ಜೂ.ಪುನೀತ್ ಯುವ ರಾಜ್‌ಕುಮಾರ್ ಅಬ್ಬರಕ್ಕೆ ದಾಖಲೆ ಧೂಳ್ ಧೂಳ್!

ಇನ್ನು ಸಿನಿಮಾನೇ ಬಿಡುಗಡೆ ಆಗಿಲ್ಲ, ಆದರೆ ಅದಕ್ಕೂ ಮೊದಲೇ ದೊಡ್ಮನೆಯ ಮೊಮ್ಮಗ ಯುವ ರಾಜ್‌ಕುಮಾರ್ ಅಬ್ಬರ ಬಲು ಜೋರಾಗಿದೆ. ಸಿನಿಮಾ ಬಿಡುಗಡೆಗೆ ಮೊದಲೇ ನಟ ಯುವ ಹಲವು ದಾಖಲೆ ಪುಡಿ ಪುಡಿ ಮಾಡುತ್ತಿದ್ದಾರೆ. ಅದ್ರಲ್ಲೂ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಇದೀಗ, ಯುವ ರಾಜ್‌ಕುಮಾರ್ ಅವರನ್ನು ಜೂನಿಯರ್ ಪುನೀತ್ ಅಂತಾನೆ ಕರೆಯುತ್ತಿದ್ದಾರೆ. ಹೀಗಿದ್ದಾಗ ಚಾಮರಾಜನಗರ ಪೂರ್ತಿ 'ಯುವ' ಮಯ ಆಗಿತ್ತು!

ರಾಘವೇಂದ್ರ ರಾಜ್‌ಕುಮಾರ್‌ರ ಪುತ್ರ ಯುವ ಹಲವು ವರ್ಷಗಳಿಂದ ಹವಾ ಎಬ್ಬಿಸಿದ್ರು. ಅವರ ಸಿನಿಮಾ ಕರಿಯರ್ ಹಿಂಗೆ ಇರುತ್ತೆ ಅಂತಾ, ಯುವ ಅವರ ಒಂದೇ ಒಂದು ಟೀಸರ್ ನೋಡಿ ಅಭಿಮಾನಿಗಳು ಫಿಕ್ಸ್ ಆಗಿದ್ದರು. 'ಯುವ ರಣಧೀರ ಕಂಠೀರವ' ಟೀಸರ್ ನೋಡಿದ್ದ ಫ್ಯಾನ್ಸ್ ದೊಡ್ಮನೆ ಮೊಮ್ಮಗ ಗೆದ್ದೇ ಗೆಲ್ತಾರೆ ಅಂತಾ ಫಿಕ್ಸ್ ಆಗಿದ್ರು. ಈ ಮಾತು ಈಗ ನಿಜವಾಗುತ್ತಿದ್ದು ಯುವ ರಾಜ್‌ಕುಮಾರ್ ಅವರ ಮೊದಲ ಸಿನಿಮಾ 'ಯುವ' ಚಿತ್ರದ ಮೊದಲ ಹಾಡು ನಿನ್ನೆ ರಿಲೀಸ್ ಆಗಿದೆ. ಮೊದಲ ಹಾಡಿನಲ್ಲೇ ಮಿಲಿಯನ್ ಮಿಲಿಯನ್ ವೀವ್ಸ್ ಪಡೆದು, ಯುವ ಇದೀಗ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಈ ಮೂಲಕ ಚಾಮರಾಜನಗರ ನಿನ್ನೆ ಮತ್ತೊಮ್ಮೆ ದೊಡ್ಮನೆ ಸಂಭ್ರಮಕ್ಕೆ ವೇದಿಕೆ ಆಗಿತ್ತು.

Puneeth Rajkumar Fans Are Now Very Happy After Watching Yuva Rajkumar Dance

ಡಾ. ರಾಜ್‌ಕುಮಾರ್ ಕೊಡುಗೆ ಅಪಾರ

ದೊಡ್ಮನೆ ಅಂದ್ರೆ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಗೌರವ ಇದೆ. ಯಾಕಂದ್ರೆ ಕನ್ನಡಿಗರ ಸಿನಿಮಾ ಇಂಡಸ್ಟ್ರಿಗೆ ಈ ಮಟ್ಟಿಗೆ ದೊಡ್ಡ ಹೆಸರು ಬರಲು ಡಾ. ರಾಜ್‌ಕುಮಾರ್ ಅವ್ರ ಕೊಡುಗೆ ದೊಡ್ಡದು. ಈ ಕಾರಣ ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಮನೆಯ ನಟರಿಗೆ ದೊಡ್ಡ ಗೌರವ ಇದೆ. ಹೀಗಿದ್ದಾಗ ದೊಡ್ಮನೆಯ ಮತ್ತೊಂದು ಕುಡಿ, ಇದೀಗ ಸಿನಿಮಾ ಇಂಡಸ್ಟ್ರಿಗೆ ಭರ್ಜರಿ ಹೆಜ್ಜೆ ಹಾಕುತ್ತಿದೆ. ಯುವ ರಾಜ್‌ಕುಮಾರ್ ಅಭಿನಯದ ಮೊದಲ ಚಿತ್ರ 'ಯುವ' ಸಿನಿಮಾ ಸಾಂಗ್ 'ಒಬ್ಬನೇ ಶಿವ, ಒಬ್ಬನೇ ಯುವ' ಹಾಡು ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಅಭಿಮಾನಿಗಳು ಸಾಕ್ಷಿಯಾಗಿದ್ದರು.

