ಪ್ರೇಮ್ ಅಡ್ಡೆಗೆ ಬಂದಳು ‘ನೂರಾ ಫತೇಹಿ’: ಹಿಂಗಿದೆ ನೋಡಿ ಲುಕ್!

ಕೆಣಕುವ ಮೈಮಾಟ, ನೋಡಿದರೆ ಮತ್ತಷ್ಟು ನೋಡಬೇಕು ಅಂತಾ ಕಾಯುವ ಪಡ್ಡೆ ಹೈಕ್ಳ ಫೆವರಿಟ್ ಸುಂದರಿ. ಅಷ್ಟಕ್ಕೂ ಇಷ್ಟೆಲ್ಲಾ ನಾವು ಬಿಲ್ಡಪ್ ಕೊಡುತ್ತಿರುವುದು, ನಟಿ ನೂರಾ ಫತೇಹಿ ಅವರ ಬಗ್ಗೆ. ಬಾಲಿವುಡ್ ಅಂಗಳದಲ್ಲಿ ಈಕೆ ಮೂಡಿಸಿರುವ ಸಂಚಲನ ಅಷ್ಟಿಷ್ಟಲ್ಲ. ಬಾಲಿವುಡ್ ಬ್ಯೂಟಿ ನೂರಾ ಫತೇಹಿ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಇದೇ ನಟಿ ಇದೀಗ ಕನ್ನಡಕ್ಕೂ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಹೌದು, ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳು ಅಂದ್ರೆ ಬಾಲಿವುಡ್ ಮಂದಿ ಕೇರ್ ಲೆಸ್ ಆಗಿ ವರ್ತನೆ ಮಾಡುತ್ತಿದ್ದರು. ಆದರೆ ಈಗ ಕನ್ನಡ ಸಿನಿಮಾಗಳು ಅಂದ್ರೆ ಹಿಂದೆ & ಮುಂದೆ ಯೋಚನೆ ಮಾಡುವ ಪರಿಸ್ಥಿತಿ ಇದೆ. ಯಾಕಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿ ಆ ಲೆವೆಲ್‌ಗೆ ರೀಚ್ ಆಗಿದೆ. ಹೀಗಾಗಿ ಬಾಲಿವುಡ್ ಸಿನಿಮಾ ರಂಗದ ಘಟಾನುಘಟಿ ನಟರು ಕೂಡ ನಮ್ಮ ಕನ್ನಡ ಸಿನಿಮಾದಲ್ಲಿ ನಟನೆ ಮಾಡಲು ಓಡೋಡಿ ಬರ್ತಿದ್ದಾರೆ. ಅದೇ ರೀತಿ ಈಗ ಹಾಟ್, ಹಾಟ್ ಬ್ಯೂಟಿ ನೂರಾ ಫತೇಹಿ ಕೂಡ ಜೋಗಿ ಪ್ರೇಮ್ ಅವರ ಸಿನಿಮಾದಲ್ಲಿ ನಟಿಸೋದಕ್ಕೆ ಕನ್ನಡ ನಾಡಿಗೆ ಓಡೋಡಿ ಬಂದಿದ್ದಾರೆ.

Nora Fatehi Set to Make Kannada Debut with Prems KD sharing screen with Dhruva Sarja

ಧ್ರುವ ಜೊತೆ ಫತೇಹಿ ಮಿಂಚು!

ಅಷ್ಟಕ್ಕೂ ಧ್ರುವ ಸರ್ಜಾ ಅಭಿನಯದ ನಿರ್ದೇಶಕ ಪ್ರೇಮ್ ಅವರ ಚಿತ್ರ ಕೆಡಿ-ದಿ ಡೆವಿಲ್ ಇದೀಗ, ನಿರ್ಮಾಣ ಹಂತದಲ್ಲಿದೆ. ಇತ್ತೀಚೆಗೆ ಸಿನಿಮಾ ಟೀಂ ಹೊಸ ವರ್ಷಕ್ಕೆ ಟೀಸರ್ ರಿಲೀಸ್ ಮಾಡಿತ್ತು ಹಾಗೇ ಈ ಟೀಸರ್ ಸೋಷಿಯಲ್ ಮೀಡಿಯದಲ್ಲಿ ಸೌಂಡ್ ಮಾಡಿತ್ತು. ಇದೇ ವರ್ಷವೇ ಈ ಸಿನಿಮಾ ಅದ್ಧೂರಿಯಾಗಿ ಜಗತ್ತಿನಾದ್ಯಂತ ರಿಲೀಸ್ ಆಗುತ್ತಿದೆ. ಹೀಗಿದ್ದಾಗಲೇ ಬಾಲಿವುಡ್‌ನ ಹಾಟ್ ಬ್ಯೂಟಿ ನೂರಾ ಫತೇಹಿ ಸಿನಿಮಾ ಟೀಂ ಸೇರಿದ್ದಾರೆ. ಧ್ರುವ ಸರ್ಜಾ ಸಿನಿಮಾದಲ್ಲಿ, ನೂರಾ ಫತೇಹಿ ಕೂಡ ನಟನೆ ಮಾಡುತ್ತಿದ್ದಾರೆ.

