750 ಕೋಟಿ ರೂಪಾಯಿಗೂ ಹೆಚ್ಚು ದುಡಿದ ಡಾರ್ಲಿಂಗ್ ಪ್ರಭಾಸ್ ಸಿನಿಮಾ ಸಲಾರ್ ಈಗ ಓಟಿಟಿ ಅಖಾಡಕ್ಕೆ!

ನಟ ಪ್ರಭಾಸ್ ಅವರ ಸಿನಿಮಾ ಕರಿಯರ್‌ಗೆ ಹೊಸ ಹುಮ್ಮಸ್ಸು ಸಿಕ್ಕಿದೆ, ಕನ್ನಡಿಗರಿಂದಲೇ ನಿರ್ಮಾಣ ಆಗಿರುವ 'ಸಲಾರ್-1' ಸಿನಿಮಾ ದೊಡ್ಡ ದಾಖಲೆ ಬರೆದಿದೆ. ಹಾಗೇ ಸೋಲಿನ ಸುಳಿಯಲ್ಲಿ ಸಿಲುಕಿ ಪರದಾಡಿದ್ದ ಡಾರ್ಲಿಂಗ್ ಪ್ರಭಾಸ್‌ಗೆ ಕೂಡ ಭರ್ಜರಿ ಬ್ರೇಕ್ ಕೊಟ್ಟಿದೆ, ಸಲಾರ್ ಸಿನಿಮಾ. ಈಗಾಗಲೇ 750 ಕೋಟಿ ರೂಪಾಯಿಗೂ ಹೆಚ್ಚು ದುಡಿದಿರುವ ಈ ಚಿತ್ರ ಇನ್ನೇನು 30 ದಿನಗಳನ್ನು ಪೂರೈಸಲಿದೆ. ಈ ಸಮಯದಲ್ಲಿ ಓಟಿಟಿಗೆ ಕೂಡ 'ಸಲಾರ್-1' ಎಂಟ್ರಿ ಕೊಡ್ತಿದೆ, ಯಾವಾಗ ಗೊತ್ತೆ?

ಸಲಾರ್ ರಿಲೀಸ್ ಆಗಿ 4ನೇ ವಾರಕ್ಕೆ ಎಂಟ್ರಿ ಕೊಟ್ರೂ ಅಬ್ಬರ ಮಾತ್ರ ಸ್ವಲ್ಪವೂ ಕಮ್ಮಿ ಆಗ್ತಿಲ್ಲ. ಈಗ್ಲೂ ಸಲಾರ್ ಅಬ್ಬರಿಸುತ್ತಲೆ ಇದ್ದು ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಕೋಟಿ ಕೋಟಿ ಗಳಿಸುತ್ತಿರುವ ಸಲಾರ್‌ಗೆ ಯಾವುದೇ ಅಡ್ಡಿ ಎದುರಾಗಿಲ್ಲ. ಈಗಾಗಲೇ, ಈ ಸಿನಿಮಾವನ್ನ ಥಿಯೇಟರ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಂಡ ಅಭಿಮಾನಿ ಬಳಗಕ್ಕೆ ಈಗ ಓಟಿಟಿ ಅಖಾಡದಲ್ಲೂ ನೋಡುವ ಅವಕಾಶ ಸಿಕ್ಕಿದೆ. ಹಾಗಾದರೆ 'ಸಲಾರ್-1' ಓಟಿಟಿಯ ಅಖಾಡದಲ್ಲಿ ಅಬ್ಬರಿಸುವುದು ಯಾವಾಗ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಸಲಾರ್ ಓಟಿಟಿ ಎಂಟ್ರಿ ಯಾವಾಗ?

ಸೌತ್ ಸಿನಿಮಾ ರಿಲೀಸ್ ಆಗುವಾಗ, ದೊಡ್ಡ ಸಂಚಲನ ಸೃಷ್ಟಿಯಾಗಿ ಭಾರಿ ಹಣ ಗಳಿಸುತ್ತಿವೆ. ಸಲಾರ್ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ 750 ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ. ಇದೇ ಸಮಯದಲ್ಲಿ ಓಟಿಟಿಗೆ ಕೂಡ 'ಸಲಾರ್-1' ಬರಲಿದೆ ಎನ್ನಲಾಗಿದ್ದು ಇದೇ ತಿಂಗಳು ಅಂದ್ರೆ ಗಣರಾಜ್ಯೋತ್ಸವದ ದಿನ ಜನವರಿ 26ಕ್ಕೆ ಸಲಾರ್ ಓಟಿಟಿಗೆ ರಿಲೀಸ್ ಆಗಲಿದೆ ಎನ್ನಲಾಗಿದೆ. ಹಾಗಾದ್ರೆ ಯಾವ ಓಟಿಟಿಗೆ ಸಲಾರ್ ಬರ್ತಿದೆ? ಮುಂದೆ ಓದಿ.

ಯಾವ ಯಾವ ಭಾಷೆಯಲ್ಲಿ ರಿಲೀಸ್?

