Bigg Boss Kannada: ಬಿಗ್‌ಬಾಸ್‌ಗೂ ಮುನ್ನ ಮೂರು ಜನಪ್ರಿಯ ಧಾರಾವಾಹಿಗಳು ಅಂತ್ಯ? ಯಾವುವು

Bigg Boss Kannada season 12: ಬಹುನಿರೀಕ್ಷಿತ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್‌-2 ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಕಲರ್ಸ್‌ ವಾಹಿನಿ ಹಾಗೂ ಬಿಗ್‌ಬಾಸ್‌ ಆಯೋಜಕರು ಅಪ್ಡೇಟ್‌ ನೀಡಿದ್ದರು. ಮೂಲಗಳ ಪ್ರಕಾರ ಈ ಸೆಪ್ಟೆಂಬರ್‌ನಲ್ಲಿ ಬಿಗ್‌ಬಾಸ್‌ ಕಾರ್ಯಕ್ರಮ ಆರಂಭವಾಗಲಿದೆ. ಇನ್ನು ಈ ರಿಯಾಲಿಟಿ ಶೋಗೆ ಭಾರೀ ಪ್ರೇಕ್ಷಕರು ಸಂಖ್ಯೆ ಇರುವುದರಿಂದ ಟಿಆರ್‌ಪಿ ವಿಚಾರದಲ್ಲೂ ಬಾಸ್‌ ಎನಿಸಿಕೊಂಡಿದೆ. ಪ್ರತಿ ಸೀಸನ್‌ನಲ್ಲೂ ಬಿಗ್‌ಬಾಸ್‌ ಟಿಆರ್‌ಪಿಯಲ್ಲಿ ಮುಂಚೂಣಿಯಲ್ಲಿರುತ್ತೆ. ಹೀಗಾಗಿ ಬಿಗ್‌ಬಾಸ್‌ ಶುರುವಾಗುವುದಕ್ಕೂ ಮುನ್ನವೇ ಮೂರು ಜನಪ್ರಿಯ ಧಾರಾವಾಹಿಗಳು ಕೂಡ ಅಂತ್ಯ ಕಾಣಲಿವೆ ಎಂದು ಹೇಳಲಾಗುತ್ತಿದೆ.

ಹೌದು, ಬಿಗ್‌ಬಾಸ್‌ ಸುಮಾರು ಮೂರು ತಿಂಗಳವರೆಗೆ ನಡೆಯುವುದರಿಂದ ಪ್ರತಿದಿನವೂ ಬಿಗ್‌ಬಾಸ್‌ ವೀಕ್ಷಿಸುವ ಅಭಿಮಾನಿಗಳಿದ್ದಾರೆ. ಈ ಕಾರಣದಿಂದಲೇ ಬಿಗ್‌ಬಾಸ್‌ ಟಿಆರ್‌ಪಿ ಟಾಪ್‌ನಲ್ಲಿರುತ್ತೆ. ಇದರಿಂದಾಗಿ ಧಾರಾವಾಹಿಗಳು ಪ್ರಸಾರ ಸಮಯದಲ್ಲಿ ಕೂಡ ಬದಲಾವಣೆಗಳಾಗುವ ಸಾಧ್ಯತೆ ಇದ್ದು, ಬಿಗ್‌ಬಾಸ್‌ ಆರಂಭಕ್ಕೆ ದಿನಗಣನೆ ಶುರುವಾಗಿರುವ ಕಾರಣ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಮೂರು ಜನಪ್ರಿಯ ಧಾರಾವಾಹಿಗಳು ಅಂತ್ಯವಾಗಲಿವೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

Popular Serials Ramachari Karimani Drishtibottu To End Before Bigg Boss Kannada Season 12

