ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಸಲಾರ್’ ಓಟಿಟಿಗೆ ಬಂತು ನೋಡಿ!

ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ 4ನೇ ಸಿನಿಮಾ 'ಸಲಾರ್' ಡಿಸೆಂಬರ್ 22ರ ಶುಕ್ರವಾರ ರಿಲೀಸ್ ಆಗಿತ್ತು. ಜಗತ್ತಿನ ಮೂಲೆ ಮೂಲೆಯಲ್ಲಿ ಸಲಾರ್ ಅಬ್ಬರ ಜೋರಾಗಿತ್ತು. ಹೀಗಾಗಿಯೆ ಸಲಾರ್ ಸಿನಿಮಾ ಭರ್ಜರಿ 700 ಕೋಟಿ ಕ್ಲಬ್ ಸೇರಿ, ಈಗ 800 ಕೋಟಿ ಕ್ಲಬ್ ಕಡೆಗೆ ತನ್ನ ಓಟ ಮುಂದುವರಿಸಿದೆ. ಈ ಸಮಯದಲ್ಲಿ ಥಿಯೇಟರ್ ಪರದೆ ಮೇಲೆ 'ಸಲಾರ್' ಸಿನಿಮಾ ನೋಡಲು ಆಗದ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೂಡ ಸಿಕ್ಕಿದೆ! ಏನು ಗೊತ್ತಾ ಅದು?

ಹೌದು, ಬಾಕ್ಸ್ ಆಫಿಸ್ ಅಖಾಡದಲ್ಲಿ ಪ್ರಭಾಸ್ ಸಿನಿಮಾ ಸಂಚಲನ ಸೃಷ್ಟಿಸಿದೆ. ಹೀಗಿದ್ದಾಗಲೇ ಡಾರ್ಲಿಂಗ್ ಪ್ರಭಾಸ್ ಅವ್ರು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಖದರ್ ತೋರಿಸಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟಿಗೆ ಹಿಟ್ ಕಂಡ ನಂತರ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿತ್ತು. ಇದೀಗ ಆ ಪ್ರಶ್ನೆಗಳಿಗೆ ಉತ್ತರ ಕೂಡ ಸಿಕ್ಕಿದೆ. 'ಸಲಾರ್' ನಾಳೆಯಿಂದಲೇ ಓಟಿಟಿಗೆ ಎಂಟ್ರಿ ಹಾಕಲಿದ್ದು, ಅಭಿಮಾನಿಗಳಿಗೆ ಕೂಡ ಸರ್ಪ್ರೈಸ್ ಸಿಕ್ಕಿದೆ. ಹಾಗಾದರೆ ಯಾವ ಓಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತೆ? 'ಸಲಾರ್' ತಂಡದ ಪ್ಲ್ಯಾನ್ ಏನು? ಮುಂದೆ ಓದಿ.

Prabhas & Prashant Neel Movie Salaar OTT Release Date Confirmed

ಅಭಿಮಾನಿಗಳಿಗೆ ಹಬ್ಬ ಗ್ಯಾರಂಟಿ!

ಸಲಾರ್ ರಿಲೀಸ್ ಆಗಿ 4ನೇ ವಾರಕ್ಕೆ ಎಂಟ್ರಿ ಕೊಟ್ರೂ, ಅಬ್ಬರ ಮಾತ್ರ ಸ್ವಲ್ಪವೂ ಕಮ್ಮಿ ಆಗ್ತಿಲ್ಲ. ಈಗ್ಲೂ ಸಲಾರ್ ಅಬ್ಬರಿಸುತ್ತಲೆ ಇದ್ದು ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಕೋಟಿ ಕೋಟಿ ಗಳಿಸುತ್ತಿರುವ ಸಲಾರ್‌ಗೆ ಯಾವುದೇ ಅಡ್ಡಿ ಎದುರಾಗಿಲ್ಲ. ಈಗಾಗಲೇ, ಈ ಸಿನಿಮಾ ಥಿಯೇಟರ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಂಡ ಅಭಿಮಾನಿ ಬಳಗಕ್ಕೆ ಇದೀಗ ಓಟಿಟಿ ಅಖಾಡದಲ್ಲಿ ನೋಡುವ ಅವಕಾಶ ಸಿಕ್ಕಿದೆ.

160 ಕೋಟಿ ರೂಪಾಯಿಗೆ ಡೀಲ್?

