Rashmika mandanna & Ramya: ರಶ್ಮಿಕಾ ಮಂದಣ್ಣ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ರಮ್ಯಾ!

Rashmika mandanna & Ramya: ನಟಿ ರಶ್ಮಿಕಾ ಮಂದಣ್ಣ ಅವರ ಪರವಾಗಿ ಕನ್ನಡದ ಮೋಹಕ ತಾರೆ ನಟಿ ರಮ್ಯಾ ಅವರು ಬ್ಯಾಟ್‌ ಬೀಸಿದ್ದಾರೆ. ನಟಿ ರಶ್ಮಿಕಾ ಅವರ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗುತ್ತಿದೆ. ಅಲ್ಲದೆ ನಾನು ಹೈದರಾಬಾದ್‌ನವಳು ಎಂದಿರುವ ರಶ್ಮಿಕಾ ಅವರ ಮಾತಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ರೀತಿ ಇರುವಾಗಲೇ ನಟಿ ರಮ್ಯಾ ಅವರು ರಶ್ಮಿಕಾ ಅವರ ಬಗ್ಗೆ ಶಾಂಕಿಗ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಇದೀಗ ರಮ್ಯಾ ಅವರು ರಶ್ಮಿಕಾ ಅವರ ಬಗ್ಗೆ ಮಾತನಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಟಿಯರನ್ನು ಹೆಚ್ಚು ಟಾರ್ಗೆಟ್‌ ಮಾಡಲಾಗುತ್ತಿದೆ. ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರು ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಬೇರೆ.. ಬೇರೆ ಕಾರಣಗಳಿಗೆ ಟ್ರೋಲ್ ಆಗುತ್ತಿದ್ದಾರೆ. ಇದೀಗ ಅವರು ಕರ್ನಾಟಕಕ್ಕೆ ಸೇರಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈಚೆಗೆ ರಶ್ಮಿಕಾ ಸಮಾರಂಭವೊಂದರಲ್ಲಿ ನಾನು ಹೈದರಾಬಾದ್‌ನವಳು ಎಂದಿದ್ದರು. ಅಲ್ಲದೆ ಕನ್ನಡಪರ ಸಂಘಟನೆಗಳ ನಾಯಕರು ಹಾಗೂ ಕೆಲವು ರಾಜಕಾರಣಿಗಳು ಸಹ ರಶ್ಮಿಕಾ ಅವರ ಮೇಲೆ ಗರಂ ಆಗಿದ್ದರು.

Please don t Troll Rashmika Mandanna Badly Says Actress Ramya

ಈ ರೀತಿ ನೋಡಿದರೆ ರಶ್ಮಿಕಾ ಅವರು ಟ್ರೋಲ್ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ಅವರು ಹಲವು ಕಾರಣಗಳಿಗೆ ಟ್ರೋಲ್‌ ಆಗುತ್ತಲ್ಲೇ ಇದ್ದಾರೆ. ಕನ್ನಡ ಮಾತನಾಡುವುದು ಕಷ್ಟ, ನನ್ನನ್ನು ಒಬ್ಬರು ನಿರ್ದೇಶಕರು (ರಿಷಬ್‌ಶೆಟ್ಟಿ ಅವರ ಹೆಸರು ಹೇಳದೆ) ಹಾಗೂ ಈಚೆಗೆ ಬಾಲಿವುಡ್‌ ಸಿನಿಮಾದ ಸಂಭಾಷಣೆ ಹಾಗೂ ಕೆಟ್ಟ ಅಭಿರುಚಿಯ ಸಿನಿಮಾ ಎನ್ನುವುದು ಸೇರಿದಂತೆ ಹಲವು ಕಾರಣಗಳಿಗೆ ರಶ್ಮಿಕಾ ಅವರು ಟ್ರೋಲ್‌ ಆಗಿರುವುದು ಇದೆ. ಇದೀಗ ಹೈದರಾಬಾದ್‌ನವಳು ಎಂದ ಮೇಲಂತೂ ಕನ್ನಡಿಗರ ಕೋಪ ಇನ್ನಷ್ಟು ಹೆಚ್ಚಾಗಿದೆ.

ಈಚೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಸಹ ಕನ್ನಡ ಚಿತ್ರರಂಗವನ್ನು ಉದ್ದೇಶಿಸಿ ನೆಟ್ಟು ಬೋಲ್ಟ್‌ ಟೈಟ್‌ ಮಾಡುವುದಾಗಿ ಹೇಳಿದ್ದರು. ಸಾಹೇಬ್ರು ಹೇಳಿದ್ದು ಸರಿಯಾಗಿ ಇದೆ ಎಂದಿದ್ದ ರಮ್ಯಾ ಅವರು, ಆ ಹೇಳಿಕೆಯಿಂದ ಯೂಟರ್ನ್‌ ತೆಗೆದುಕೊಂಡಿದ್ದರು. ಕೆಲವು ರಾಜಕಾರಣಿಗಳು ಸಿನಿಮಾ ನಟಿಯರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಪೋಸ್ಟ್‌ ಮಾಡಿದ್ದರು. ಇದೀಗ ಈ ವಿಚಾರವಾಗಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ರಶ್ಮಿಕಾ ಬಗ್ಗೆ ರಮ್ಯಾ ಹೇಳಿದ್ದೇನು ?

ಸಿನಿಮಾ ನಟಿಯರನ್ನು ಸಿಕ್ಕಾಪಟ್ಟೆ ಟಾರ್ಗೆಟ್‌ ಮಾಡಲಾಗುತ್ತಿದೆ. ಅಲ್ಲದೆ ನಟಿಯರನ್ನು ಟ್ರೋಲ್‌ ಮಾಡಲಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ. ತುಂಬಾ ಕೆಟ್ಟದಾಗಿ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ. ಒಬ್ಬರಿಗೆ ಕನ್ನಡ ಬರಲ್ಲ, ಹೊ ಅವರು ಫಿಲ್ಮ್‌ ಫೆಸ್ಟಿವಲ್‌ಗೆ ಬರೋದಿಲ್ಲ. ಈ ಬೆಳವಣಿಗೆಗಳು ನಿಲ್ಲಬೇಕು. ಮೊದಲನೆಯದಾಗಿ ಈ ಟ್ರೋಲಿಂಗ್‌ ಬ್ಯೂಸಿನೆಸ್‌ ನಿಲ್ಲಬೇಕು. ಎಲ್ಲಾ ಟ್ರೋಲ್‌ ನಿಲ್ಲಬೇಕು. ಯಾಕೆಂದರೆ ಟ್ರೋಲ್‌ನಿಂದ ಎಲ್ಲರ ಮನಸ್ಸಿಗೂ ನೋವಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದಾರೆ.

Please don t Troll Rashmika Mandanna Badly Says Actress Ramya

ರಶ್ಮಿಕಾ ಅವರನ್ನು ಟ್ರೋಲ್‌ ಮಾಡುವುದನ್ನು ನಿಲ್ಲಿಸಬೇಕು. ಸಿನಿಮಾ ನಟಿಯರನ್ನೇ ನೀವು ವಿವಾದ ಹಾಗೂ ಟಾರ್ಗೆಟ್‌ ಮಾಡುತ್ತೀರಿ.ಎಲ್ಲರಿಗೂ ಇದನ್ನು ತಡೆದುಕೊಳ್ಳುವ ಸಾಮರ್ಥ್ಯ ಇರಬೇಕಲ್ಲವೇ ಎಂದು ಅವರು ಕೇಳಿದ್ದಾರೆ. ನಟಿಯರ ಮೆಂಟಲ್‌ ಹೆಲ್ತ್‌ ಹೇಗೆ ಇರಬಹುದು ಎಂದು ನೋಡಿ. ಅವರ ಮನೆ ಹೈದರಬಾದ್‌ನಲ್ಲಿ ಇರಬಹುದೇನೋ ಅಂತ ಹೇಳಿದ್ದಾರೆ.

ರಶ್ಮಿಕಾ ಅವರು ನಾನು ಇಲ್ಲಿನವಳಲ್ಲ ಅಂತ ಹೇಳಿದ್ದಾರೆ ಎನ್ನುವುದಕ್ಕೆ ರಿಯಾಕ್ಟ್‌ ಮಾಡಿರುವ ರಮ್ಯಾ ಅವರು, ತೆಲಂಗಾಣದ ಹೈದರಬಾದ್‌ನಲ್ಲೂ ರಶ್ಮಿಕಾ ಮಂದಣ್ಣ ಅವರ ಮನೆ ಇದ್ದಿರಬಹುದು ಅದಕ್ಕೆ ಆ ರೀತಿ ಹೇಳಿರಬೇಕು ಎಂದಿದ್ದಾರೆ. ಸೋ ವಾಟ್‌ ಅಂತ ಅವರು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+