ಗುರುತೇ ಸಿಗದಷ್ಟು ಬದಲಾದ ಖ್ಯಾತ ನಟಿ, ಅನಾರೋಗ್ಯದಿಂದ ಬಳಲುತ್ತಿದ್ದಾರಾ ನಿವೇತಾ?
ಬಹುಭಾಷಾ ನಟಿ ನಿವೇತಾ ಥಾಮಸ್ (Nivetha Thomas) ಅವರು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿದ್ದಾರೆ. ನಿವೇತಾ ಅವರಿಗೆ ಅಭಿಮಾನಿಗಳ ಸಂಖ್ಯೆ ಕೂಡ ಜಾಸ್ತಿಯೇ ಇದೆ. ಆದರೆ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇದರಿಂದ ನಟಿಗೆ ಏನಾಯ್ತು ಎಂದು ಅವರ ಅಭಿಮಾನಿಗಳು ಆಗಾಗ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪ್ರತ್ಯಕ್ಷವಾಗಿದ್ದಾರೆ. ನಿವೇತಾ ಅವರ ಸ್ಟೈಲಿಶ್ ಹೊಸ ನೋಟ ಮತ್ತು ರೂಪಾಂತರವು ಎಲ್ಲರ ಗಮನ ಸೆಳೆದಿದೆ. ಗುರುತೇ ಸಿಗದಷ್ಟು ನಿವೇತಾ ಬದಲಾಗಿದ್ದು, ಮೊದಲಿಗಿಂತಲೂ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಯಾವುದೋ ಸಿನಿಮಾ ಪಾತ್ರಕ್ಕಾಗಿ ನಿವೇತಾ ಈ ರೀತಿ ಬದಲಾಗಿರಬಹುದು ಎನ್ನುತ್ತಿದ್ದರೆ, ಇನ್ನೂ ಕೆಲವರು ನಟಿಗೆ ಏನಾದ್ರೂ ಆರೋಗ್ಯ ಸಮಸ್ಯೆನಾ? ಎಂದು ಕೇಳುತ್ತಿದ್ದಾರೆ.
ಕೆಲವರು ಸೋಷಿಯಲ್ ಮೀಡಿಯಾದಲ್ಲಿ ನಿವೇತಾ ಅವರ ಹಿಂದಿನ ಹಾಗೂ ಈಗಿನ ಫೋಟೋಗಳನ್ನು ಹಂಚಿಕೊಂಡು ಯಾಕಿಷ್ಟು ಬದಲಾಗಿದ್ದಾರೆ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ. 2025ರ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ನಿವೇತಾ ಭಾಗವಹಿಸಿದ್ದರು. ಅಲ್ಲಿ ಅವರ ಕೊನೆಯ ಸಿನಿಮಾ 35-ಚಿನ್ನ ಕಥಾ ಕಾಡು ಪಾತ್ರಕ್ಕಾಗಿ ಅತ್ಯುತ್ತಮ ಪ್ರಮುಖ ನಟಿ ಪ್ರಶಸ್ತಿ ನೀಡಲಾಯಿತು. ಈ ವೇಳೆ ನಟಿ ಮೊದಲಿಗಿಂತಲೂ ವಿಭಿನ್ನವಾಗಿ ಕಾಣಿಸಿಕೊಂಡು ಪ್ರಶಸ್ತಿ ಸ್ವೀಕರಿಸಿದರು. ಇದರ ಬೆನ್ನಲ್ಲೇ ನಟಿಯ ಇತ್ತೀಚಿನ ಫೋಟೋಗಳು ವೈರಲ್ ಆಗಿವೆ.

ಇನ್ನು ದಿಢೀರ್ ತೂಕ ಹೆಚ್ಚಿಸಿಕೊಂಡ ಕಾರಣಕ್ಕೆ ನಿವೇತಾ ಥಾಮಸ್ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ವದಂತಿಯೂ ಇದೆ. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿತ್ತು. ಈ ವದಂತಿ ನಡುವೆಯೇ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ರೂಪದಲ್ಲಿ ಮೊದಲಿಗಿಂತ ಬದಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ವಿಜಯ್ ಸೇತುಪತಿ ಅವರ ಮುಂದಿನ ಚಿತ್ರ, ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾತಿದೆ.
ಬಾಲನಟಿಯಾಗಿ ಸಿನಿ ಪಯಣ ಆರಂಭಿಸಿದ ಈ ನಟಿ ತಮಿಳು, ತೆಲುಗು, ಮಲಯಾಳಂನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಜಂಟಲ್‌ಮೆನ್ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಅವರು ಟಾಲಿವುಡ್ ಇಂಡಸ್ಟ್ರಿಯಲ್ಲಿ ಹಲವು ವರ್ಷಗಳವರೆಗೆ ಮಿಂಚಿದ್ದರು. ಆದರೆ ದಿನಗಳು ಉರುಳಿದಂತೆ ನಿವೇತಾಗೆ ತೆಲುಗಿನಲ್ಲಿ ಹೆಚ್ಚಿನ ಆಫರ್‌ಗಳು ಸಿಕ್ಕಿರಲಿಲ್ಲ. ಇದರಿಂದಾಗಿ ಅವರು ಕೆಲವು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಇತ್ತೀಚೆಗೆ ಅವರು 35 ಚಿನ್ನ ಕಥಾ ಕಾಡು ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಮತ್ತೆ ಬಂದರು. ಇದರಲ್ಲಿ ತಾಯಿ ಪಾತ್ರದಲ್ಲಿ ನಟಿಸಿ ಅತ್ಯುತ್ತಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದರು.
ಗ್ಲಾಮರಸ್ ಪಾತ್ರಗಳಿಂದ ಗಮನ ಸೆಳೆದಿದ್ದ ನಿವೇತಾ ಅವರು ದಿಢೀರನೆ ಈ ರೀತಿ ತೂಕ ಹೆಚ್ಚಿಸಿಕೊಂಡು ಕಾಣಿಸಿಕೊಂಡಿರುವುದಕ್ಕೆ ಹಲವರು ನಾನಾ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಇನ್ನು ನಾವು ನೋಡಿದ ನಿವೇತಾ ಇವರೇನಾ? ಎಂದು ಹುಬ್ಬೇರಿಸುತ್ತಿದ್ದಾರೆ. ನಟಿಗೆ ಏನೋ ಆರೋಗ್ಯ ಸಮಸ್ಯೆ ಇರಬೇಕು, ಇದೇ ಕಾರಣಕ್ಕೇ ಅವರ ದೇಹದಲ್ಲಿ ಬದಲಾವಣೆಯಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ನಟಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡದೆ ನಗುತ್ತಲೇ ಎಲ್ಲರ ಗಮನ ಸೆಳೆದಿದ್ದಾರೆ.












Click it and Unblock the Notifications