Darshan Thoogudeepa: ಹೆಂಡತಿ ಜೊತೆಗೆ ಊಟ ಮಾಡಬೇಕು ಅಂತಾ ಹಠ ಹಿಡಿದ ಪವಿತ್ರಾ ಗೌಡ ಮಾಜಿ ಗಂಡ!
ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್ ಅಂದ್ರೆ ಮದುವೆ ಆಗದೆ ಒಟ್ಟಿಗೆ ವಾಸ ಮಾಡುತ್ತಿದ್ದರು ಎಂಬ ಸುದ್ದಿ ಹಬ್ಬಿತ್ತು. ಅದರಲ್ಲೂ ಇದು ರೇಣುಕಾಸ್ವಾಮಿ ಕೊಲೆ ಕೇಸ್ ಸಮಯದಲ್ಲಿ ಪೊಲೀಸರ ತನಿಖೆಯಲ್ಲಿ ಕೂಡ ಬಯಲಾಗಿತ್ತು. ಆದರೆ ಇದೇ ಪವಿತ್ರಾ ಗೌಡ ಅವರು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪ್ರೀತಿಯ ಬಲೆಗೆ ಬೀಳುವ ಮೊದಲು ಮತ್ತೊಬ್ಬರನ್ನ ಮದುವೆ ಆಗಿದ್ದರು. ಇದೀಗ ಪವಿತ್ರಾ ಗೌಡ ಮಾಜಿ ಪತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ!
ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿ ಪವಿತ್ರಾ ಗೌಡಗೆ ಕೆಟ್ಟ ಕೆಟ್ಟ ಮೆಸೇಜ್ ಮತ್ತು ಅಶ್ಲೀಲ ಫೋಟೋಗಳನ್ನ ಕಳುಹಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ರೇಣುಕಾಸ್ವಾಮಿಗೆ ಬಲೆ ಬೀಸಿ, ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದು, ಎದೆಗೆ ಬರೆ ಹಾಕಿ & ತಲೆಗೆ ತೂತು ಮಾಡಿ ಬರ್ಬರವಾಗಿ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು.

ಪವಿತ್ರಾ ಗೌಡ ಮಾಜಿ ಗಂಡ....
ಇಷ್ಟೆಲ್ಲದರ ನಡುವೆ ಈಗ, ಕೊಲೆ ಆರೋಪದ ನಂಬರ್ 1 ಆರೋಪಿ ಪವಿತ್ರಾ ಗೌಡ & ಕೊಲೆ ಆರೋಪದ ನಂಬರ್ 2 ಆರೋಪಿ ದರ್ಶನ್ ತೂಗುದೀಪ್ ಅವರಿಗೂ ಜಾಮೀನು ಸಿಕ್ಕಿದೆ. ಈ ಸಮಯದಲ್ಲೇ ಸಂಚಲನ ಸೃಷ್ಟಿ ಮಾಡುವ ಮಾತನ್ನು ಪವಿತ್ರಾ ಗೌಡ ಮಾಜಿ ಗಂಡ ಹೇಳಿದ್ದು, ಈ ವಿಚಾರ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಹಾಗಿದ್ರೆ ಪವಿತ್ರಾ ಗೌಡ ಮಾಜಿ ಗಂಡ ಹೇಳಿದ್ದು ಏನು? ಬನ್ನಿ ತಿಳಿಯೋಣ.
