Get Updates
Get notified of breaking news, exclusive insights, and must-see stories!

Salman Khan: ನಟ ಸಲ್ಮಾನ್ ಖಾನ್‌ರನ್ನ ಭಯೋತ್ಪಾದಕರ ಪಟ್ಟಿಗೆ ಸೇರಿಸಿತೇ ಪಾಕಿಸ್ತಾನ?

ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ ಅವರನ್ನು ಪಾಕಿಸ್ತಾನವು ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರಿಯಾದ್ ವೇದಿಕೆಯಲ್ಲಿ ಭಾಷಣ ಮಾಡುವಾಗ ಬಲೂಚಿಸ್ತಾನದ ಬಗ್ಗೆ ಹೇಳಿಕೆ ನೀಡಿದ ನಂತರ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ. ಸದ್ಯ ಇದು ದೊಡ್ಡ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಆದರೆ ಇದು ನಿಜಾನಾ? ಎನ್ನುವ ಗೊಂದಲ ಎಲ್ಲರಲ್ಲಿದೆ.

ಹಲವಾರು ಸೋಷಿಯಲ್‌ ಮೀಡಿಯಾದ ಪೋಸ್ಟ್‌ಗಳಲ್ಲಿ ಬಲೂಚಿಸ್ತಾನ್ ಸರ್ಕಾರವು ಸಲ್ಮಾನ್ ಖಾನ್ ಅವರ ಹೆಸರನ್ನು ಪಾಕಿಸ್ತಾನದ ನಾಲ್ಕನೇ ವೇಳಾಪಟ್ಟಿಯಾದ ಭಯೋತ್ಪಾದನಾ ವಿರೋಧಿ ಕಾಯ್ದೆ (1997) ಅಡಿಯಲ್ಲಿ ಸೇರಿಸಿದೆ ಎಂದು ಹಂಚಿಕೊಂಡಿದೆ. ಇದು ಉಗ್ರಗಾಮಿ ಅಥವಾ ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸಲಾಗುವ ಪಟ್ಟಿಯಾಗಿದೆ. ಈ ಪಟ್ಟಿಯಲ್ಲಿರುವವರನ್ನು ಕಟ್ಟುನಿಟ್ಟಾದ ಕಣ್ಗಾವಲು, ಪ್ರಯಾಣ ನಿರ್ಬಂಧಗಳು ಮತ್ತು ಸಂಭಾವ್ಯ ಕಾನೂನು ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂಬ ನಿಯಮವಿದೆ.

Pakistan Adds Salman Khan To Terror List Truth Behind Viral Balochistan Claim

ಈ ಹೇಳಿಕೆಗೆ ಪೂರಕ ಎನ್ನುವಂತೆ ನಾಸಿರ್ ಅಜೀಮ್ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ಅಧಿಸೂಚನೆಯ ಫೋಟೋ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. "ಆಜಾದ್ ಬಲೂಚಿಸ್ತಾನ್ ಫೆಸಿಲಿಟೇಟರ್" ಎಂಬ ಕಾರಣಕ್ಕಾಗಿ ಸಲ್ಮಾನ್ ಖಾನ್ ಅವರನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಆ ದಾಖಲೆಯಲ್ಲಿ ಹೇಳಲಾಗಿದೆ. ಆದರೆ ಇದರ ಸತ್ಯಾಸತ್ಯತೆಯನ್ನು ಇನ್ನೂ ಪರಿಶೀಲಿಸಲಾಗಿಲ್ಲ. ಯಾವುದೇ ಪಾಕಿಸ್ತಾನಿ ಮಾಧ್ಯಮ ಅಥವಾ ಸರ್ಕಾರಿ ಮೂಲಗಳು ಕೂಡ ಇಂತಹ ಕ್ರಮವನ್ನು ದೃಢಪಡಿಸಿಲ್ಲ ಎನ್ನಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ದಾಖಲೆಯನ್ನ ಗಮನಿಸಿದರೆ, ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನದ ಭಯೋತ್ಪಾದಕ ವೀಕ್ಷಣಾ ಪಟ್ಟಿಯಲ್ಲಿ ಇರಿಸಲಾಗಿದೆ ಎಂಬ ವರದಿಗಳು ಸುಳ್ಳು ಅಥವಾ ದಾಖಲೆಯನ್ನು ತಿರುಚಲಾಗಿದೆ ಎಂದು ಹೇಳಲಾಗುತ್ತಿದೆ. ಸಲ್ಮಾನ್‌ ಖಾನ್ ಅವರು ರಿಯಾದ್‌ನಲ್ಲಿ ಮಾಡಿದ ಭಾಷಣದ ಕ್ಲಿಪ್‌ನಲ್ಲಿ ಮಾನವೀಯ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಚರ್ಚಿಸುವಾಗ ಬಲೂಚಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಇದೇ ವಿವಾದಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಪೋಸ್ಟ್‌ ವೈರಲ್‌ ಆಗಿದೆ.

ಸಲ್ಮಾನ್‌ ಹೇಳಿದ್ದೇನು?

ರಿಯಾದ್ ವೇದಿಕೆಯಲ್ಲಿ ಮಾತನಾಡಿದ್ದ ಸಲ್ಮಾನ್‌ ಖಾನ್‌, ಇದೀಗ ನೀವು ಹಿಂದಿ ಸಿನಿಮಾ ಮಾಡಿ ಸೌದಿ ಅರೇಬಿಯಾದಲ್ಲಿ ಬಿಡುಗಡೆ ಮಾಡಿದರೆ ಅದು ಸೂಪರ್ ಹಿಟ್ ಆಗುತ್ತೆ. ನೀವು ತಮಿಳು, ತೆಲುಗು ಅಥವಾ ಮಲಯಾಳಂ ಸಿನಿಮಾ ಮಾಡಿದರೆ, ನೂರಾರು ಕೋಟಿ ವ್ಯವಹಾರ ನಡೆಯುತ್ತದೆ. ಏಕೆಂದರೆ ಇತರ ದೇಶಗಳಿಂದ ಇಲ್ಲಿಗೆ ಅನೇಕ ಜನ ಬಂದಿದ್ದಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ, ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು. ಆದರೆ ಪಾಕಿಸ್ತಾನವು ಸಲ್ಮಾನ್‌ ವಿರುದ್ಧ ಯಾವುದೇ ಕಾನೂನು ಅಥವಾ ಆಡಳಿತಾತ್ಮಕ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+