ಕರಾವಳಿ ಪ್ರತಿಭೆ ಪೃಥ್ವಿ ಅಂಬಾರ್‌ಗೆ ಸಿಕ್ಕಿದೆ ಮತ್ತೊಂದು ಪ್ರೇಮಕಥೆ!
ಕನ್ನಡ ಸಿನಿಮಾ ಇಂಡಸ್ಟ್ರಿ ಸಿಕ್ಕಾಪಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಹಿಂದೆ ಎಂದಿಗಿಂತಲೂ ಅಬ್ಬರ ತೋರುತ್ತಿದೆ. ಸಾಲು ಸಾಲು ಇಂಡಸ್ಟ್ರಿ ಹಿಟ್ ಸಿನಿಮಾಗಳು & ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕನ್ನಡಿಗರು ನೀಡುತ್ತಿದ್ದಾರೆ. ಈ ಸಮಯದಲ್ಲೇ ಕನ್ನಡ ಸಿನಿಮಾ ಜಗತ್ತು, ಹೊಸಬರನ್ನು ಕೂಡ ಬಾಚಿ ತಬ್ಬುತ್ತಿದೆ. ಇದೇ ರೀತಿ ಹೊಸಬರಾಗಿ ಬಂದು ಇದೀಗ ಸ್ಟಾರ್ ಆಗಿರುವ ಕರಾವಳಿ ಪ್ರತಿಭೆ ಪೃಥ್ವಿ ಅಂಬಾರ್ ತಮ್ಮ ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದ್ದಾರೆ!
ಯೆಸ್.. 'ದಿಯಾ' ಸಿನ್ಮಾ ಮೂಲಕ ಕನ್ನಡಿಗರ ಹೃದಯವನ್ನು ಕದ್ದ ಕರಾವಳಿ ಕುವರ ಪೃಥ್ವಿ ಅಂಬಾರ್ ಸಾಲು ಸಾಲು ಸಿನಿಮಾಗಳಲ್ಲಿ ಈಗ ಫುಲ್ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ, ತಮಿಳು ಸಿನಿಮಾ ಇಂಡಸ್ಟ್ರಿಗೂ ಪಾದರ್ಪಣೆ ಮಾಡಿರುವ ಪೃಥ್ವಿ, ಹೊಸ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯುವ ಪ್ರತಿಭೆ ವೈಭವ್ ಮಹಾದೇವ್ ಸಾರಥ್ಯದ ಜೂನಿ ಸಿನಿಮಾದಲ್ಲಿ ಪೃಥ್ವಿ ಅವರು ಇದೀಗ ನಾಯಕನಾಗಿ ನಟಿಸುತ್ತಿದ್ದಾರಂತೆ.

ಹೊಸ ಡೈರೆಕ್ಟರ್ ಆ್ಯಕ್ಷನ್ ಕಟ್!
'ಜನ್ನಿ' ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ 'ಜೂನಿ' ಸಿನಿಮಾದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡೋಕೆ ಸಿದ್ಧವಾಗಿದ್ದಾರೆ. ನಿರ್ದೇಶಕನ ಕೋರ್ಸ್ ಮುಗಿಸಿದ್ದ ವೈಭವ್ ಮಹಾದೇವ್ ಅವರೀಗ ಈ ಚಿತ್ರಕ್ಕೆ ಕಥೆ & ಚಿತ್ರಕಥೆ ಬರೆದಿದ್ದಾರಂತೆ. ಅವರೇ ಆ್ಯಕ್ಷನ್ ಕಟ್‌ನ ಕೂಡ ಹೇಳಿದ್ದಾರೆ. ವಿಭಿನ್ನ ಟೈಟಲ್ ಜೊತೆ 'ಜೂನಿ' ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪೃಥ್ವಿ ಅಂಬಾರ್‌ಗೆ ಜೋಡಿಯಾಗಿ ರಿಷಿಕಾ ನಾಯಕ್ ಡಿಫರೆಂಟ್ ಅವತಾರದಲ್ಲಿ ಕಾಣಿಸಿದ್ದಾರೆ.
ಸಿನಿಮಾದ ಕಥಾ ಹಂದರ ಏನು?
ಹೆಸರಲ್ಲೇ ಡಿಫರೆಂಟ್ ಆಗಿ ಹೈಪ್ ಕ್ರಿಯೇಟ್ ಮಾಡಿರುವ ಜೂನಿ, ರೋಮ್ಯಾಂಟಿಕ್ ಕಥಾ ಹಂದರ ಇರುವ ಸಿನಿಮಾ. ದಿಯಾ ಬಳಿಕ ಪೃಥ್ವಿ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ. ಯಾರ ಮೇಲೆ ಪ್ರೀತಿ ಹುಟ್ಟುತ್ತೋ ಅವರ ಮೇಲೆ ಪ್ರೀತಿ ಆಗುತ್ತಾ? ಎಂಬ ಕಥೆ ಎಳೆ ಇಟ್ಕೊಂಡು ಚಿತ್ರಕಥೆ ಹೆಣೆಯಲಾಗಿದೆ ಅಂತೆ. ತ್ರಿಶೂಲ ಕ್ರಿಯೇಷನ್ ಅಡಿ ಮೋಹನ್ ಕುಮಾರ್ ಸಿನಿಮಾಗೆ ಹಣ ಹಾಕಿದ್ದು, ಶ್ರೇಯಸ್ ಸಹ ನಿರ್ಮಾಪಕನ ಜವಾಬ್ದಾರಿ ಹೊತ್ತಿದ್ದಾರೆ.
ಶೂಟಿಂಗ್ ನಡೆದಿದ್ದು ಎಲ್ಲೆಲ್ಲಿ?
ಇನ್ನು ಸದ್ದಿಲ್ಲದೆ ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮುಗಿಸಿದ ಜೂನಿ ಚಿತ್ರತಂಡ, ಜನವರಿಗೆ ಸಿನಿಮಾ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ನಕುಲ್ ಅಭ್ಯಂಕರ್ ಸಂಗೀತ, ಶಶಾಂಕ್ ನಾರಾಯಣ್ ಸಂಕಲನ, ಅಜಿನ್, ಜಿತಿನ್ ದಾಸ್ ಛಾಯಾಗ್ರಹಣ, ನವೀನ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಫಸ್ಟ್ ಲುಕ್ ರಿಲೀಸ್ ಮಾಡಿರುವ ಜೂನಿ ತಂಡ ಟೀಸರ್, ಟ್ರೇಲರ್, ಸಾಂಗ್‌ಗಳು ಹೀಗೆ ಒಂದೊಂದಾಗಿ ಪೃಥ್ವಿ ಅಂಬಾರ್ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಸಜ್ಜಾಗಿದೆ.












Click it and Unblock the Notifications