ಚಂದನ್ ಶೆಟ್ಟಿ & ನಿವೇದಿತಾಗೌಡ ಡಿವೋರ್ಸ್; ಇನ್ಮೇಲೆ ಇದಕ್ಕೂ ನನಗೂ ಸಂಬಂಧವಿಲ್ಲ ಎಂದ ಪ್ರಥಮ್
ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರ ನಾಲ್ಕು ವರ್ಷಗಲ ದಾಂಪತ್ಯಕ್ಕೆ ತೆರೆ ಬಿದ್ದಿದೆ. ಶುಕ್ರವಾರ ಈ ಜೋಡಿ ತಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿರುವುದಾಗಿ ಘೋಷಿಸಿದ್ದಾರೆ. ಆದರೆ ಇಬ್ಬರನ್ನೂ ಒಂದು ಮಾಡುತ್ತೇನೆ ಎಂದು ಹೋದ ನಟ ಪ್ರಥಮ್ ಈಗ ಇದರ ಸಹವಾಸವೇ ಬೇಡ ಅಂದಿದ್ದಾರೆ.
ಚಂದನ್- ನಿವೇದಿತಾ ವಿಚ್ಛೇದನದ ಬಗ್ಗೆ ಮಾತನಾಡಿದ್ದ ನಟ ಪ್ರಥಮ್, ಇಬ್ಬರೂ ಒಳ್ಳೆಯವರು, ಕೆಟ್ಟ ಗಳಿಗೆಯಲ್ಲಿ ಏನಾದರೂ ಆಗಿರಬಹುದು. ನಾನು ಇಬ್ಬರ ಬಳಿ ಮಾತನಾಡಿ ಸಂಧಾನಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರು.

ಆದರೆ ಚಂದನ್ ಮತ್ತು ನಿವೇದಿತಾ ಸಾಕಷ್ಟು ಯೋಚನೆ ಮಾಡಿಯೇ ನಿರ್ಧಾರ ಮಾಡಿದ್ದು, ಬೇರೆಯಾಗಿರುವುದಾಗಿ ಹೇಳಿದ್ದಾರೆ. ಮಾಧ್ಯಮಗಳಿಗೆ ಪದೇ ಪದೇ ಚಂದನ್ ನಿವೇದಿತಾ ವಿಚ್ಛೇದನದ ಬಗ್ಗೆ ಹೇಳಿಕೆ ಕೊಟ್ಟ ಪ್ರಥಮ್ ವಿರುದ್ಧವೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಡವರ ಮನೆ ವಿಚಾರ ನಿಮಗ್ಯಾಕೆ, ಅವರ ಸಂಸಾರದಲ್ಲಿ ನೀವೇಕೆ ಮೂಗು ತೂರಿಸುತ್ತಿದ್ದಾರೆ ಎಂದಿದ್ದ ನೆಟ್ಟಿಗರು, ಅವರಿಬ್ಬ ವಿಚಾರವನ್ನು ತಮ್ಮ ಜನಪ್ರಿಯತೆ, ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.
ಕೆಲವು ಯೂಟ್ಯೂಬ್ ಚಾನೆಲ್‌ಗಳು ಚಿತ್ರ ವಿಚಿತ್ರ ಟೈಟಲ್ ಕೊಟ್ಟು ಪ್ರಥಮ್ ಮಾತನಾಡಿದ ವಿಡಿಯೋ ಅಪ್‌ಲೋಡ್ ಮಾಡಿವೆ. ತಮ್ಮ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ಪ್ರಥಮ್ ಇನ್ನು ಮುಂದೆ ಇದಕ್ಕೂ ನನಗೂ ಸಂಬಂಧ ಇಲ್ಲ ಎಂದಿದ್ದಾರೆ.
ಚಂದನ್ ಶೆಟ್ಟಿ ನನ್ನ ಮದುವೆಗೆ ಬಂದಿದ್ರು,ಅವ್ರ ವಿಚಾರದಲ್ಲಿ ಸಂಧಾನ ಮಾಡೋಣ ಅಂತ ಶಕ್ತಿಮೀರಿ ಪ್ರಯತ್ನಿಸಿದೆ;ಹಾಳಾದ ಕೆಲವು YouTube ವಿದೆಒ ನಾನ್ ಹೇಳಿದ್ದಕ್ಕೆ ಏನೇನೋ thumbnailಹಾಕಿ wrong;
— Olle Hudga Pratham (@OPratham) June 8, 2024
ಇಲ್ಲಿಗೆ ನಿಲ್ಸಿ.ನನಗೂ ಇದಕ್ಕೂ ಇನ್ಮೇಲೆ ಸಂಬಂಧವಿಲ್ಲ.ನಾನು ಯಾವ ಸಂಧಾನಕ್ಕೂ ಹೋಗಲ್ಲ.ಥೂ ನಿಮ್ ಜನ್ಮಕ್ಕೆ.ಏನೇನೋ ಹಾಕ್ತೀರಲ್ರೋ...ಹಾಳಾದವ್ರೇ😡
ಪ್ರಥಮ್ ಹೇಳಿದ್ದೇನು?
ಚಂದನ್ ಶೆಟ್ಟಿ ನನ್ನ ಮದುವೆಗೆ ಬಂದಿದ್ರು, ಅವ್ರ ವಿಚಾರದಲ್ಲಿ ಸಂಧಾನ ಮಾಡೋಣ ಅಂತ ಶಕ್ತಿಮೀರಿ ಪ್ರಯತ್ನಿಸಿದೆ; ಹಾಳಾದ ಕೆಲವು ಯೂಟ್ಯೂಟ್ ವಿಡಿಯೋ ನಾನ್ ಹೇಳಿದ್ದಕ್ಕೆ ಏನೇನೋ ಶೀರ್ಷಿಕೆ ಹಾಕಿವೆ. ಇಲ್ಲಿಗೆ ನಿಲ್ಲಿಸಿ, ನನಗೂ ಇದಕ್ಕೂ ಇನ್ಮೇಲೆ ಸಂಬಂಧವಿಲ್ಲ, ನಾನು ಯಾವ ಸಂಧಾನಕ್ಕೂ ಹೋಗಲ್ಲ ಎಂದಿದ್ದಾರೆ.












Click it and Unblock the Notifications