Oviya: ಕಿರಾತಕ ನಟಿಯ ಖಾಸಗಿ ವಿಡಿಯೋ ಲೀಕ್! ಪೂರ್ತಿ ವಿಡಿಯೋ ಇಲ್ವಾ ಎಂದವನಿಗೆ ಒವಿಯಾ ಹೇಳಿದ್ದೇನು?

ಯಶ್ ಜೊತೆ ಕಿರಾತಕ ಸಿನಿಮಾದಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದ ಚೆಲುವೆ ಒವಿಯಾ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಒವಿಯಾ ಅವರ ಖಾಸಗಿ ವಿಡಿಯೋ ಎನ್ನಲಾದ ವಿಡಿಯೋ ತುಣುಕೊಂದು ಸದ್ಯ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಖಾಸಗಿ ವಿಡಿಯೋ ಲೀಕ್ ಆದ ಬಗ್ಗೆ ನಟಿ ಈವರೆಗೂ ಸ್ಪಷ್ಟನೆ ನೀಡದೇ ಇದ್ದರೂ, ಇನ್‌ಸ್ಟಾಗ್ರಾಂನಲ್ಲಿ ಕೆಲವು ಕಾಮೆಂಟ್‌ಗಳಿಗೆ ಅವರು ಕೊಟ್ಟಿರುವ ಪ್ರತಿಕ್ರಿಯೆ ಅಚ್ಚರಿಗೆ ಕಾರಣವಾಗಿದೆ.

ಒವಿಯಾ ತಮಿಳು, ಮಲಯಾಳಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದವರು. ಕನ್ನಡದಲ್ಲಿ ಯಶ್ ಜೊತೆ ಕಿರಾತಕ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಅಭಿನಯಿಸಿದ್ದರು. ಕಿರಾತಕ ಯಶ್‌ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು, ಒವಿಯಾ ಅದಾದ ಬಳಿಕ ತಮಿಳು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು.

Oviya responds to private video leak

ಕಲಾವಾಣಿ, ಮರೀನಾ, ಕಲಕಲಪ್ಪು, ಮುದರ್ ಕೂಡಂ, ಯಾಮಿರುಕ್ಕ ಪಾಯಮೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ಅವರು, ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ನೇರವಾದ ಮಾತು, ಅವರ ವರ್ತನೆಯನ್ನು ಜನ ಇಷ್ಟಪಟ್ಟಿದ್ದರು. ಬಳಿಕ ಅನಾರೋಗ್ಯದ ಕಾರಣ ನೀಡಿ ಬಿಗ್‌ಬಾಸ್‌ನಿಂದ ನಿರ್ಗಮಿಸಿದ್ದರು. ಸಿನಿಮಾಗಳಲ್ಲಿ ಸದ್ಯ ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದರೂ, ತಮ್ಮ ವರ್ತನೆಯಿಂದ ಅವಕಾಶ ಕಳೆದುಕೊಂಡರು. ಹಣ ಮತ್ತು ಪ್ರೀತಿ ವಿಚಾರದಲ್ಲಿ ನನಗೆ ಹಲವರು ಮೋಸ ಮಾಡಿದ್ದಾರೆ ಎಂದು ಹೇಳಿ ಸುದ್ದಿಯಾಗಿದ್ದರು.

ಮದುವೆ, ಲಿವಿಂಗ್ ಟುಗೆದರ್ ಮೇಲೆ ನನಗೆ ನಂಬಿಕೆಯಿಲ್ಲ ಎಂದಿದ್ದರು. ಸಿನಿಮಾ ರಂಗದಲ್ಲಿ ಕ್ಯಾಸ್ಟಿಂಗ್ ಕೌಚ್‌ನಂತಹ ವಿಚಾರಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಹಲವು ವಿವಾದಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಂಡು ಸುದ್ದಿ ಮಾಡುತ್ತಿರುತ್ತಾರೆ.

ಖಾಸಗಿ ವಿಡಿಯೊ ಲೀಕ್?

ಇದೆಲ್ಲದರ ನಡುವೆ ಒವಿಯಾ ಅವರು ಗೆಳೆಯನ ಜೊತೆ ಇದ್ದಾರೆ ಎನ್ನಲಾದ ಖಾಸಗಿ ವಿಡಿಯೋವೊಂದು ವೈರಲ್ ಆಗಿ ಸಂಚಲನ ಸೃಷ್ಟಿಸಿದೆ. ಇದು ತಿರುಚಿದ ವಿಡಿಯೋ ಎನ್ನುವ ಅನುಮಾನವಿದೆ. ಇನ್‌ಸ್ಟಾಗ್ರಾಂನಲ್ಲಿ ಒವಿಯಾ ತಮ್ಮ ಫೋಟೊ ಹಂಚಿಕೊಂಡಿದ್ದು, ಹಲವರು ಬಗೆ ಬಗೆಯಾಗಿ ಕಮೆಂಟ್ ಮಾಡಿದ್ದಾರೆ.

Oviya responds to private video leak

ನೆಟ್ಟಿಗನೊಬ್ಬ 17 ಸೆಕೆಂಡ್ ಮಾತ್ರ ವಿಡಿಯೊ ಇದೆ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ದೀರ್ಘಾವಧಿ ವಿಡಿಯೋ ಸಿಗಬಹುದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಒವಿಯಾ ಮುಂದಿನ ಬಾರಿ ಸಹೋದರ (next time bro) ಎಂದು ಪ್ರತಿಕ್ರಿಯೆ ನೀಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇನ್ನೊಬ್ಬರ ಬಳಿ ಒವಿಯಾ ಅವರೇ ವಿಡಿಯೋ ಲಿಂಕ್ ಕೊಡಿ ಎಂದು ಕೇಳಿದ್ದಾರೆ. ಸದ್ಯ ಒವಿಯಾ ನೀಡಿರುವ ಪ್ರತಿಕ್ರಿಯೆ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+