ಕುತೂಹಲ ಕೆರಳಿಸಿರುವ ಸಿನಿಮಾ

ಪ್ರೇಮ್ ಸಿನಿಮಾಗಳು ಅಂದ್ರೆ ಅಲ್ಲಿ ಏನಾದರೂ ಒಂದು ಸ್ಪೆಷಾಲಿಟಿ ಇದ್ದೇ ಇರುತ್ತೆ. ಹೀಗೆ ಪ್ರೇಮ್ ಅವರು ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಖದರ್ ತೋರಿಸಿದ್ದಾರೆ. ಈಗ ಅವರ ಬಹು ನಿರೀಕ್ಷಿತ ಕೆಡಿ-ದಿ ಡೆವಿಲ್ ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗುತ್ತಿದೆ. ಹೀಗಿದ್ದಾಗಲೆ ನೂರಾ ಎಂಟ್ರಿ ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಈ ಸಿನಿಮಾದಲ್ಲಿ ಭಾರಿ ದೊಡ್ಡ ಸ್ಟಾರ್‌ಗಳ ದಂಡೇ ನಟಿಸುತ್ತಿದೆ. ಇದರ ಜೊತೆಗೆ ಈಗ ನಟಿ ನೂರಾ ಫತೇಹಿ ಕೂಡ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಸಿನಿಮಾ ಲೆಜೆಂಡ್ಸ್ ಇದ್ದಾರೆ!

ಕೆಡಿ-ದಿ ಡೆವಿಲ್ ಸಿನಿಮಾದಲ್ಲಿ ಈಗಾಗಲೇ ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ ಮತ್ತು ಶಿಲ್ಪಾ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಕೂಡ ಅಬ್ಬರಿಸಲಿದ್ದಾರೆ. ಇದರ ಜೊತೆಗೆ ನೂರಾ ಫತೇಹಿ ಕೂಡ ರಂಗು ರಂಗಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರು ಯಾವ ಪಾತ್ರ ನಿರ್ವಹಿಸುತ್ತಾರೆ..? ಎಂಬ ವಿಚಾರ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಒಂದಷ್ಟು ದಿನ ಕಾದು ನೊಡ ಬೇಕಿದೆ.

Nora Fatehi Set to Make Kannada Debut with Prems KD sharing screen with Dhruva Sarja

ವಿಜಯ್ ಸೇತುಪತಿ ಕನ್ನಡಕ್ಕೆ ವಾಪಸ್?

ಇನ್ನು 'ಕೆಡಿ-ದಿ ಡೆವಿಲ್' ಮೂಲಕ ಹಲವು ವರ್ಷಗಳ ನಂತರ ವಿಜಯ್ ಸೇತುಪತಿ ಅವರು ಕನ್ನಡಕ್ಕೆ ವಾಪಸ್ ಬರಲಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ಕನ್ನಡದಲ್ಲಿ ಈ ನಟ ನಟಿಸಿದ್ದರಂತೆ. ಆದರೆ ಈಗ ವಿಜಯ್ ಸೇತುಪತಿ ಈಗ ವರ್ಲ್ಡ್ ಫೇಮಸ್. ಹೀಗೆ ನಟ ವಿಜಯ್ ಸೇತುಪತಿ ಕನ್ನಡಕ್ಕೂ ಬರ್ತಿದ್ದಾರಾ? ಅನ್ನೋ ಕುತೂಹಲ ಹೆಚ್ಚಾಗಿದೆ. KD ಭಾಗ 1 ಕ್ಲೈಮ್ಯಾಕ್ಸ್‌ನಲ್ಲಿ ಒಂದು ಪಾತ್ರವನ್ನ ವಿಜಯ್ ಸೇತುಪತಿ ನಿರ್ವಹಿಸುತ್ತಾರೆ ಎನ್ನಲಾಗಿದೆ. ಹಾಗೇ ಈ ಸಿನಿಮಾದ ಭಾಗ 2 ರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರಂತೆ. ಹೀಗಾಗಿಯೇ ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+