ಡಾರ್ಲಿಂಗ್ ಪ್ರಭಾಸ್ ಅವರ ‘ಸಲಾರ್-2’ ಯಾವಾಗ ರಿಲೀಸ್?

ದಕ್ಷಿಣ ಭಾರತದ ಸಿನಿಮಾಗಳು ಅಂದ್ರೆ ಜಗತ್ತಿನಾದ್ಯಂತ ಕ್ರೇಜ್ ಇರುತ್ತದೆ, ಅದರಲ್ಲೂ ನಟ ಡಾರ್ಲಿಂಗ್ ಪ್ರಭಾಸ್ ಸಿನಿಮಾಗಳಿಗೆ ಅಮೆರಿಕದಿಂದ ಹಿಡಿದು, ಅಫ್ಘಾನಿಸ್ತಾನದ ತನಕ ಭಾರಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಇದ್ದಾರೆ. ಹೀಗಾಗಿ ಸೌತ್ ಸಿನಿಮಾಗಳು ರಿಲೀಸ್ ಆಗುವ ಸಮಯದಲ್ಲಿ ಬಿರುಗಾಳಿಯೇ ಹುಟ್ಟಿಕೊಳ್ಳುತ್ತದೆ. ಅದೇ ರೀತಿ ಇದೀಗ 'ಸಲಾರ್' ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, 650 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಇದೇ ಸಮಯದಲ್ಲಿ 'ಸಲಾರ್-2' ರಿಲೀಸ್ ಬಗ್ಗೆ ಮಾಹಿತಿ ಹೊರಬಿದ್ದಿದೆ!

ಸಲಾರ್ ಸಿನಿಮಾ ತೆಲುಗು ಭಾಷೆಯಲ್ಲಿ ನಿರ್ಮಾಣ ಆಗಿದ್ದರೂ, ಇದನ್ನ ನಿರ್ಮಿಸಿರುವುದು ಮಾತ್ರ ಕನ್ನಡಿಗರು. ಡಾರ್ಲಿಂಗ್ ಪ್ರಭಾಸ್ & ಪೃತ್ವಿರಾಜ್ ಸುಕುಮಾರನ್ ಅವರನ್ನ ಬಿಟ್ಟರೆ ಬಹುತೇಕ ನಟರು & ನಟಿಯರು ಕನ್ನಡಿದವರು. ಹಾಗೇ ಸಲಾರ್ ಸಿನಿಮಾಗೆ ಕೆಲಸ ಮಾಡಿದ್ದ ತಾಂತ್ರಿಕ ವರ್ಗ ಕೂಡ ಕನ್ನಡಿಗರಿಂದಲೇ ತುಂಬಿತ್ತು. 'ಕೆಜಿಎಫ್' ಸಿನಿಮಾಗೆ ಕೆಲಸ ಮಾಡಿ ಪಳಗಿದ್ದ ತಂಡವನ್ನೇ ಕಟ್ಟಿಕೊಂಡು, ಪ್ರಶಾಂತ್ ನೀಲ್ ಅವರು ಈಗ 'ಸಲಾರ್' ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ. ಹಾಗಾದರೆ 'ಸಲಾರ್-2' ರಿಲೀಸ್ ಆಗೋದು ಯಾವಾಗ?

Prabhas Movie Salaar 2 Will Be Released By 2025

2025ಕ್ಕೆ ಬರಲಿದೆ 'ಸಲಾರ್-2'

ಹೌದು, ಹೊಂಬಾಳೆ ಸಂಸ್ಥೆಯ ಅಡಿಪಾಯ ಅಂತಲೇ ಕರೆಯುವ ವಿಜಯ್ ಕಿರಗಂದೂರು ಅವರ ಹೇಳಿಕೆ ಉಲ್ಲೇಖಿಸಿ ಇದೀಗ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಈ ವರದಿಯ ಅನ್ವಯ 2025ಕ್ಕೆ 'ಸಲಾರ್-2' ಸಿನಿಮಾ ರಿಲೀಸ್ ಆಗೋದು ಬಹುತೇಕ ಪಕ್ಕಾ ಎನ್ನಲಾಗಿದೆ. ಅಲ್ಲದೆ ಇನ್ನೇನು ಕೆಲವೇ ದಿನಗಳಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರು 'ಸಲಾರ್-2'ಗೆ ಬೇಕಾದ ತಯಾರಿ ಆರಂಭ ಮಾಡಲಿದ್ದಾರೆ ಎನ್ನಲಾಗಿದೆ. ಹಾಗಾದರೆ ಕಥೆ ಈಗಾಗಲೇ ರೆಡಿ ಇದೆಯಾ? ಇಲ್ವಾ?

ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ ನೀಲ್!

ಈಗಿರುವ ಮಾಹಿತಿಗಳ ಪ್ರಕಾರ 'ಸಲಾರ್-2'ಗೆ ಬೇಕಾದ ಕಥೆ ಜೊತೆಗೆ ಸ್ಕ್ರಿಪ್ಟ್ ಕೂಡ ಸಿದ್ಧ ಆಗಿದೆ ಎನ್ನಲಾಗಿದೆ. ಹೀಗಾಗಿ ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್, ಸಲಾರ್-2 ಸಿನಿಮಾ ಶೂಟಿಂಗ್ ಆರಂಭಿಸಲು ಬೇಕಿರುವ ತಯಾರಿ ನಡೆಸಲಿದ್ದಾರೆ ಎನ್ನಲಾಗಿದೆ. ಹಾಗೇ ನಟ ಡಾರ್ಲಿಂಗ್ ಪ್ರಭಾಸ್ ಕೂಡ ಸಿನಿಮಾ ತಂಡಕ್ಕೆ ಆದಷ್ಟು ಬೇಗ ಸಾಥ್ ನೀಡಲಿದ್ದಾರೆ. ಈ ಮೂಲಕ 2025ಕ್ಕೆ 'ಸಲಾರ್-2' ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಶುರು ಮಾಡುತ್ತೆ ಎನ್ನಲಾಗಿದೆ.

Prabhas Movie Salaar 2 Will Be Released By 2025

ಮೊದಲೇ ಗೊತ್ತಿತ್ತು ಸಲಾರ್ ಅಬ್ಬರ!

'ಕೆಜಿಎಫ್-1' & 'ಕೆಜಿಎಫ್-2' ನಿರ್ಮಿಸಿ ಗಮನ ಸೆಳೆದಿದ್ದ ಹೊಂಬಾಳೆ ಸಂಸ್ಥೆ ಕೆಲ ವರ್ಷದ ಹಿಂದೆ ಸಲಾರ್ ಪ್ರಾಜೆಕ್ಟ್ ಕೈಗೆತ್ತಿಕೊಂಡಾಗಲೆ, ಇದು ಬ್ಲಾಕ್ ಬಸ್ಟರ್ ಎಂಬ ಮಾತು ಎಲ್ಲೆಲ್ಲೂ ಓಡಾಡಿತ್ತು. ಈಗ ಆ ಮಾತು ನಿಜವಾಗಿದ್ದು, ಹೊಂಬಾಳೆ ನಿರ್ಮಾಣ ಮಾಡಿರುವ ಸಲಾರ್‌ಗೆ ಪ್ರೇಕ್ಷಕ ಫುಲ್ ಮಾರ್ಕ್ಸ್ ಕೊಟ್ಟಿದ್ದಾನೆ. ಬಾಕ್ಸ್ ಆಫಿಸ್ ಗಳಿಕೆಯಲ್ಲಿಯೂ 'ಸಲಾರ್' ಸಿನಿಮಾ ದೊಡ್ಡ ಮಟ್ಟಿಗೆ ಕಲೆಕ್ಷನ್ ಮಾಡಿದೆ. ಹಾಗೇ 'ಸಲಾರ್-2' ಯಾವಾಗ ರಿಲೀಸ್ ಆಗಲಿದೆ..? ಎನ್ನುವ ಪ್ರಶ್ನೆಗೆ ಕೂಡ ಉತ್ತರ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+