ದೊಡ್ಮನೆಯ ಮೊಮ್ಮಗ ಯುವ...

ಯುವ ರಾಜ್‌ಕುಮಾರ್ ಭರ್ಜರಿಯಾಗಿ ಸಿನಿಮಾ ರಂಗಕ್ಕೆ ಬರಲು ಸಜ್ಜಾಗಿದ್ದಾರೆ. ದೊಡ್ಮನೆಯ ಮೊಮ್ಮಗ ಯುವ ರಾಜ್‌ಕುಮಾರ್ ಅಭಿನಯದ ಮೊದಲ ಚಿತ್ರ ಇದೇ ತಿಂಗಳು ಅಂದ್ರೆ ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಹೀಗೆ ಸಿನಿಮಾ ರಿಲೀಸ್‌ಗೆ ಸಕಲ ಸಿದ್ಧತೆ ನಡೆಸಿದ, ಹೊಂಬಾಳೆ ಫಿಲ್ಮ್ಸ್ ಪ್ರಮೋಷನ್ಸ್ ಶುರು ಮಾಡಿದೆ. ಜೊತೆಗೇ ಯುವ ರಾಜ್‌ಕುಮಾರ್‌ರ ಡಾನ್ಸ್ ವೈರಲ್ ಆಗುತ್ತಿದೆ. 'ಯುವ' ಸಿನಿಮಾದ ಮೊದಲ ಹಾಡಿನಲ್ಲಿ ಭರ್ಜರಿ ಸ್ಟೆಪ್ ಹಾಕಿರುವ, ಕನ್ನಡಿಗರ ಪ್ರೀತಿಯ ಯುವ ಅಪ್ಪು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

Puneeth Rajkumar Fans Are Now Very Happy After Watching Yuva Rajkumar Dance

ಇದೇ ತಿಂಗಳು ಸಿನಿಮಾ ರಿಲೀಸ್!

ಯುವ ರಾಜ್‌ಕುಮಾರ್ ಅವರ ಮೊದಲ ಸಿನಿಮಾ 'ಯುವ' ಇನ್ನೇನು ಇದೇ ತಿಂಗಳು ಭಾರಿ ಸದ್ದಿನ ಮೂಲಕ ರಿಲೀಸ್ ಆಗಲಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮಾಡಲು ಬೇಕಾಗಿರುವ, ಅಂತಿಮ ಹಂತದ ತಯಾರಿ ಸಾಗಿವೆ. ಈ ಸಿನಿಮಾ ಮೂಲಕ ಯುವ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಪಡೆಯುತ್ತಿದ್ದರೆ, ಸಂತೋಷ್ ಆನಂದ್‌ ರಾಮ್ ನಿರ್ದೇಶನದ ಈ ಚಿತ್ರದಲ್ಲಿ 'ಕಾಂತಾರ' ಸಿನಿಮಾದ ಬೆಡಗಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೀಗಾಗಿ ದೇಶಾದ್ಯಂತ ಈ ಸಿನಿಮಾ ಭಾರಿ ಹೈಪ್ ಕ್ರಿಯೇಟ್ ಮಾಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಹವಾ!

ಯುವ ರಾಜ್‌ಕುಮಾರ್ ಹೋಲಿಕೆಯಲ್ಲಿ ಪುನೀತ್ ಅವರ ನೆನಪು ಮಾಡುತ್ತಾರೆ. ಹಾಗೇ, ಯುವ ಮಾಡುವ ಸ್ಟಂಟ್ & ಡಾನ್ಸ್ ಕೂಡ ಪುನೀತ್ ರಾಜ್‌ಕುಮಾರ್ ಅವರನ್ನೀಗ ನೆನಪು ಮಾಡುತ್ತಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ಶುರುವಾಗಿದ್ದು ಯುವ ಅವ್ರನ್ನ ಫ್ಯಾನ್ಸ್ ಹೊಗಳುತ್ತಿದ್ದಾರೆ. ಹಾಗೇ ಸಿನಿಮಾ ನೋಡಿ ಎಂಜಾಯ್ ಮಾಡಲು ಕಾಯುತ್ತಿದ್ದಾರೆ. ಯುವ ಡಿಫರೆಂಟ್ ಎಂಟ್ರಿಗೆ ವೇದಿಕೆ ಕೂಡ ಭಾರಿ ಅಬ್ಬರದೊಂದಿಗೆ ಸಜ್ಜಾಗಿದೆ. ಇನ್ನು ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಹಿಂದೆಯೇ ಯುವ ರಾಜ್‌ಕುಮಾರ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಬಹುದಿತ್ತು. ಇದಕ್ಕಾಗಿ ಐತಿಹಾಸಿಕ ಸಿನಿಮಾ ಕಥೆ ರೆಡಿಯಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾ ತೆರೆಗೆ ಬಂದಿಲ್ಲ. ಹೀಗಾಗಿ ಆ ಸಿನಿಮಾ ಪ್ರಾಜೆಕ್ಟ್ ಬಿಟ್ಟು, ಯುವ ಸಿನಿಮಾ ಒಪ್ಪಿಕೊಂಡಿದ್ದ ದೊಡ್ಮನೆ ಮೊಮ್ಮಗ ಯುವ ರಾಜ್‌ಕುಮಾರ್ ಇದೀಗ ಅಬ್ಬರಿಸಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+