Puneeth Rajkumar: ಪುಸ್ತಕ ರೂಪದಲ್ಲಿ ಬರ್ತಿದೆ ಪುನೀತ್ ಜೀವನ: ಆ ಪುಸ್ತಕದ ಹೆಸರೇನು ಗೊತ್ತಾ?
ಬೆಂಗಳೂರು, ಮಾರ್ಚ್ 18: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ (ಮಾರ್ಚ್ 17) 50ನೇ ವರ್ಷದ ಹುಟ್ಟು ಹಬ್ಬ. ಹೀಗಾಗಿ ಅಪ್ಪು ಅವರ ಅಭಿಮಾನಿ ಬಳಗ ನಿನ್ನೆ(ಸೋಮವಾರ) ನಗರದ ಕಂಠೀರವ ಸ್ಟುಡಿಯೋಗೆ ಆಗಮಿಸಿ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಮತ್ತೊಂದು ಕಡೆ ದೊಡ್ಮನೆ ಕುಟುಂಬದ ಸದಸ್ಯರು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ದೈಹಿಕವಾಗಿ ನಟ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ. ಆದರೆ, ಅವರು ಮಾಡಿದ ಕೆಲಸಗಳ ಮೂಲಕ, ಸಿನಿಮಾಗಳ ಮೂಲಕ ಅವರು ಇನ್ನೂ ನಮ್ಮೊಂದಿಗೆ ಜೀವಂತವಾಗಿ ಇದ್ದಾರೆ.
ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ "ಅಪ್ಪು" ಪುಸ್ತಕವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಪ್ರಕೃತಿ ಬನವಾಸಿ ಅವರು ಬರೆದಿದ್ದಾರೆ. ಇದು ಅಪ್ಪು ಅವರ ಜೀವನದ ಬಹುಮುಖ್ಯ ಘಟನೆಗಳನ್ನು ವಿವರಿಸುತ್ತದೆ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಈ ಸುದ್ದಿಯನ್ನು ಘೋಷಿಸಲಾಗಿದೆ .

ನಗುಮುಖದ ಒಡೆಯ ನಟ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿದ್ದರು. ಆದರ, ಕೆಲಸಗಳ ಮೂಲಕ ಇನ್ನೂ ಜೀವಂತವಾಗಿ ಇದ್ದಾರೆ. ಅದೇ ರೀತಿ ಅವರನ್ನು ನೆನಪಿಸಿಕೊಳ್ಳಲು ನಾನಾ ರೀತಿಯ ಕೆಲಸಗಳನ್ನು ಮಾಡಲಾಗುತ್ತಿದೆ. ಅಪ್ಪು ಅಭಿಮಾನಿಗಳು ದಿನಕ್ಕೊಂದು ಒಳ್ಳೆಯ ಕೆಲಸಗಳನ್ನ ಮಾಡುತ್ತಿರುವುದು ಸುದ್ದಿಯಾಗುತ್ತಿರುತ್ತದೆ. ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಅಭಿಮಾನಿಗಳ ಪ್ರೀತಿಯಲ್ಲಿ ಅವರು ಮತ್ತೆ ಮತ್ತೆ ನಮ್ಮೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಅಪ್ಪು ಅವರ 50 ನೇ ಹುಟ್ಟು ಹಬ್ಬಕ್ಕೆ ಸಂದರ್ಭದಲ್ಲಿ ನಟ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಗುಡ್ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಇಷ್ಟು ದಿನ ಪುನೀತ್ ರಾಜಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ ಅಂತಲೇ ಹೇಳಬಹುದು. ಅದರೊಂದಿಗೆ ಇನ್ನೊಂದು ಸುದ್ದಿ ಎಂದರೇ ನಟ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ಬರೆಯಲಾಗಿದೆ. ಈ ಬಗ್ಗೆ ಅಪ್ಪು ಜನ್ಮದಿನದ (ಮಾರ್ಚ್ 17) ಪ್ರಯುಕ್ತ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಘೋಷಣೆ ಮಾಡಿದ್ದಾರೆ. ಈ ವಿಚಾರ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದರ ಅಧಿಕೃತ ದಿನಾಂಕ ಇನ್ನಷ್ಟೇ ತಿಳಿಯಬೇಕಿದೆ.

ನಮ್ಮ ಪುನೀತ್ ಎನ್ನುವುದಕ್ಕಿಂತ ಅಪ್ಪು ಎಂಬುದೇ ಹೆಚ್ಚು ಸೂಕ್ತ ಎನಿಸುತ್ತದೆ. ಈ ಕಾರಣಕ್ಕೆ ಫ್ಯಾನ್ಸ್ ಕೂಡ ಅವರನ್ನು ಅಪ್ಪು ಎಂದೇ ಕರೆಯುತ್ತಾರೆ. ಹೀಗಾಗಿ 'ಅಪ್ಪು' ಅನ್ನೋ ಹೆಸರಿನಲ್ಲೇ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ಬರೆಯಲಾಗಿದೆ. ಅಶ್ವಿನಿ ಮತ್ತು ಪ್ರಕೃತಿ ಬನವಾಸಿ ಒಟ್ಟಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಎರಡು ವರ್ಷಗಳ ಪ್ರಯತ್ನದಿಂದ ಈ ಪುಸ್ತಕ ಹೊರ ಬಂದಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಅವರಿಬ್ಬರ ಮಕ್ಕಳು ಆ ಪುಸ್ತಕದ ಕವರ್ ಪೇಜ್ ಹೇಗಿದೆ ಎಂಬುದನ್ನು ರಿವೀಲ್ ಮಾಡಿದ್ದಾರೆ.
ಸದ್ಯದಲ್ಲೇ ಅಧಿಕೃತವಾಗಿ 'ಅಪ್ಪು' ಪುಸ್ತಕ ರಿಲೀಸ್ ಮಾಡಲು ಅಶ್ವಿನಿ ಪ್ಲ್ಯಾನ್ ಮಾಡಿದ್ದಾರೆ. ನಮ್ಮೆಲ್ಲರ ಅಪ್ಪು ಬರ್ತ್ಡೇ ಸಂದರ್ಭದಲ್ಲಿ ಅಶ್ವಿನಿ ಹಾಗೂ ಮಕ್ಕಳು ಪುಸ್ತಕ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಪ್ಪು ಕಲರ್ಫುಲ್ ಜೀವನವನ್ನು ತೆರೆದಿಡುವ ಪುಸ್ತಕಕ್ಕೆ ಬ್ಲ್ಯಾಕ್ ಆ್ಯಂಡ್ ವೈಟ್ನ ಕವರ್ ಪೇಜ್ ಮಾಡಲಾಗಿದೆ. ಈ ಪುಸ್ತಕದಲ್ಲಿ ಯಾವೆಲ್ಲ ವಿಚಾರಗಳು ಇರಲಿವೆ ಎನ್ನುವ ಕುತೂಹಲ ಮೂಡಿದೆ. ಇನ್ನೂ ಈ ಪುಸ್ತಕವನ್ನ ನಟ ಪುನೀತ್ ರಾಜ್ ಕುಮಾರ್ ಅವರ ಆಪ್ತರನ್ನು, ಕುಟುಂಬದವರಿಂದ ಮಾಹಿತಿ ಕಲೆ ಹಾಕಿ ಪುಸ್ತಕ ಬರೆಯಲಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications