Ramya: ತಮಿಳು ನಟಿ ರಮ್ಯಾ ಮದುವೆಯನ್ನು ಕನ್ನಡ ನಟಿ ರಮ್ಯಾ ವಿವಾಹವೆಂದು ತಪ್ಪಾಗಿ ಭಾವಿಸಿದ ಫ್ಯಾನ್ಸ್..!

ಖ್ಯಾತ ತಮಿಳು ನಟಿ ರಮ್ಯಾ ಪಾಂಡಿಯನ್‌ (Ramya Pandian) ಇತ್ತೀಚೆಗೆ ಸದ್ದಿಲ್ಲದೆ ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಆದರೆ ತಮಿಳು ನಟಿ ರಮ್ಯಾ ಮದುವೆಯನ್ನು ಕರ್ನಾಟಕದ ಜನತೆ ಸ್ಯಾಂಡಲ್‌ವುಡ್ ರಮ್ಯಾ (Divya Spandana) ಮದುವೆ ಎಂದು ತಪ್ಪಾಗಿ ಭಾವಿಸಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ಹೆಚ್ಚಾಗಿದೆ.

ಹೌದು. ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾಗಿನ್ನೂ ಕೂಡ ಮದುವೆಯಾಗಿಲ್ಲ. ಅವರು ಮದುವೆ ಯಾವಾಗ ಮಾಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಲ್ಪಟ್ಟಿದ್ದವು. ಇದಕ್ಕೆ ರಮ್ಯಾ ಮಾತ್ರ ಉತ್ತರಿಸಿಲ್ಲ. ತಾವು ಮದುವೆಯಾದಾಗ ಖಂಡಿತಾ ಆಹ್ವಾನಿಸುವುದಾಗಿ ಹೇಳಿಕೊಂಡಿದ್ದರು. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅವರ ಸ್ನೇಹಿತನೊಂದಿಗೆ ರಮ್ಯಾ ಅವರ ಮದುವೆ ನಿಶ್ಚಯವಾಗಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ರಮ್ಯಾ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.

Fans mistook Popular Tamil actress Ramya Pandian wedding as Kannada actress Ramya s wedding

ಇದೇ ಸಮಯದಲ್ಲಿ ತಮಿಳಿನ ಖ್ಯಾತ ನಟಿ ರಮ್ಯಾ ಪಾಂಡಿಯನ್ ಗುಟ್ಟಾಗಿ ಮದುವೆಯಾಗಿದ್ದಾರೆ. ಅವರ ಫೋಟೋಗಳು ಇದೇ ಸಮಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಆದರೆ ಈ ಮದುವೆಯನ್ನು ಸ್ಯಾಂಡಲ್‌ವುಡ್ ನಟಿ ರಮ್ಯಾ ಮದುವೆ ಎಂದು ಕನ್ನಡಿಗರು ಭಾವಿಸಿದ್ದಾರೆ. ಹೀಗಾಗಿ ರಮ್ಯಾ ಮದುವೆ ಮಾಡಿಕೊಂಡ ಹುಡುಗ ಯಾರು ಎನ್ನುವ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಹಾಗಾದರೆ ಮದುವೆಯಾದ ರಮ್ಯಾ ಯಾರು?

ಮದುವೆಯಾದ ನಟಿ ಯಾರು?

ತಮಿಳಿನ 'ಜೋಕರ್', 'ಆನ್‌ ದೇವತೈ' ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ ನಟಿಯೇ ರಮ್ಯಾ ಪಾಂಡಿಯನ್. ಇವರು 'ಕುಕ್ಕು ವಿತ್ ಕೋಮಲಾ' ಮತ್ತು 'ಬಿಗ್‌ಬಾಸ್‌' ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಕೆಲ ವೆಬ್‌ಸರಣಿಗಳಲ್ಲೂ ನಟಿಸುವ ಮೂಲಕ ಕಾಲಿವುಡ್‌ನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇವರು ಶುಕ್ರವಾರ ಅಂದರೆ ನವೆಂಬರ್‌ 8ರಂದು ರಿಷಿಕೇಶದ ಶಿವಪುರಿಯಲ್ಲಿ ಗಂಗಾನದಿಯ ದಡದಲ್ಲಿ ಬೆಂಗಳೂರು ಮೂಲದ ಯೋಗ ತರಬೇತುದಾರ ಲವೆಲ್ ಧವನ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹುಡುಗ ಬೆಂಗಳೂರು ಮೂಲದವನಾದ್ದರಿಂದ ಈ ಮದುವೆ ಸಾಕಷ್ಟು ಸುದ್ದಿಯಾಗಿದೆ.

