿಮಾ ಸಕ್ಸಸ್ ಓಟ 6ನೇ ದಿನಕ್ಕೂ ಮುಂದುವರಿದಿದೆ.
ಸುಮಾರು 12000 ಥಿಯೇಟರ್‌ಗಳಲ್ಲಿ ಸಿನಿಮಾ ತೆರೆ ಕಂಡಿದ್ದ 'ಪುಷ್ಪ-2' ಸಿನಿಮಾವು ಕೇವಲ ಆರೇ ದಿನದಲ್ಲಿ ಬಾಕ್ಸ್ ಆಫಿಸ್‌ನಲ್ಲಿ ಕಮಾಲ್ ಮಾಡಿದೆ. ಬರೋಬ್ಬರಿ 1000 ಕೋಟಿ ರೂಪಾಯಿ ಕಲೆಕ್ಟ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಮೂಲಕ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳ ಈವರೆಗಿನ ದಾಖಲೆ ಮುರಿದಿದೆ. 'ಪುಷ್ಪ-2' ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಸಾರ್ವಕಾಲಿಕ ದಾಖಲೆ ಮಾಡಿದೆ.

ಈವರೆಗೆ ಕೆಜಿಎಫ್ ಚಾಪ್ಟರ್ 2 ಹಾಗೂ ಬಾಹುಬಲಿ ಸಿನಿಮಾಗಳೇ ಅತೀ ಕಡಿಮೆ ಅವಧಿಯಲ್ಲಿ ಅತ್ಯಧಿಕ ಗಳಿಕೆ ಮಾಡಿದ ಸಿನಿಮಾಗಳಾಗಿದ್ದವು. ನಟ ಯಶ್ ಹಾಗೂ ನಟ ಪ್ರಭಾಸ್ ಅವರ ಅಭಿಮಾನಿಗಳು ಈ ದಾಖಲೆ ಕಂಡು ಮೀಸೆ ತಿರುವಿದ್ದರು. ಇದೀಗ ನಟ ಅಲ್ಲು ಅರ್ಜುನ್ ಫ್ಯಾನ್ಸ್ ಸಹ ನಮ್ಮ ಹಿರೋ ಯಾರಿಗೇನು ಕಡಿಮೆ ಇಲ್ಲ ಎಂದು ಕಾಲರ್ ಎತ್ತಿಕೊಂಡು ತಿರುಗುತ್ತಿದ್ದಾರೆ.
ಮೊದಲಿನಿಂದಲೇ ಕ್ರೇಜ್ ಸೃಷ್ಟಿಸಿದ್ದ 'ಪುಷ್ಪ-2' ಸಿನಿಮಾ ಆರು ದಿನಗಳಲ್ಲಿ 1000 ಕೋಟಿ ರೂ.ಕ್ಲಬ್ ಸೇರಿದೆ. ಈ ಮೂಲಕ ಭಾರತದ ಚಿತ್ರರಂಗದಲ್ಲಿ ಸಿನಿಮಾವೊಂದು ಇಷ್ಟು ಕಡಿಮೆ ಅವಧಿಯಲ್ಲಿ ಅತ್ಯಧಿಕ ಹಣ ಗಳಿಕೆ ಮಾಡಿದ ಮೊದಲ ಸಿನಿಮಾ ಆಗಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ 'ಪುಷ್ಪ-2' ಗೆ ಹೊಸ ಪಟ್ಟ ಸಿಕ್ಕಂತಾಗಿದೆ.

'ಪುಷ್ಪ-2' ಅಬ್ಬರಕ್ಕೆ ಗಲ್ಲಾಪೆಟ್ಟಿಯಲ್ಲಿದ್ದ ಹಳೆಯ ರೆಕಾರ್ಡ್‌ಗಳೆಲ್ಲವು ಬ್ರೇಕ್ ಆಗಿದ್ದು, 'ಪುಷ್ಪ-2' ಟಾಪ್ ಒನ್ ಸಿನಿಮಾ ಎನಿಸಿಕೊಂಡಿದೆ. 'ಪುಷ್ಪ-2' ಸಿನಿಮಾ ಅಬ್ಬರ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ. ಇನ್ನಷ್ಟು ದಿನಗಳ ಕಾಲ ಸಾವಿರಾರು ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಯಲಿದೆ. ಇನ್ನಷ್ಟು ಗಳಿಕೆ ಮಾಡುವ ವಿಶ್ವಸದಲ್ಲಿದೆ.
ತೆಲುಗು ಬಾಹುಬಲಿ ಹಾಗೂ ಕನ್ನಡದ ಕೆಜಿಎಫ್ 2 ನಿಮಾಗಳು ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗಿದ್ದವು ಅವುಗಳ ಕೂಡ 1000 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಆದರೆ ಆರೇ ದಿನದಲ್ಲಿ ಅಂದರೆ ಅತೀ ಕಡಿಮೆ ಸಮಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿರುವ ಸಿನಿಮಾಗಳ ಸಾಲಿನಲ್ಲಿ ಪುಷ್ಪ 2ಗೆ ಅಗ್ರಸ್ಥಾನ ಸಿಗಲಿದೆ. ಈ ಕಾರಣದಿಂದಲೇ ಪುಷ್ಪ2 ಸಿನಿಮಾಗೆ ಕಡಿಮೆ ಅವಧಿಯಲ್ಲಿ ಅಧಿಕ ಗಳಿಕೆ ಕಂಡ ಭಾರತದ ಸಿನಿಮಾ ಎಂಬ ಪಟ್ಟ ಸಿಕ್ಕಿದೆ. ಚಿತ್ರತಂಡ ಫುಲ್ ಖುಷಿಯಲ್ಲಿದೆ.
ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಬಿಡುಗಡೆಯ ಆರಂಭಿಕ ದಿನಗಳಲ್ಲಿ ಇದ್ದ ಟಿಕೆಟ್ ಹೆಚ್ಚಿನ ದರವನ್ನು ಕಳೆದ ಎರಡು ದಿನಗಳಿಂದ ಕಡಿಮೆ ಮಾಡಲಾಗಿದೆ. ಸಿಂಗಲ್ ಸ್ಕ್ರೀನ್, ಮಾಲ್‌ಗಳಲ್ಲಿ ಟಿಕೆಟ್ ದರ ಸಹಜ ದರಕ್ಕೆ ಬಂದಿದೆ ಎನ್ನಲಾಗಿದೆ.












Click it and Unblock the Notifications