ಅಷ್ಟಕ್ಕೂ ಓಟಿಟಿ ದೈತ್ಯ ಎಂದೇ ಕರೆಸಿಕೊಳ್ಳುವ ನೆಟ್‌ಫ್ಲಿಕ್ಸ್ 'ಸಲಾರ್-1' ಓಟಿಟಿ ರೈಟ್ಸ್‌ನ ಪಡೆದುಕೊಂಡಿದೆ. ಸುಮಾರು 160 ಕೋಟಿ ರೂಪಾಯಿಗೆ ಮಾತುಕತೆ ಆಗಿದೆ ಎನ್ನಲಾಗಿತ್ತು ಹೀಗಾಗಿ ಸಲಾರ್ ಓಟಿಟಿ ಸುದ್ದಿ ಕೂಡ ಸದ್ದು ಮಾಡಿತ್ತು. ಈಗ ನೆಟ್‌ಫ್ಲಿಕ್ಸ್ 'ಸಲಾರ್-1' ಸ್ಟ್ರೀಮ್ ಮಾಡಲಿದೆ ಎನ್ನಲಾಗಿದೆ. ಜನವರಿ 26ರಿಂದ ಕನ್ನಡ, ತೆಲುಗು, ತಮಿಳು ಸೇರಿದಂತೆ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಆದರೆ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಓಟಿಟಿ ಅಖಾಡದಲ್ಲಿ ಸ್ಟ್ರೀಮ್ ಆಗುವ ಬಗ್ಗೆ ಇನ್ನೂ ಮಾಹಿತಿ ಸ್ಪಷ್ಟವಾಗಿಲ್ಲ.

Prabhas Movie Salaar OTT Release Date Details

750 ಕೋಟಿ ರೂಪಾಯಿ ಕ್ಲಬ್?

ಪ್ರಭಾಸ್ ಸಿನಿಮಾ ಅಬ್ಬರಕ್ಕೆ ಅಡೆತಡೆ ಇಲ್ಲ ಎನ್ನುವಂತಾಗಿದೆ. ಸಲಾರ್ ಸಿನಿಮಾ 750 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆ ದಟ್ಟವಾಗಿವೆ. ಹೀಗಿದ್ದಾಗಲೆ ವಿದೇಶಿ ಭಾಷೆಗಳಿಗೂ ಸಲಾರ್ ಡಬ್ಬಿಂಗ್ ಆಗಿ ರಿಲೀಸ್ ಆಗಲು ತಯಾರಿ ಆರಂಭಿಸಿದೆ. ಈಗಾಗಲೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿರುವ ಸಲಾರ್ ಈಗ ಈ ವಿದೇಶಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗುತ್ತಿದೆ. ಹೀಗಿದ್ದಾಗಲೇ ತನ್ನ ಬಾಕ್ಸ್ ಆಫಿಸ್ ಗಳಿಕೆಯನ್ನ ಹತ್ತಿರ ಹತ್ತಿರ 750 ಕೋಟಿ ರೂಪಾಯಿಗೆ ತಂದು ನಿಲ್ಲಿಸಿದೆ ಅಂತೆ.

ಭಾರತೀಯ ಸಿನಿಮಾ ರಂಗವು ಜಗತ್ತಿನಾದ್ಯಂತ ದೊಡ್ಡ ಹೆಸರು ಗಳಿಸಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ಸಿನಿಮಾಗಳಿಗೆ ಅಭಿಮಾನಿಗಳು ಇದ್ದಾರೆ. 'ಸಲಾರ್' ಸಿನಿಮಾದ ಮೂಲಕ ಪ್ರಭಾಸ್ ಅವರಿಗೆ ಬಿಗ್ ಬ್ರೇಕ್ ಸಿಕ್ಕಿದೆ. ಬಾಹುಬಲಿ-1 & ಬಾಹುಬಲಿ-2 ಹಿಟ್ ಆದ ಬಳಿಕ ರಾಧೆ ಶ್ಯಾಮ್ & ಆದಿಪುರುಷ್ ಸೋಲು ಪ್ರಭಾಸ್‌ರನ್ನ ಕಂಗೆಡಿಸಿತ್ತು. ಹೀಗಾಗಿ ಅವರಿಗೆ ಬ್ರೇಕ್ ಬೇಕಿತ್ತು. ಆದರೆ ಈ ಆಸೆ ಈಗ ಈಡೇರಿದೆ, ಪ್ರಭಾಸ್‌ಗೆ ದೊಡ್ಡ ಬ್ರೇಕ್ ನೀಡಿದೆ ಸಲಾರ್. ಈಗಿನ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ಪ್ರಭಾಸ್ ಸಿನಿಮಾ ಸಲಾರ್ ಬರೋಬ್ಬರಿ 750 ಕೋಟಿ ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ ಎನ್ನಲಾಗಿದೆ.

'ಸಲಾರ್-2' ಯಾವಾಗ ಬರುತ್ತೆ?

ಈಗಿರುವ ಮಾಹಿತಿಗಳ ಪ್ರಕಾರ 'ಸಲಾರ್-2'ಗೆ ಬೇಕಾದ ಕಥೆ ಜೊತೆಗೆ ಸ್ಕ್ರಿಪ್ಟ್ ಕೂಡ ಸಿದ್ಧ ಆಗಿದೆ ಅಂತಾ ಹೇಳಲಾಗಿದೆ. ಹೀಗಾಗಿ ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್, ಸಲಾರ್-2 ಸಿನಿಮಾ ಶೂಟಿಂಗ್ ಆರಂಭಿಸಲು ಬೇಕಿರುವ ತಯಾರಿ ನಡೆಸಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಪ್ರಭಾಸ್ ಕೂಡ ಸಿನಿಮಾ ತಂಡಕ್ಕೆ ಆದಷ್ಟು ಬೇಗ ಸಾಥ್ ನೀಡಲಿದ್ದಾರೆ. ಈ ಮೂಲಕ 2025ಕ್ಕೆ 'ಸಲಾರ್-2' ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಶುರು ಮಾಡುತ್ತೆ ಎಂಬ ಸುದ್ದಿ ಫ್ಯಾನ್ಸ್‌ಗೆ ಕೂಡ ಖುಷಿ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+