ಅಂದಹಾಗೆ, ಹೆಂಡತಿ ಜೊತೆ ಊಟ ಮಾಡಬೇಕು ಅಂತಾ ಹಠ ಹಿಡಿದ ಪವಿತ್ರಾ ಗೌಡ ಮಾಜಿ ಗಂಡ ಸಖತ್ ಡಿಮ್ಯಾಂಡ್ ಒಂದನ್ನ ಇಟ್ಟಿದ್ದಾರೆ. ಈ ಬಗ್ಗೆ ಪವಿತ್ರಾ ಗೌಡಗೆ ಬೇಲ್ ಸಿಕ್ಕಿರುವ ಖುಷಿಯಲ್ಲಿ ಮಾತನಾಡಿರುವ ಪವಿತ್ರಾ ಗೌಡ ಮಾಜಿ ಗಂಡ, ವಾಪಸ್ ಅವಳು ನನ್ನ ಜೀವನಕ್ಕೆ ಬಂದ್ರೆ ಪವಿತ್ರಾ ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೆ ನನಗೆ ಈ ಸಮಯದಲ್ಲೇ ಹೆಂಡತಿ ಜೊತೆ ಹಾಗೂ ಮಗಳ ಜೊತೆ ಕೂತು ಡಿನ್ನರ್ ಅಂದ್ರೆ ಊಟ ಮಾಡಬೇಕು ಅಂತಾ ಅನಿಸುತ್ತಿದೆ ಅಂತಾ ಹೇಳಿದ್ದಾರೆ.
ಮಾಜಿ ಗಂಡನ ಬಾಳಿಗೆ ಮತ್ತೆ ಪವಿತ್ರಾ ಎಂಟ್ರಿ?
ಹೀಗೆ ಪವಿತ್ರಾ ಗೌಡ ಮಾಜಿ ಗಂಡ ಮಾಡಿರುವ ಡಿಮ್ಯಾಂಡ್ ಬಗ್ಗೆ ಚರ್ಚೆ ಶುರುವಾಗಿದ್ದು, ಈಗ ತಾನೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಅಂದ್ರೆ ಬೇಲ್ ಪಡೆದಿರುವ ನಟಿ ಕಂ ಕೊಲೆ ಆರೋಪಿ ಪವಿತ್ರಾ ಗೌಡ ಅವರು ಮಾಜಿ ಗಂಡನ ಜೊತೆಗೆ ಊಟಕ್ಕೆ ಹೋಗ್ತಾರಾ? ಮತ್ತೆ ಹೊಸ ಜೀವನ ಶುರು ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ.
ಪವಿತ್ರಾ ಗೌಡ ಮಾಜಿ ಗಂಡನ ಹೇಳಿಕೆ....
ಅಂದಹಾಗೆ, ಪವಿತ್ರಾ ಗೌಡ ಅವರ ಮಾಜಿ ಗಂಡ ತಮ್ಮ ಮಾಜಿ ಹೆಂಡತಿಗೆ ಯಾವುದೇ ರೀತಿ ಸಮಸ್ಯೆಗಳು ಜೀವನದಲ್ಲಿ ಎದುರಾಗಬಾರದು ಅಂತಾ ಹೇಳಿದ್ದಾರೆ. ಅಲ್ಲದೆ, ಪವಿತ್ರಾ ಗೌಡ ಕಾಲಿನ ಚಪ್ಪಲಿ ಆಗ್ತೀನಿ, ಅದರೆ ಪವಿತ್ರಾ ಗೌಡ ಮುಳ್ಳು ತುಳಿಯಲು ಬಿಡಲ್ಲ. ಹಾಗೇ ನಾನು ಅವರ ಬದುಕಿನಲ್ಲಿ ಎಂದಿಗೂ ಮುಳ್ಳು ಆಗುವುದಿಲ್ಲ ಅಂತಾ ಕೂಡ ಪವಿತ್ರಾ ಗೌಡ ಮಾಜಿ ಗಂಡ ಹೇಳಿದ್ದಾರೆ. ಈ ಮೂಲಕ ಇಂದಿಗೂ ತಾವು ಪವಿತ್ರಾ ಗೌಡ ಪ್ರೀತಿಯಲ್ಲಿ ಸಿಲುಕಿರುವ ಮುನ್ಸೂಚನೆ ನೀಡಿದ್ದಾರೆ.












Click it and Unblock the Notifications