ಹಿಂದೂ ಸಂಪ್ರದಾಯದಂತೆ ಇವರಿಬ್ಬರು ಮದುವೆಯಾದರು. ಮೂಲತ: ಪಂಜಾಬ್ ಮೂಲದವನಾದ ಲವೆಲ್ ಧವನ್ ಬೆಂಗಳೂರಿನ ಆರ್ಟ್‌ ಆಫ್ ಲಿವಿಂಗ್‌ನಲ್ಲಿ ಯೋಗ ಟೀಚರ್ ಆಗಿದ್ದಾರೆ. ಯೋಗ ತರಬೇತಿ ಪಡೆಯಲು ರಮ್ಯಾ ಅವರು ಲವೆಲ್ ಧವನ್ ಬಳಿ ಹೋದಾಗ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ. ಇದರಿಂದಾಗಿ ಕುಟುಂಬಸ್ಥರ ಒಪ್ಪಿಗೆ ಪಡೆದ ಈ ಜೋಡಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದೆ. ಅಲ್ಲದೇ ಇದೇ ನವೆಂಬರ್ 15ರಂದು ಚೆನ್ನೈನಲ್ಲಿ ಇವರಿಬ್ಬರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಕೆಲ ಖ್ಯಾತ ನಟ- ನಟಿಯರಿಗೆ ಆಹ್ವಾನಿಸಲಾಗಿದೆ.

ಕನ್ನಡದ ರಮ್ಯಾ ಅಲ್ಲ ತಮಿಳು ರಮ್ಯಾ

ತಮಿಳು ನಟಿ ರಮ್ಯಾ ಪಾಂಡಿಯನ್ ಮದುವೆ ಬಗ್ಗೆ ಕೂಡ ಅಗಾಗ ಸುದ್ದಿಗಳಾಗುತ್ತಿದ್ದವು. ಅವರೀಗ ಸದ್ದಿಲ್ಲದೆ ಗುಟ್ಟಾಗಿ ಮದುವೆಯಾಗಿದ್ದು ಕಾಲಿವುಟ್‌ನಲ್ಲಿ ಸಾಕಷ್ಟು ಸುದ್ದಿಯಾಗಿದೆ. ಇದನ್ನು ಕರ್ನಾಟಕದಲ್ಲಿ ಜನ ತಪ್ಪಾಗಿ ಭಾವಿಸಿದ್ದಾರೆ. ಈ ಮದುವೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರದ್ದೇ ಎಂದು ಅಂದುಕೊಂಡಿದ್ದಾರೆ.

ಅಲ್ಲದೇ ಮದುವೆ ಫೋಟೋಗಳಲ್ಲಿ ರಮ್ಯಾ ಪಾಂಡಿಯನ್ ಮುಖ ಹತ್ತಿರದಿಂದ ಕಾಣಿಸುತ್ತಿಲ್ಲ. ಹೀಗಾಗಿ ಹಲವಾರು ಜನ ಈ ಫೋಟೋಗಳನ್ನು ನೋಡಿ ಕನ್ಫ್ಯೂಸ್ ಮಾಡಿಕೊಂಡಿದ್ದಾರೆ. ಹಲವಾರು ಜನ ಈ ಮದುವೆ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅವರದ್ದೇ ಎಂದು ತಪ್ಪಾಗಿ ಭಾವಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋಗಳು ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅವರ ಮದುವೆಯದ್ದಲ್ಲ ಬದಲಿಗೆ ತಮಿಳು ಖ್ಯಾತ ನಟಿ ರಮ್ಯಾ ಪಾಂಡಿಯನ್ ಅವರ ಮದುವೆ ಫೋಟೋಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+