ಕಲರ್ಸ್‌ ವಾಹಿನಿಯಲ್ಲಿ ಸದ್ಯ ಪ್ರಸಾರವಾಗುತ್ತಿರುವ, ಹೆಚ್ಚು ಜನಪ್ರಿಯತೆ ಪಡೆದಿರುವ ಮೂರು ಧಾರಾವಾಹಿಗಳು ಬಿಗ್‌ಬಾಸ್‌ ವೇಳೆಗೆ ಅಂತ್ಯವಾಗಲಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಬಿಗ್‌ಬಾಸ್‌ ಶುರುವಾಗುವ ಮುನ್ನ ಈ ಮೂರು ಧಾರಾವಾಹಿಗಳು ಮುಗಿಯುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಈ ಧಾರಾವಾಹಿಗಳ ಅಂತಿಮ ಸಂಚಿಕೆಗಳ ಚಿತ್ರೀಕರಣ ಕೂಡ ನಡೆಯುತ್ತಿದ್ದು, ಬಿಗ್‌ಬಾಸ್ ಕನ್ನಡ ಸೀಸನ್‌-2 ಆರಂಭವಾಗುವ ಕಾರಣಕ್ಕೆ ಪ್ರೈಮ್ ಟೈಮ್‌ನಲ್ಲಿ ಅವಕಾಶ ನೀಡುವ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ. ಈ ಮೂರು ಧಾರಾವಾಹಿಗಳ ಅಂತ್ಯದಿಂದ ಬಿಗ್‌ಬಾಸ್‌ಗೆ ಒಳ್ಳೆಯ ಪ್ರೈಮ್ ಟೈಮ್‌ನಲ್ಲಿ ಹೆಚ್ಚಿನ ಸ್ಪೇಸ್‌ ಸಿಗಲಿದೆ. ಆದರೆ ಸದ್ಯಕ್ಕೆ ಈ ಕುರಿತು ಚಾನೆಲ್‌ನಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

Popular Serials Ramachari Karimani Drishtibottu To End Before Bigg Boss Kannada Season 12

ಯಾವುದು ಆ ಧಾರಾವಾಹಿಗಳು?

ಪ್ರೇಕ್ಷಕರ ಮನಗೆದ್ದಿರುವ "ರಾಮಾಚಾರಿ", "ಕರಿಮಣಿ" ಮತ್ತು "ದೃಷ್ಟಿಬೊಟ್ಟು" ಧಾರಾವಾಹಿಗಳು ಶೀಘ್ರದಲ್ಲೇ ವೀಕ್ಷಕರಿಗೆ ಟಾಟಾ ಹೇಳಲಿವೆ ಎಂಬ ಸುದ್ದಿ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಮೂರೂ ಧಾರಾವಾಹಿಗಳು ಸದ್ಯ ಪ್ರೈಮ್‌ ಟೈಮ್‌ನಲ್ಲೇ ಪ್ರಸಾರ ಕಾಣುತ್ತಿವೆ. ಹೀಗಾಗಿ ಬಿಗ್‌ಬಾಸ್‌ ಶುರುವಾದರೆ ಈ ಧಾರಾವಾಹಿಗಳಿಗೆ ಜಾಗ ಸಿಗುವುದು ಅನುಮಾನ, ಅಥವಾ ಇವುಗಳ ಪ್ರಸಾರ ಸಮಯದಲ್ಲೂ ಬದಲಾವಣೆಗಳಾಗಬಹುದು ಎನ್ನಲಾಗಿದೆ.

ರಾಮಾಚಾರಿ ಧಾರಾವಾಹಿಯಲ್ಲಿ ರಿತ್ವಿಕ್, ಮೌನ ಗುಡ್ಡೇಮನೆ ವೀಕ್ಷಕರ ಗಮನ ಸೆಳೆದಿದ್ದಾರೆ. ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಮತ್ತು ಅರ್ಪಿತಾ ಪಾತ್ರಗಳನ್ನು ಕೂಡ ಜನ ಮೆಚ್ಚಿದ್ದಾರೆ. ಕರಿಮಣಿ ಸೀರಿಯಲ್ಲಿ ಅಶ್ವಿನಿ, ಸ್ಪಂದನಾ ಸೋಮಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇತ್ತೀಚಿನ ಬೆಳವಣಿಗೆ ನೋಡಿದರೆ ಈ ಮೂರು ಸೀರಿಯಲ್‌ಗಳು ಕೂಡ ಅಂತಿಮ ಹಂತಕ್ಕೆ ಸಾಗುತ್ತಿವೆ ಎಂದು ಹೇಳಲಾಗುತ್ತಿವೆ. ಒಂದು ವೇಳೆ ಇದೇ ನಿಜವಾದರೆ ಒಂದೆಡೆ ಬಿಗ್‌ಬಾಸ್‌ ಶುರುವಾಗುವ ಖುಷಿಯ ಜೊತೆಗೆ, ಮೂರು ಸೀರಿಯಲ್‌ಗಳ ಪ್ರಸಾರ ಇರೋಲ್ಲ ಅನ್ನೋ ಬೇಸರವೂ ಪ್ರೇಕ್ಷಕರಲ್ಲಿ ಮೂಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+