Niveditha Gowda: ಹೊಸ ವರ್ಷಕ್ಕೆ ಹೊಸ ಹುಡುಗನ ಜೊತೆ ಫಾರಿನ್ನಲ್ಲಿ ನಿವೇದಿತಾ ಗೌಡ : ಏನಿದು ವಿಷ್ಯ?
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ. ಚಂದನ್ ಶೆಟ್ಟಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಕಾಲ ಕಳೆದಂತೆ ಇಬ್ಬರ ಜೀವನದಲ್ಲಿ ಬಿರುಗಾಳಿ ಎದ್ದ ಕಾರಣ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದೆ. ಸದ್ಯ ನಿವೇದಿತಾ ಗೌಡ ಅವರು ರೀಲ್ಸ್ ಮಾಡುತ್ತಾ ಬಿಂದಾಸ್ ಆಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊದ್ದರಂತೆ ವಿಡಿಯೋ ಅಪ್ಲೋಡ್ ಮಾಡುತ್ತಲೇ ಲೈಫ್ ಏಂಜಾಯ್ ಮಾಡುತ್ತಿದ್ದಾರೆ.
ಡಿವೋರ್ಸ್ ಬಳಿಕ ನಿವೇದಿತಾ ಗೌಡ ಅವರು ಇನ್ನೊಂದು ಮದುವೆಯಾಗಲಿದ್ದಾರೆ ಎನ್ನುವ ವಂದತಿಗಳು ಕೇಳಿ ಬಂದಿತ್ತು. ಈ ಎಲ್ಲಾ ಊಹಾಪೋಹಗಳ ನಡುವೆ ನಿವೇದಿತಾ ಗೌಡ ಅವರು ಹೊಸ ವರ್ಷಕ್ಕೆ ನ್ಯೂಯಾರ್ಕ್ಗೆ ಹೋಗಿದ್ದಾರೆ. ಅಲ್ಲಿ ಯುವಕನೊಬ್ಬನ ಜೊತೆ ಆಕಾಶಬುಟ್ಟಿ ಹಾರಿಸಿದ್ದಾರೆ. ಸಹಜವಾಗಿಯೇ ಆಕಾಶಬುಟ್ಟಿಯನ್ನ ಭಾರತದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಟ್ಟರೇ. ಇನ್ನೂ ಕೆಲವು ಕಡೆಗಳಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಕೆಲವೊಂದು ವಿಷ್ ಮಾಡಿ ಆಕಾಶಬುಟ್ಟಿಯನ್ನು ಹಾರಿ ಬಿಡಲಾಗುತ್ತದೆ. ಅದೇ ರೀತಿ, ನಿವೇದಿತಾ ಕೂಡ ಮಾಡಿದ್ದಾರೆ. ಅವರ ಜೊತೆ ಇರುವ ಯುವಕ ಕೂಡ ವಿಷ್ ಮಾಡಿರುವುದನ್ನು ನಿವೇದಿತಾ ಗೌಡ ಅವರು ಆ ವಿಡಿಯೋ ಹಾಕಿಕೊಂಡಿದ್ದು, ಆ ವಿಡಿಯೋವನ್ನ ಗಮನಿಸಬಹುದಾಗಿದೆ.

ಸದ್ಯ ಡಿವೋರ್ಸ್ ಪಡೆದ ಬಳಿಕ ರೀಲ್ಸ್‌ಗಳನ್ನ ಮಾಡುತ್ತಿರುವ ನಿವೇದಿತಾ ಗೌಡ ಅವರು, ಹೊಸ ಹುಡುಗನ ಜೊತೆಗೆ ಆಕಾಶಬುಟ್ಟಿಯನ್ನು ಹಾರಿಸುತ್ತಿರುವ ವಿಡಿಯೋವನ್ನ ಹಾಕಿಕೊಂಡಿದ್ದು, ಈ ವಿಡಿಯೋ ಅನ್ನು ಜೈ ಮದ್ದಳೇನ ಎನ್ನುವವರಿಗೆ ನಿವೇದಿತಾ ಟ್ಯಾಗ್ ಮಾಡಿದ್ದು, ಇದು ಆ ಯುವಕನ ಪ್ರೊಫೈಲ್ ಆಗಿದೆ. ಈ ಹೊಸ ಯುವಕನ ಜೊತೆ ಹೊಸ ವಿಷ್ ಮಾಡಿರುವುದಾಗಿ ಕ್ಯಾಪ್ಷನ್ ಮೂಲಕ ಕಂಡುಕೊಂಡಿರುವ ಅಭಿಮಾನಿಗಳು, ಆ ಯುವಕ ಯಾರು? ಎಂದು ಕಮೆಂಟ್ಸ್ಗಳನ್ನ ಹಾಕಿದ್ದಾರೆ.
ಇನ್ನೂ ಕ್ರಿಸ್ಮಸ್ ಆಚರಿಸುತ್ತಿರುವುದಾಗಿ ನಿವೇದಿತಾ ಗೌಡ ಅವರು ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಮತಾಂತರಗೊಂಡ್ರಾ ಎಂದು ನೆಟ್ಟಿಗರು ತಮಾಷೆ ಮಾಡ್ತಿದ್ದಾರೆ. ಇದಾಗಲೇ ಕ್ರಿಸ್ಮಸ್ನಲ್ಲಿ ವೈನ್ ಹೀರುವ ಫೋಟೋ ಒಂದನ್ನು ಇವರು ಈಗಾಗಲೇ ಅಪ್ಲೋಡ್ಮಾಡಿದ್ದರು. ಇದೀಗ ಕ್ರಿಸ್ಮಸ್ ಆಚರಿಸಲು ವಿದೇಶಕ್ಕೆ ಹೋಗಿರುವ ಕಾರಣದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ್ರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ವಿಚ್ಛೇದನದ ಬಳಿಕ ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವ ನಿವೇದಿತಾ ಗೌಡ ಅವರು, ಸಿನಿಮಾಗಳಲ್ಲಿ ನಟಿಸದಿದ್ದರೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ನಿವೇದಿತಾ ಗೌಡ ಕೂಡ ಡಿವೋರ್ಸ್ ಬಳಿಕ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್ ಆಗ್ತಿರೋ ನಟಿಯರು ಪೈಕಿ ನಿವೇದಿತಾ ಗೌಡ ಅವರು ಕೂಡ ಒಬ್ಬರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ ಡಿವೋರ್ಸ್ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ ಎಂದು ಕಮೆಂಟ್ಸ್ ಮಾಡಿ ನಿವೇದಿತಾ ಗೌಡ ಅವರಿಗೆ ತೇಜೋವಧೆ ಮಾಡಲಾಗುತ್ತಿದೆ.












Click it and Unblock the Notifications