ಓಟಿಟಿ ದೈತ್ಯ ಎಂದೇ ಕರೆಸಿಕೊಳ್ಳುವ ನೆಟ್‌ಫ್ಲಿಕ್ಸ್ ಸಲಾರ್-1 ಓಟಿಟಿ ರೈಟ್ಸ್‌ ಪಡೆದುಕೊಂಡಿದೆ. ಸುಮಾರು 160 ಕೋಟಿ ರೂಪಾಯಿಗೆ ಮಾತುಕತೆ ಆಗಿದೆ ಎನ್ನಲಾಗಿತ್ತು ಹೀಗಾಗಿ ಸಲಾರ್ ಓಟಿಟಿ ಸುದ್ದಿ ಕೂಡ ಸದ್ದು ಮಾಡಿತ್ತು. ಈಗ ನೆಟ್‌ಫ್ಲಿಕ್ಸ್ 'ಸಲಾರ್-1' ಸ್ಟ್ರೀಮ್ ಮಾಡಲಿದೆ, ನಾಳೆಗೆ ಅಂದ್ರೆ ಜನವರಿ 20 ರಿಂದಲೇ ಸಲಾರ್ ಸಿನಿಮಾ ಆನ್‌ಲೈನ್‌ಗೆ ಎಂಟ್ರಿಯನ್ನ ಕೊಡಲಿದ್ದು, ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಹಾಗಾದರೆ ಯಾವೆಲ್ಲಾ ಭಾಷೆಯಲ್ಲಿ ಸಲಾರ್-1 ಸ್ಟ್ರೀಮಿಂಗ್ ಆಗುತ್ತೆ ಗೊತ್ತಾ? ಮುಂದೆ ಓದಿ.

Prabhas & Prashant Neel Movie Salaar OTT Release Date Confirmed

ಜನವರಿ 20 ರಿಂದ ಕನ್ನಡ, ತೆಲುಗು, ತಮಿಳು ಸೇರಿ ಮಲಯಾಳಂ ಭಾಷೆಗಳಲ್ಲಿ ಸಲಾರ್-1 ಸ್ಟ್ರೀಮಿಂಗ್ ಆಗಲಿದೆ. ಆದರೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಓಟಿಟಿ ಅಖಾಡದಲ್ಲಿ ಸ್ಟ್ರೀಮ್ ಆಗುವ ಬಗ್ಗೆ ಇನ್ನೂ ಮಾಹಿತಿ ಸ್ಪಷ್ಟವಾಗಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಗಣರಾಜ್ಯೋತ್ಸವಕ್ಕೆ ಮೊದಲು ಸಿಹಿಸುದ್ದಿ ಸಿಕ್ಕಿದೆ. ಹೀಗಾಗಿ ಫ್ಯಾನ್ಸ್ ಕೂಡ ಸಂಭ್ರಮಿಸುತ್ತಿದ್ದಾರೆ. ಮತ್ತೊಂದು ಕಡೆ ಬಾಕ್ಸ್ ಆಫಿಸ್‌ನಲ್ಲಿ ಕೂಡ ಸಲಾರ್ ಹಲವಾರು ದಾಖಲೆಗಳನ್ನ ಬರೆದಿದೆ.

ಯುರೋಪ್ ಲೋಕಲ್ ಬಾಯ್ ಪ್ರಭಾಸ್!

ಜಾಗತಿಕ ಸಿನಿಮಾ ರಂಗ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗಲು ಸಿದ್ಧವಾಗುತ್ತಿದೆ. ಹೀಗೆ ಸಲಾರ್ ಸಿನಿಮಾ ಕೂಡ ಹಲವು ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ಇದೀಗ ವಿದೇಶಿ ಭಾಷೆಯಲ್ಲಿ ಕೂಡ ಈ ಸಿನಿಮಾ ಅಬ್ಬರಿಸಲು ಮುಂದಾಗಿದೆ. ಸ್ಪ್ಯಾನಿಷ್ ಭಾಷೆಗೆ ಡಬ್ ಆದ 'ಸಲಾರ್-1' 2024ರ ಮಾರ್ಚ್ 7ಕ್ಕೆ ಭಾರಿ ಅಬ್ಬರದ ಮೂಲಕ ರಿಲೀಸ್ ಆಗಲಿದೆ. ಈ ಮೂಲಕ ಯುರೋಪ್ ಜನ, ತಮ್ಮ ಸ್ಥಳೀಯ ಭಾಷೆಯಲ್ಲೇ ಸಲಾರ್ ಸಿನಿಮಾ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿದೆ.

ಒಟ್ನಲ್ಲಿ ಸಲಾರ್ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಹವಾ ತೋರಿಸಿದೆ. ಹಾಗೇ ಬಾಕ್ಸ್ ಆಫಿಸ್‌ನಲ್ಲಿ ಕೂಡ ಹೊಸ ದಾಖಲೆ ಬರೆದಿದೆ. ಭಾರತದಲ್ಲೇ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿರುವ 'ಸಲಾರ್-1' ಮತ್ತಷ್ಟು ಹೊಸ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡುತ್ತಿದೆ. ಹೀಗಾಗಿ ಅಭಿಮಾನಿಗಳು ಕೂಡ ಈ ಸಿನಿಮಾ ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದು ನಾಳೆಯಿಂದ ಅವರ ಆಸೆ ನೆರವೇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+